ಪ್ರಿಯ ಅಕ್ಷರ ಪ್ರೇಮಿಗಳಿಗೆ… ನಮಸ್ಕಾರ…..
ಕೃಷಿ ಕತೆ-ಕೃಷಿಕರ ಕತೆ : ಇದು ಕೃಷಿ ಸಂಬಂಧಿ ಪುಸ್ತಕ. ಕೃಷಿಯೊಂದಿಗೆ ಕೃಷಿಕರ ಬದುಕು ಎಂದೂ ಮಾತನಾಡುವುದಿಲ್ಲ! ಅಂತಹ ಮೌನದ ಬದುಕಿಗೆ ಮಾತನ್ನು ಕೊಡುವ ಯತ್ನ ಪುಸ್ತಕದಲ್ಲಾಗಿವೆ. ಇದು ನಿಮ್ಮಲ್ಲಿ ಇರಲೇಬೇಕಾದ ಪುಸ್ತಕ. ಕೃಷಿಯೂ ಒಂದು ಕಲೆಯಲ್ವಾ.. ಕೃಷಿಕ ಕೂಡಾ ಕಲಾವಿದನೇ ಪಾಸಿಟಿವ್ ಯೋಚನೆಯ ಕೃಷಿಕರ ಬದುಕನ್ನು ತೆರೆದಿಟ್ಟ ಪುಸ್ತಕ. ಬೆಲೆ ರೂ. 170
‘ಜೀವಧಾನ್ಯ’ – ಇದು ಭತ್ತದ ಕೃಷಿಯ ವರ್ತಮಾನದ ನೋಟ, ಮೂವತ್ತಕ್ಕೂ ಅಧಿಕ ತಳಿಗಳ ವಿವರಗಳಿವೆ. ಭತ್ತ ಬಳೆದು ಯಶ ಕಂಡವರ ಅನುಭವ ಕಥನಗಳಿವೆ. ಮುನ್ನೂರು ತಳಿಗಳ ಭತ್ತದ ತಿಜೋರಿ, ಶ್ರಮದ ಬದುಕಿಗೆ ಕಾವುಕೊಟ್ಟ ತಳಿ ಸಂಗ್ರಹ, ಕಬ್ಬಿನ ನಾಡಲ್ಲಿ ಭತ್ತದ ಕಣಜ, ಭತ್ತದ ಕಾಳಿಗೆ ಮುತ್ತಿನ ಬೆಲೆ, ಅನ್ನದ ಬರದ ಬಿಸಿ...ಹೀಗೆ ತುಂಬು ಹೂರಣಗಳು. ಪುಸ್ತಕವನ್ನು ಪುತ್ತೂರಿನ ನವತೇಜ ಟ್ರಸ್ಟ್ ಪ್ರಕಾಶಿಸಿದೆ. ಬೆಲೆ ರೂ. 100
-------------------------------------------------------------------------------------------
ಯಕ್ಷಗಾನ ಪುಸ್ತಕಗಳು…. ಕೆಲವೇ ಪ್ರತಿಗಳಿವೆಯಷ್ಟೇ……
ಸುಮನಸ : (ಯಕ್ಷಹಾರದಲ್ಲಿ ಹೊಳೆವ ಮುತ್ತುಗಳು) ಯಕ್ಷ ಕಲಾವಿದರ ವ್ಯಕ್ತಿ ಪರಿಚಯ. ಶೇಣಿ, ಸಾಮಗ, ಚಿಪ್ಪಾರು, ಕುಬಣೂರು, ಚಿಟ್ಟಾಣಿ, ದಾಸರಬೈಲು, ಅಡೂರು, ಅಳಿಕೆ, ತಲೆಂಗಳ, ಅಂಬೆಮೂಲೆ, ಸಿದ್ಧಕಟ್ಟೆ ಹೀಗೆ ಸ್ಮೃತಿ ಪುಟಗಳು.. ಸಮಾಹಿತ ಅಧ್ಯಾಯದಲ್ಲಿ.. ಬಲಿಪರು, ಮೂಡಂಬೈಲು, ಪಾತಾಳ, ಪೆರುವೋಡಿ, ಪದ್ಯಾಣ ಸೂರಿಕುಮೇರು, ಕುರಿಯ, ಅಮ್ಮಣ್ಣಾಯರು, ಪುತ್ತಿಗೆ ಹೊಳ್ಳರು, ಕುಂಬಳೆ, ಮುಳಿಯಾಲ, ಕೊಕ್ಕಡ, ವಂಡ್ಸೆ... ಬೆಲೆ ರೂ.150.
ಅಡ್ಡಿಗೆ : (ಯಕ್ಷ ಯವನಿಕೆಯ ಸುತ್ತಮುತ್ತ).. 38 ಲೇಖನಗಳ ಗುಚ್ಚ ಕೆಲವು ಲೇಖನಗಳು - ಬಪ್ಪ ಸಾರಿದ ಸಹಿಷ್ಣುತೆ, ಬಾಹುಕನ ಭಾಹುಕ ಅಂತರಂಗ, ಕಾಫಿ ನಾಡಿನಲ್ಲರಳಿದ ಪಾಪಣ್ಣ, ಅಯ್ಯಪ್ಪ ಆಖ್ಯಾನಕ್ಕೆ ಅರ್ಧ ಶತಮಾನ, ಕೆನಡಾ ಯಕ್ಷಮಿತ್ರದ ಅರ್ಥಪೂರ್ಣ ಪಯಣ, ಅಮೇರಿಕಾದಲ್ಲಿ ತಾಳಮದ್ದಳೆಯ ಹಸಿವು, ಬಣ್ಣದ ರಂಗಿನೊಳಗೆ ಬಿನ್ನಾಣ, ಗೌಜಿಯ ಅಲೆಯೊಳಗೆ ರಂಗ ನರಳಾಟ, ಚಿತ್ರ ಸಾರಿದ ಯಕ್ಷಪಯಣ ಬೆಲೆ Rs. 100. (ಅಡ್ಡಿಗೆ ಮತ್ತು ಮಣಿಸರ ಈ ಎರಡು ಪುಸ್ತಕಗಳ ಲೇಖನಗಳು ಹಿಂದೆ ಪ್ರಜಾವಾಣಿಯಲ್ಲಿ ಅಂಕಣಗಳಾಗಿ ಪ್ರಕಟವಾಗಿವೆ. ಈ ಎರಡು ಪುಸ್ತಕಗಳು ತಮ್ಮಲ್ಲಿದ್ದರೆ ಕಳೆದೊಂದು ದಶಕಗಳ ಯಕ್ಷಪಲ್ಲಟಗಳು ನೋಟ ಸಿಗುತ್ತವೆ.)
ಮಣಿಸರ : (ಯಕ್ಷಗಾನದ ಒಳಸುಳಿಯೊಳಗೆ ಒಂದು ಇಣುಕು ನೋಟ) - 37 ಲೇಖನಗಳ ಗುಚ್ಛ. ಯಕ್ಷಗಾನದ ಸಮಸಾಮಯಿಕ ವಿಚಾರಗಳ ಮಂಥನ. ಮೌನದ ಮಾತಿಗೆ ಅಕ್ಷರಗಳ ತೋರಣ,,,, ಮಣಿಸರದಲ್ಲಿರುವ ಕೆೆಲವು ಲೇಖನಗಳು - ಸಂಭ್ರಮಗಳ ಮಧ್ಯೆ ಯಕ್ಷಗಾನ ಸೆಕೆಂಡರಿಯಗುತ್ತದೆ, ಭಾವಕೋಶದೊಳಗೆ ಜಾರಲು ಪಾತ್ರಗಳು ಅಂಜುತ್ತಿವೆ, ಪಾತ್ರಗಳಿಗೆ ಪ್ರತಿಭಟನೆಯ ಭಯ, ಸೀನಿಯರ್ ಪದದ ಅರ್ಥ ದಿಗಂತವ್ಯಾಪ್ತಿಯಲ್ಲ..ಅಬ್ಬರದ ಅಲೆಯೊಳಗೆ ಕಲೆಯ ಒದ್ದಾಟ, ಪ್ರಸಂಗ ಪುಸ್ತಕವು ಕಲಾವಿದನ ಗೀತೆ, ಬಣ್ಣದ ಮನೆಯ ಕಾಣದ ಬಣ್ಣಗಳು, ಬೊಂಬೆಗಳು ತೋರಿದ ಭಾರತೀಯ ಸಂಸ್ಕೃತಿ... ಬೆಲೆ ರೂ.120
ಪುಸ್ತಕದ ಕುರಿತು ನೀವು ಅಸಕ್ತರೇ? ವಾಟ್ಸಾಪ್ ಮಾಡಿ 94486 25794.
ಪುಸ್ತಕ ಪಡೆಯಲು ಪಾವತಿಗಾಗಿ ಸುಲಭೋಪಾಯ ಇಲ್ಲಿದೆ.....
Bank Details:
Name : Narayana Karantha
Bank : Ujjivan Small Finance Bank, Puttur Branch, (Karnataka, D.K.Dist)
S.B.A/c . No. 1701110010051749
IFSC : UJVN0001701
OR
Bank Details :
Name : Narayana Karantha
Bank : Canara Bank, Puttur (Karnataka – D.K.Dist)
S.B.A/c No. 0615101028712
IFSC Code – CNRB 0000615
ಪಾವತಿಯ ಬಳಿಕ ನಿಮ್ಮ ವಿಳಾಸವನ್ನು 94486 25794 ಈ ವಾಟ್ಸಾಪ್ ನಂಬರಿಗೆ ಕಳುಹಿಸಿರಿ. ಪುಸ್ತಕವನ್ನು ರಿಜಿಸ್ಟರ್ಡ್ ಅಂಚೆಯಲ್ಲಿ ಕಳುಹಿಸುತ್ತೇವೆ.