About Me


ನಾನು ನಾರಾಯಣ ಕಾರಂತ. ಕಾವ್ಯ ನಾಮ 'ನಾ.ಕಾರಂತ ಪೆರಾಜೆ'. ಹುಟ್ಟೂರು ಸುಳ್ಯ ಸನಿಹದ ಪೆರಾಜೆ. ಮಂಗಳೂರಿನಲ್ಲಿ ವೃತ್ತಿ ಆರಂಭ. ನಂತರ ಪುತ್ತೂರಿಗೆ ವಲಸೆ. ಪ್ರಸ್ತುತ ಪುತ್ತೂರಿನ ಪಾರ್ಮರ್ ಫಸ್ಟ್ ಟ್ರಸ್ಟ್ ಪ್ರಕಾಶಿಸುತ್ತಿರುವ 'ಅಡಿಕೆ ಪತ್ರಿಕೆ'ಯಲ್ಲಿ ಸಹಾಯಕ ಸಂಪಾದಕ. ಒಂದರ್ಧ ದಶಕ ಯಕ್ಷಗಾನದಲ್ಲಿ ಕಾಲಯಾಪನೆ!

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಪ್ರತಿಷ್ಠಿತ 'ರಾಜ್ಯ ಮಟ್ಟದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ', ಬೆಂಗಳೂರಿನ ಸಿಡಿಎಲ್ ನೀಡುವ 'ಚರಕ ಪ್ರಶಸ್ತಿ', ಮಂಗಳೂರಿನ 'ಪ.ಗೋ.ಪ್ರಶಸ್ತಿ', ಮೈಸೂರಿನ ಪತ್ರಕರ್ತರ ಸಂಘ ನೀಡುವ 'ಮುರುಘಾಶ್ರೀ'ಪ್ರಶಸ್ತಿ', ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮೀಣ ವರದಿಗಾರಿಕೆಗೆ ನೀಡುವ 'ಮಂಡಿಬೆಲೆ ಶ್ಯಾಮಣ್ಣ ಪ್ರಶಸ್ತಿ-೨೦೦೮,‘ಗ್ರಾಮೀಣ ಪತ್ರಿಕೋದ್ಯಮ’ ವಿಭಾಗದಲ್ಲಿ ದಕ್ಶಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-೨೦೧೦,
ಕರ್ನಾಟಕ ಸರಕಾರದ ವಾರ್ತಾ ಇಲಾಖೆಯ 2010ರ 'ಪರಿಸರ ಪತ್ರಿಕೋದ್ಯಮ ಪ್ರಶಸ್ತಿ’.
 ಪ್ರಶಸ್ತಿಗಳು ಬೆನ್ನೇರಿವೆ.

 'ಸಾಮಗ ಪಡಿದನಿ' ಕೃತಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ.

ಶೇಣಿ ದರ್ಶನ, ಶೇಣಿ ಚಿಂತನ, ನುಡಿನಮನ, ಹಾಸ್ಯಗಾರನ ಅಂತರಂಗ, ಯಕ್ಷಕೋಗಿಲೆ, ತಳಿ ತಪಸ್ವಿ, ಅಂತಿಕ, ಹಸಿರು ಮಾತು, ಕಾಡು ಮಾವು, ಸಾಮಗ ಪಡಿದನಿ, ಮಾಂಬಳ, ಮತ್ತು ಮಣ್ಣಮಿಡಿತ - ಪ್ರಕಟಿತ ಕೃತಿಗಳು.

ವಿಳಾಸ :
ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು - ೫೭೪ ೨೦೧ (ದ.ಕ.)
ಚಲನವಾಣಿ : 9448625794
karanth2005@gmail.com 

0 comments:

Post a Comment