Wednesday, September 9, 2020

“ಜಾಗತಿಕ ಬದಲಾವಣೆಗೆ ತಕ್ಷಣ ಸ್ಪಂದಿಸುತ್ತಿದ್ದ ಉತ್ಸಾಹಿ ಕೃಷಿಕ” - ಎಸ್ ಆರ್ ಸತೀಶ್ಚಂದ್ರ




ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಮಂಚಿ ಶ್ರೀನಿವಾಸ್ಆಚಾರ್ಅವರಿಗೆ ಶ್ರದ್ಧಾಂಜಲಿ ಸಭೆ

“ಮಂಚಿ ಶ್ರೀನಿವಾಸ ಆಚಾರ್ಅವರು ಕೃಷಿ ಸೇರಿದಂತೆ ವಿವಿಧ ಉದ್ಯಮಗಳಲ್ಲಿನ ಭವಿಷ್ಯದ ಬದಲಾವಣೆ ಹಾಗೂ ಸಾಧ್ಯತೆಗಳ ಬಗ್ಗೆ ಸದಾ ಯೋಚಿಸಿ ಸ್ಪಂದಿಸುತ್ತಿದ್ದ ಉತ್ಸಾಹಿ ಕೃಷಿಕರಾಗಿದ್ದರುಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್ಆರ್ಸತೀಶ್ಚಂದ್ರ ಹೇಳಿದರು.

ಅವರು ಸೆಪ್ಟೆಂಬರ್ 7ರಂದು ಸೋಮವಾರ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಚೇರಿಯಲ್ಲಿ  ಫಾರ್ಮರ್ ಫಸ್ಟ್ಟ್ರಸ್ಟ್ಸಹಯೋಗದೊಂದಿಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಮಂಚಿ ಶ್ರೀನಿವಾಸ್ಆಚಾರ್ಅವರಿಗೆ ನಡೆದ  ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು. “ಯಾವಾಗಲೂ ಧನಾತ್ಮಕ ಯೋಚನೆಯಲ್ಲಿಯೇ ಕೆಲಸ ಮಾಡುತ್ತಾ ಇತರರಿಗೂ ಪ್ರೇರಣೆಯಾದ ಮಂಚಿ ಶ್ರೀನಿವಾಸ ಆಚಾರ್ಅವರು ಕೃಷಿಕರಲ್ಲಿ  ಉತ್ತೇಜನ ತುಂಬಿದವರು. ಜಾಗತಿಕ ಮಟ್ಟದ ಬದಲಾವಣೆಗಳಿಗೆ ಬಗ್ಗೆ ತಕ್ಷಣ ಸ್ಪಂದಿಸುತ್ತಿದ್ದ ಮಂಚಿ ಶ್ರೀನಿವಾಸ್ಆಚಾರ್ಅವರು ಅಡಿಕೆ ಬೆಳೆಗಾರರನ್ನು ಸಂಘದ ಮೂಲಕ ಉತ್ತೇಜಿಸುತ್ತಿದ್ದರು. ಕ್ಯಾಂಪ್ಕೋ ಸಂಸ್ಥೆಯ ತಾಯಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವಾಗಿದ್ದು ನೆಲೆಯಲ್ಲಿ ಕ್ಯಾಂಪ್ಕೋ ಸಂಸ್ಥೆಗೂ ಮಂಚಿ ಶ್ರೀನಿವಾಸ ಆಚಾರ್ಸ್ಫೂರ್ತಿ ತುಂಬುತ್ತಿದ್ದರು” ಎಂದು  ಹೇಳಿದರು.

ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿಮಂಚಿ ಶ್ರೀನಿವಾಸ್ಆಚಾರ್ಅವರು ಪಾರದರ್ಶಕವಾಗಿ, ಸ್ನೇಹಜೀವಿಯಾಗಿ ಬದುಕಿದವರು. ಎಲ್ಲರಿಗೂ ಮಾದರಿಯಾಗಿ , ಸ್ನೇಹದಿಂದಲೇ ಸಮಾಜವನ್ನು ಗೆದ್ದವರುಎಂದು ಹೇಳಿದರು.

ಫಾರ್ಮರ್ ಫಸ್ಟ್ಟ್ರಸ್ಟ್ಉಪಾಧ್ಯಕ್ಷ ಪಡಾರು ರಾಮಕೃಷ್ಣ ಶಾಸ್ತ್ರಿ ಮಾತನಾಡಿ,” ಮಂಚಿ ಶ್ರೀನಿವಾಸ ಆಚಾರ್ಅವರಿಗೆ ಸ್ಪಷ್ಟವಾದ ಗುರಿ, ಯೋಜನೆ ಹಾಗೂ ಯೋಚನೆ ಇತ್ತು. ಅವರ ಎಲ್ಲಾ ನಿರ್ಧಾರಗಳೂ ಮಾದರಿಯಾಗಿತ್ತು, ಅಡಿಕೆ ಬೆಳೆಗಾರರ ಹಿತಕ್ಕಾಗಿ ಅವರು ವಿವಿಧ ಮಾದರಿ ನಡೆಗಳನ್ನು ಅನುಸರಿಸಿದ್ದರು” ಎಂದರು.


ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷರುಗಳಾದ ಎಂ ಜಿ ಸತ್ಯನಾರಾಯಣ, ಕೆ.ವಿಶ್ವನಾಥ ರಾವ್‌ , ಫಾರ್ಮರ್ ಫಸ್ಟ್ಟ್ರಸ್ಟ್ಕಾರ್ಯದರ್ಶಿ ಶಂಕರ್ಸಾರಡ್ಕ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸದಸ್ಯರಾದ ರವಿಕಿರಣ ಪುಣಚ ನುಡಿನಮನ ಸಲ್ಲಿಸಿದರು. ಸಂದರ್ಭ ಸಂಘದ ಅಧ್ಯಕ್ಷ ಅಶೋಕ್ಕಿನಿಲ, ಕಾರ್ಯದರ್ಶಿ ಮಹೇಶ್ಪುಚ್ಚಪ್ಪಾಡಿ, ಕ್ಯಾಂಪ್ಕೋ ನಿರ್ದೇಶಕ ಎಸ್ಭಟ್‌, ಎಆರ್ಡಿಎಫ್‌  ಟ್ರಸ್ಟಿ ಬದನಾಜೆ ಶಂಕರ ಭಟ್ಮೊದಲಾದವರು ಉಪಸ್ಥಿತರಿದ್ದರು.

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ಕಿನಿಲ ಸ್ವಾಗತಿಸಿದರು.  ನಾ.ಕಾರಂತ ಪೆರಾಜೆ ಶ್ರದ್ದಾಂಜಲಿ ಪತ್ರ ವಾಚಿಸಿದರು.  ಕಾರ್ಯದರ್ಶಿ ಮಹೇಶ್ಪುಚ್ಚಪ್ಪಾಡಿ ನಿರೂಪಿಸಿ ವಂದಿಸಿದರು.