Thursday, December 9, 2021

ಹಲಸು ರಂಗದ ಹೊಸತು ಪುಸ್ತಕ.... ಅನ್ನದ ಮರ (ಹಲಸು ಈಗ ಜಗದಗಲ)

ಹಲಸು ರಂಗದ ಹೊಸತು ಪುಸ್ತಕ.... ಅನ್ನದ ಮರ (ಹಲಸು ಈಗ ಜಗದಗಲ)

ಲೇ : ನಾ. ಕಾರಂತ ಪೆರಾಜೆ

ಬೆಲೆ ರೂ. 120 + 20 (ನೋಂದಾಯಿತ ಅಂಚೆವೆಚ್ಚ)

ಹೂರಣ : * ಹಲಸು ಆಂದೋಳನ * ಹಲಸಿನ ರಾಯಭಾರಿ * ಚಕ್ಕವಂಡಿ * ದೇವರ ನಾಡಲ್ಲಿ ಹಲಸಿಗೆ ರಾಜ ಕಿರೀಟ * ಅನಾಥ ಹಲಸಿಗೆ ಮಾನ ನೀಡಿದ ಉಪಕುಲಪತಿ * ಅಸೀಸ್ ಯುವಕನನ್ನು ಸೆಳೆದ ಹಲಸು * ಸಸ್ಯಮಾಂಸ * ಆರಾಧನೆಗೆ ಥಳಕು * ಉಪ್ಪುಸೊಳೆ ಉದ್ಯಮ * ಜಾಫಿ * ಚೇಳೂರು ಸಂತೆ * ಕಣ್ಣು ಕಸಿ * ಹಲಸು ಸ್ನೇಹಿ ಕೂಟ * ಮೌನೀಶರ ಹಲಸಿನಂಗಡಿ * ಸಾಟ್ * ಹಲ್ವ ತಯಾರಿ... ಹೀಗೆ ಸಮೃದ್ಧ.

......ನೀವಲ್ಲದೆ ಇನ್ನಾರು ಪ್ರೋತ್ಸಾಹಿಸಬೇಕು.... ...ನಿಮ್ಮ ಹತ್ತಿರದ ಶೈಕ್ಷಣಿಕ ಸಂಸ್ಥೆಗಳಿಗೆ, ಶುಭ ಸಮಾರಂಭಗಳಿಗೆ ಪುಸ್ತಕವನ್ನು ಉಡುಗೊರೆ ನೀಡಬಹುದು.... ಪುಸ್ತಕ ಪಡೆಯಲು ಪಾವತಿಗಾಗಿ ಸುಲಭೋಪಾಯ ಇಲ್ಲಿದೆ.....

Bank Details: 1

Name : Narayana Karantha

Bank : Ujjivan Small Finance Bank, Puttur Branch, (Karnataka, D.K.Dist)

S.B.A/c . No. 1701110010051749

IFSC : UJVN0001701

OR 

Bank Details : 2

 Name : Narayana Karantha

Bank :  Canara Bank, Puttur (Karnataka – D.K.Dist)

S.B.A/c No. 0615101028712

IFSC Code – CNRB 0000615

ಪಾವತಿಯ ಬಳಿಕ ನಿಮ್ಮ ವಿಳಾಸವನ್ನು 94486 25794 ವಾಟ್ಸಾಪ್ ನಂಬರಿಗೆ ಕಳುಹಿಸಿರಿ. ಪುಸ್ತಕವನ್ನು ರಿಜಿಸ್ಟರ್ಡ್ ಅಂಚೆಯಲ್ಲಿ ಕಳುಹಿಸುತ್ತೇನೆ. 

-----------------------------------------------------------------------------------------------------------------------

ಅನ್ನದ ಮರದ ಪುಸ್ತಕಕ್ಕೆ ಹಿರಿಯ ಪತ್ರಕರ್ತ ಅಡ್ಡೂರು ಕೃಷ್ಣ ರಾವ್ ಮುನ್ನುಡಿ ಬರೆದಿದ್ದಾರೆ. ಮುನ್ನುಡಿಯ ಕೆಲವು ಪ್ಯಾರಾಗಳು ನಿಮಗಾಗಿ.......

'ಅಡಿಕೆ ಪತ್ರಿಕೆ'ಯಲ್ಲಿ ನಾ. ಕಾರಂತರ ಅನುಭವ ಮೂರು ದಶಕಗಳ ದೀರ್ಘ ಅವಧಿಯದ್ದು. ಕೃಷಿರಂಗಕ್ಕೆ ಸಂಬಂಧಿಸಿದ ವಿವಿಧ ಸಂಗತಿಗಳ ಬಗ್ಗೆ 'ಅಡಿಕೆ ಪತ್ರಿಕೆ'ಯಲ್ಲಿ ಮತ್ತು ವಿವಿಧ ಪತ್ರಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆದ ಪಳಗಿದ ಕೈ ಅವರದು. ತಮ್ಮ ಆಯ್ದ ಕೃಷಿ ಲೇಖನಗಳನ್ನು ಹದಿನೆಂಟು ಪುಸ್ತಕಗಳಾಗಿಯೂ ಪ್ರಕಟಿಸಿದವರು. ಈ ಅನುಭವವೇ 'ಅನ್ನದ ಮರ' ಪುಸ್ತಕದ ಪ್ರತಿಯೊಂದು ಅಧ್ಯಾಯದ ಲೀಲಾಜಾಲ ಬರಹಕ್ಕೆ ಕಾರಣವಾಗಿದೆ.

ಈ ಪುಸ್ತಕದ ಬರಹಗಳ ಬಗ್ಗೆ ಗಮನಿಸಬೇಕಾದ ಎರಡು ಸಂಗತಿಗಳು: ವಿಷಯ ದಟ್ಟತೆ ಮತ್ತು ಭಾಷೆ. ಪ್ರತಿಯೊಂದು ಅಧ್ಯಾಯದ ಬರವಣಿಗೆಗಾಗಿ ಅವರು ಫೋನ್, ವಾಟ್ಸಾಪ್, ಮಿಂಚಂಚೆ ಮತ್ತು ಕ್ಷೇತ್ರಭೇಟಿಗಳ ಮೂಲಕ ವಿಷಯ ಸಂಗ್ರಹ ಮಾಡಿದ್ದು ಎದ್ದು ಕಾಣಿಸುತ್ತದೆ. ಕೃಷಿತಜ್ಞರು ಎನಿಸಿಕೊಂಡ ಹಲವರ ಕೃಷಿ ಬರಹಗಳನ್ನು ಓದಲು ಕಷ್ಟ ಪಡಬೇಕಾಗುತ್ತದೆ. ಯಾಕೆಂದರೆ, ಅವುಗಳಲ್ಲಿ ಅಪ್ರಸ್ತುತ ಅಂಕೆಸಂಖ್ಯೆಗಳು, ಅನಗತ್ಯ ತಾಂತ್ರಿಕ ವಿವರಗಳು ತುಂಬಿರುತ್ತವೆ. ಅವುಗಳ ಭಾಷೆ ಹೇಗಿರುತ್ತದೆ ಎಂದರೆ, ಓದುವ ಆಸಕ್ತಿಯೇ ಇಲ್ಲವಾಗುತ್ತದೆ. ಆದರೆ, ನಾ. ಕಾರಂತರದು ಚುರುಕಿನ ಭಾಷೆ, ಬರವಣಿಗೆಯಲ್ಲಿ ಆಪ್ತವೆನಿಸುವ ಲಯ. ಇದಕ್ಕೆ ಅವರ ಯಕ್ಷಗಾನದ ಹಿನ್ನೆಲೆ ಮತ್ತು ಸಾಂಗತ್ಯ ಕಾರಣ ಎನ್ನಬಹುದು.

ಹಲಸು ಬೆಳೆ, ಮೌಲ್ಯವರ್ಧನೆ, ಮಾರಾಟಗಾರಿಕೆ ಬಗ್ಗೆ ಕೆಲವು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. 'ಅನ್ನದ ಮರ' ಅವೆಲ್ಲವುಗಳಿಗಿಂತ ಭಿನ್ನವಾಗಿದೆ. ಯಾಕೆಂದರೆ, ಇದರಲ್ಲಿರುವುದು ಒಂದು ದಶಕ ಮೀರಿದ 'ಹಲಸು ಆಂದೋಲನ'ದಲ್ಲಿ ಉತ್ಸಾಹದಿಂದ ಭಾಗವಹಿಸಿದ ಲೇಖಕರ ಭಟ್ಟಿ ಇಳಿಸಿದ ಗಟ್ಟಿ ಅನುಭವ. ಅದನ್ನು ಲವಲವಿಕೆಯ ಭಾಷೆಯಲ್ಲಿ ಕಟ್ಟಿಕೊಟ್ಟಿರುವ ಬರಹಗಳು. 'ಹಾಗಾದೀತು, ಹೀಗಾದೀತು' ಎನ್ನುವ ಬದಲಾಗಿ, 'ಹೀಗಾಗಿದೆ. ಪುರಾವೆ ಬೇಕಾದರೆ, ಇದೋ ಇಲ್ಲಿವೆ ಸಂಪರ್ಕ ವಿವರಗಳು' ಎಂಬ ಮಾಹಿತಿ ಖಜಾನೆ. ಕೃಷಿ ಆಂದೋಲನವೊಂದನ್ನು ಹೇಗೆ ದಾಖಲಿಸಬಹುದು ಎಂಬುದಕ್ಕೊಂದು ಮಾದರಿ ಒದಗಿಸಿರುವುದು ಲೇಖಕರ ಸಾಧನೆ.

-------------------------------------------------------------------------------------------------

ಪುತ್ತೂರು ಮರಿಕೆಯ .ಪಿ.ಸದಾಶಿವರುಅನ್ನದ ಮರಪುಸ್ತಕವನ್ನು ಹೀಗೆ ನೋಡುತ್ತಾರೆ....

ಅನ್ನದ ಮರವನ್ನು ಕೈಯಲ್ಲಿ ಹಿಡಿದು ಕುಳಿತೆ. ಕಾಲು ಗಂಟೆಯ ಊಟಕ್ಕೆ ಮಾತ್ರ ವಿಶ್ರಾಂತಿ. ಓದಿ ಮುಗಿಸಿದೆ. ಅಡಿಕೆ ಪತ್ರಿಕೆಯ ಹಲಸು ಆಂದೋಲನದಿಂದ ಆರಂಭಿಸಿ, ಕ್ಯಾಂಪ್ಕೋ ಚಾಕಲೇಟು ವರೆಗಿನ ಹಲಸು ಆಂದೋಲನದ ಹಿನ್ನೆಲೆಯನ್ನು ತುಂಬಾ ಚೆನ್ನಾಗಿ ವಿವರಿಸಿದ ಲೇಖನಗಳು. ಆಸ್ಟ್ರೇಲಿಯಾದ ಹುಡುಗ ಬಂದಿದ್ದ ಕಥೆ ನನಗೆ ಮರೆತೇ ಹೋಗಿದೆ. ಮತ್ತೆ ಹಳೆಯದೆಲ್ಲವನ್ನೂ ನೆನಪು ಮಾಡಿದ ಲೇಖನಗಳ ಗುಚ್ಚಕ್ಕೆ ನಮನಗಳು. ಹಳೆಯ ಕಥೆಗಳನ್ನೆಲ್ಲಾ ಹೊಸ ಓದುಗರಿಗೆ ಕೊಟ್ಟ ನಿಮಗೆ ಧನ್ಯವಾದಗಳು.”

ಯಕ್ಷಗಾನ ಪುಸ್ತಕಗಳು…. ಕೆಲವೇ ಪ್ರತಿಗಳಿವೆಯಷ್ಟೇ……

ಸುಮನಸ : (ಯಕ್ಷಹಾರದಲ್ಲಿ ಹೊಳೆವ ಮುತ್ತುಗಳು) ಯಕ್ಷ ಕಲಾವಿದರ ವ್ಯಕ್ತಿ ಪರಿಚಯ. ಶೇಣಿ, ಸಾಮಗ, ಚಿಪ್ಪಾರು, ಕುಬಣೂರು, ಚಿಟ್ಟಾಣಿ, ದಾಸರಬೈಲು, ಅಡೂರು, ಅಳಿಕೆ, ತಲೆಂಗಳ, ಅಂಬೆಮೂಲೆ, ಸಿದ್ಧಕಟ್ಟೆ ಹೀಗೆ ಸ್ಮೃತಿ ಪುಟಗಳು.. ಸಮಾಹಿತ ಅಧ್ಯಾಯದಲ್ಲಿ.. ಬಲಿಪರು, ಮೂಡಂಬೈಲು, ಪಾತಾಳ, ಪೆರುವೋಡಿ, ಪದ್ಯಾಣ ಸೂರಿಕುಮೇರು, ಕುರಿಯ, ಅಮ್ಮಣ್ಣಾಯರು, ಪುತ್ತಿಗೆ ಹೊಳ್ಳರು, ಕುಂಬಳೆ, ಮುಳಿಯಾಲ, ಕೊಕ್ಕಡ, ವಂಡ್ಸೆ...       ಬೆಲೆ ರೂ.150. + regd post Rs.20

ಅಡ್ಡಿಗೆ : (ಯಕ್ಷ ಯವನಿಕೆಯ ಸುತ್ತಮುತ್ತ).. 38 ಲೇಖನಗಳ ಗುಚ್ಚ ಕೆಲವು ಲೇಖನಗಳು - ಬಪ್ಪ ಸಾರಿದ ಸಹಿಷ್ಣುತೆ, ಬಾಹುಕನ ಭಾಹುಕ ಅಂತರಂಗ, ಕಾಫಿ ನಾಡಿನಲ್ಲರಳಿದ ಪಾಪಣ್ಣ, ಅಯ್ಯಪ್ಪ ಆಖ್ಯಾನಕ್ಕೆ ಅರ್ಧ ಶತಮಾನ, ಕೆನಡಾ ಯಕ್ಷಮಿತ್ರದ ಅರ್ಥಪೂರ್ಣ ಪಯಣ, ಅಮೇರಿಕಾದಲ್ಲಿ ತಾಳಮದ್ದಳೆಯ ಹಸಿವು, ಬಣ್ಣದ ರಂಗಿನೊಳಗೆ ಬಿನ್ನಾಣ, ಗೌಜಿಯ ಅಲೆಯೊಳಗೆ ರಂಗ ನರಳಾಟ, ಚಿತ್ರ ಸಾರಿದ ಯಕ್ಷಪಯಣ ಬೆಲೆ Rs. 100.  + regd post Rs.20 (ಅಡ್ಡಿಗೆ ಮತ್ತು ಮಣಿಸರ ಎರಡು ಪುಸ್ತಕಗಳ ಲೇಖನಗಳು ಹಿಂದೆ ಪ್ರಜಾವಾಣಿಯಲ್ಲಿ ಅಂಕಣಗಳಾಗಿ ಪ್ರಕಟವಾಗಿವೆ. ಎರಡು ಪುಸ್ತಕಗಳು ತಮ್ಮಲ್ಲಿದ್ದರೆ ಕಳೆದೊಂದು ದಶಕಗಳ ಯಕ್ಷಪಲ್ಲಟಗಳು ನೋಟ ಸಿಗುತ್ತವೆ.)