ಕೋವಿಡ್ ಯುಗದಲ್ಲಿ ಕನ್ನಾಡು ಅನ್ಯಾನ್ಯ ಕ್ಷೇತ್ರದ ಅನೇಕ ಪ್ರತಿಭಾವಂತರನ್ನು ಕಳೆದುಕೊಂಡಿದೆ. ಇದಕ್ಕೆ ಯಕ್ಷಗಾನವೂ ಹೊರತಲ್ಲ. ಯಕ್ಷಗಾನ ಕ್ಷೇತ್ರದಲ್ಲಿ ಸ್ವಂತಿಕೆಯ ಛಾಪನ್ನು ಊರಿದ, ಮಾದರಿಗಳನ್ನು ಸೃಷ್ಟಿಸಿದ, ಹೊಸ ಶೈಲಿಯನ್ನು ರೂಪಿಸಿದ, ಯಕ್ಷಗಾನವನ್ನೇ ಉಸಿರಾಗಿಸಿದ ಪ್ರಾತಿನಿಧಕ ಚೇತನಗಳ ಬದುಕನ್ನು ‘ಅಮರಾವತಿ’ಯಲ್ಲಿ ಹಿಡಿದಿಡಲಾಗಿದೆ. ಅವರು ಜೀವಿಸಿದ್ದಾಗ ಅವರೊಂದಿಗೆ ಮಾಡಿದ ಸಂದರ್ಶನ, ಮಾತುಕತೆಗಳಿಗೆ ಅಕ್ಷರದ ಮೂಲಕ ಮಾತು ನೀಡಲಾಗಿದೆ. ಇವರೆಲ್ಲರೂ ನಮ್ಮ ಮರೆವಿನ ಲೋಕದಿಂದ ಮಾಯವಾಗದಿರಲಿ. ಹೊಸ ಪೀಳಿಗೆಗೆ ಆದರ್ಶವಾಗಲಿ.
ಈ ಕೃತಿಯಲ್ಲಿ ಯಾರೆಲ್ಲಾ ಇದ್ದಾರೆ:
* ಪೂಜ್ಯ ಶ್ರೀ ಎಡನೀರು ಶ್ರೀಗಳ
ಸ್ಮೃತಿ
* ಶೇಣಿ ಗೋಪಾಲಕೃಷ್ಣರ ಚಿಂತನಾ ನೆನಪು
* ಸಿಡಿಲಮರಿ ಪುತ್ತೂರು ಶ್ರೀಧರ ಭಂಡಾರಿ * ಪದಗಳೇ ಪಾತ್ರವಾಗುವ ಪದ್ಯಾಣ ಗಣಪತಿ ಭಟ್ * ಮಾಣಿಕ್ಯ
ಪುಂಜ ಬೊಟ್ಟಿಕೆರೆ ಪುರುಷೋತ್ತಮ ಪೂಂಜ * ಮೋಹಸಿರಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ * ಛಾಂದಸ
ಗುರು ಡಾ.ಎನ್.ನಾರಾಯಣ ಶೆಟ್ಟಿ * ರಂಗಸೊಬಗಿನ ಅಭಿವ್ಯಕ್ತಿ ವಂಡ್ಸೆ ನಾರಾಯಣ ಗಾಣಿಗ * ಮನದ ಮಾತಿಗೆ
ಅಕ್ಷರ ಯೋಗ – ಮಲ್ಪೆ ವಾಸುದೇವ ಸಾಮಗ * ಸಜ್ಜನಿಕೆ ತುಂಬಿದ ಬದುಕು – ಸಂಪಾಜೆ ಶೀನಪ್ಪ ರೈ * ಪ್ರಾತಿನಿಧಿಕ
ಕಲಾವಿದ ಮಾರ್ಗೋಳಿ ಗೋವಿಂದ ಸೇರೆಗಾರ್ * ಅಭಿವ್ಯಕ್ತಿಯಲ್ಲ, ಪಾತ್ರ – ಕುರ್ನಾಡು ಶಿವಣ್ಣ ಆಚಾರ್
* ದೇವಿ ಭಟ್ರು – ಮುಳಿಯಾಲ ಭೀಮ ಭಟ್ * ದಾಖಲೀಕರಣದ
ಸಂಪನ್ಮೂಲ – ತಲೆಂಗಳ ರಾಮಚಂದ್ರ ಭಟ್ * ನಿಯತ್ತಿನ ಕೂಟಬದ್ಧತೆ – ಬಿ.ಎಸ್.ಓಕುಣ್ಣಾಯ * ಮಂಗಳ ಹಾಡಿದ
ಸಂಚಾರಿ ಮಳಿಗೆ – ಸರಸ್ವತಿ ಕೃಷ್ಣ ಭಟ್ * ಸರ್ವಾಂಗೀಣ ಕಲಾವಿದ ರಾಮಚಂದ್ರ ಅರ್ಬಿತ್ತಾಯ * ಪ್ರತಿಭಾನ್ವಿತ
ವೇಷಧಾರಿ – ವೇಣೂರು ವಾಮನ ಕುಮಾರ್.
(ಈ ಕಾಲಘಟ್ಟದಲ್ಲಿ ಇನ್ನೂ ಒಂದಷ್ಟು
ಮಂದಿ ದೈವಾಧೀನರಾಗಿದ್ದಾರೆ. ಆದರೆ ಈ ಪುಸ್ತಕದಲ್ಲಿ ನನಗೆ ಸಂಪರ್ಕವಿದ್ದ, ಒಡನಾಟವಿರುವವರನ್ನು ಮಾತ್ರ
ಸೇರಿಸಿಕೊಂಡಿದ್ದೇನೆ.)
ಪುಸ್ತಕದ ಬೆಲೆ ರೂ. 150 + 20
(ನೋಂದಾಯಿತ ಅಂಚೆ ವೆಚ್ಚ) = ಒಟ್ಟು ರೂ.170
ಪುಸ್ತಕ ಪಡೆಯಲು ಪಾವತಿಗಾಗಿ ಸುಲಭೋಪಾಯ ಇಲ್ಲಿದೆ..... 94486 25794
– ಈ ಸಂಖ್ಯೆಗೆ
ಗೂಗಲ್ ಪೇ ಮೂಲಕ ಪಾವತಿಸಬಹುದು.
Bank Details: 1
Name : Narayana Karantha
Bank : Ujjivan Small Finance Bank, Puttur Branch, (Karnataka, D.K.Dist)
S.B.A/c . No. 1701110010051749
IFSC : UJVN0001701
OR
Bank Details : 2
Name : Narayana Karantha
Bank : Canara Bank, Puttur (Karnataka – D.K.Dist)
S.B.A/c No. 0615101028712
IFSC Code – CNRB
0000615
ಪಾವತಿಯ ಬಳಿಕ ನಿಮ್ಮ ವಿಳಾಸವನ್ನು 94486 25794 ಈ ವಾಟ್ಸಾಪ್ ನಂಬರಿಗೆ ಕಳುಹಿಸಿರಿ. ಪುಸ್ತಕವನ್ನು ರಿಜಿಸ್ಟರ್ಡ್ ಅಂಚೆಯಲ್ಲಿ ಕಳುಹಿಸುತ್ತೇನೆ.
------------------------------------------------------------------------------------------------------------------------------
ಪುಸ್ತಕ
ನಂ. 2
ಜಾಗರದ ಜೋಷಿ (ಡಾ.ಎಂ.ಪ್ರಭಾಕರ ಜೋಶಿ
ಅವರ ಕುರಿತ ಪೂರ್ವ ಪ್ರಕಟಿತ
ನುಡಿಮಾಲೆ)
ಹಿರಿಯ ವಿದ್ವಾಂಸ, ವಿಮರ್ಶಕ, ತಾಳಮದ್ದಳೆ ಅರ್ಥದಾರಿ ಡಾ.ಎಂ.ಪ್ರಭಾಕರ
ಜೋಷಿಯವರಿಗೆ 2017ರಲ್ಲಿ ಸಪ್ತತಿಯ ಸಡಗರದಲ್ಲಿ
ಬಿಡುಗಡೆಗೊಂಡ ಪುಸ್ತಕಗಳಲ್ಲಿ ಇದೂ ಒಂದು. ಜೋಶಿಯವರ
ಕುರಿತು ಕಾಲಕಾಲಕ್ಕೆ ಆತ್ಮೀಯರು ಬರೆದ ಬರಹ, ಇ-ಬರಹಗಳು, ಅವರ
ಕೃತಿಯ ಮುನ್ನುಡಿಗಳು ಇಲ್ಲಿವೆ.
ಕೆಲವೊಂದು ಬರಹಗಳು ಪ್ರಾಯಃ ಎರಡು
ದಶಕಗಳ ಹಿಂದೆ ಬರೆಯಲ್ಪಟ್ಟವು. ಇವುಗಳನ್ನು
ವರ್ತಮಾನದ ಕಣ್ಣಿಂದ ನೋಡಿದರೆ ಬೇರೆಯಾಗಿ
ಕಾಣಬಹುದು. ಆದರೆ ಬರೆದ ಕಾಲಮಾನ,
ಆಗಿನ ಯಕ್ಷಗಾನದ ಪರಿಸ್ಥಿತಿಗಳನ್ನು ಮನಸ್ಸಿಗೆ ತೆಗೆದುಕೊಂಡು ಓದಿದಾಗ ಬರಹಗಳು ಆಪ್ತವಾಗುತ್ತವೆ.
ಒಂದರ್ಥದಲ್ಲಿ ಕಳೆದ ಕಾಲದ ಕಥನ.
ಪುಸ್ತಕದ ಬೆನ್ನುಡಿಯಲ್ಲಿ ಪ್ರೊ.ಬಿ.ಎ.ವಿವೇಕ ರೈ ಹೇಳುತ್ತಾರೆ,
"ಡಾ.ಜೋಶಿಯವರು ತತ್ತ್ವಶಾಸ್ತ್ರಗಳ ವಿಮರ್ಶಾತ್ಮಕ ಅಧ್ಯಯನಗಳ ಮೂಲಕ ಕನ್ನಡದ ಒಬ್ಬ
ವೈಚಾರಿಕ ವಿದ್ವಾಂಸರಾಗಿಯೂ ಮುಖ್ಯರಾಗಿದ್ದಾರೆ. ಸಾಹಿತ್ಯ, ಕಲೆ, ಜಾನಪದ, ರಂಗಭೂಮಿ,
ಮೀಮಾಂಸೆಯ ಕ್ಷೇತ್ರಗಳನ್ನು ಅಂತರ್ ಶಿಸ್ತೀಯ ನೆಲೆಯಿಂದ
ಅಧ್ಯಯನ ಮಾಡಿದ ಮತ್ತು ಇಂದಿಗೂ
ಈ ಕ್ಷೇತ್ರಗಳ ಮಹತ್ವದ
ಸಂಪನ್ಮೂಲ ವ್ಯಕ್ತಿಯಾಗಿ ಇರುವ ಇವರು ಕರ್ನಾಟಕದ
ಬಹುಶ್ರುತ ವಿದ್ವಾಂಸರು"
ಮಂಗಳೂರಿನ
ಆಕೃತಿ ಆಶಯ ಪಬ್ಲಿಕೇಶನ್ ಅವರ
ಪ್ರಕಾಶನ. ಪುಸ್ತಕದ ಬೆಲೆ ರೂ. 180.
---------------------------------------------------------------------------------------------------------------------------
ಪುಸ್ತಕ ನಂ.3
ಹಲಸು ರಂಗದ ಹೊಸತು ಪುಸ್ತಕ.... ಅನ್ನದ ಮರ (ಹಲಸು ಈಗ ಜಗದಗಲ)
ಬೆಲೆ ರೂ.
120 + 20 (ನೋಂದಾಯಿತ ಅಂಚೆವೆಚ್ಚ)
ಹೂರಣ : *
ಹಲಸು ಆಂದೋಳನ * ಹಲಸಿನ ರಾಯಭಾರಿ * ಚಕ್ಕವಂಡಿ * ದೇವರ ನಾಡಲ್ಲಿ ಹಲಸಿಗೆ ರಾಜ ಕಿರೀಟ * ಅನಾಥ ಹಲಸಿಗೆ ಮಾನ ನೀಡಿದ ಉಪಕುಲಪತಿ * ಅಸೀಸ್ ಯುವಕನನ್ನು ಸೆಳೆದ ಹಲಸು * ಸಸ್ಯಮಾಂಸ * ಆರಾಧನೆಗೆ ಥಳಕು * ಉಪ್ಪುಸೊಳೆ ಉದ್ಯಮ * ಜಾಫಿ * ಚೇಳೂರು ಸಂತೆ * ಕಣ್ಣು ಕಸಿ * ಹಲಸು ಸ್ನೇಹಿ ಕೂಟ * ಮೌನೀಶರ ಹಲಸಿನಂಗಡಿ * ಸಾಟ್ * ಹಲ್ವ ತಯಾರಿ... ಹೀಗೆ ಸಮೃದ್ಧ.
......ನೀವಲ್ಲದೆ ಇನ್ನಾರು ಪ್ರೋತ್ಸಾಹಿಸಬೇಕು.... ...ನಿಮ್ಮ ಹತ್ತಿರದ ಶೈಕ್ಷಣಿಕ ಸಂಸ್ಥೆಗಳಿಗೆ, ಶುಭ ಸಮಾರಂಭಗಳಿಗೆ ಪುಸ್ತಕವನ್ನು ಉಡುಗೊರೆ ನೀಡಬಹುದು....
----------------------------------------------------------------------------------------------------------------------------
ಪುಸ್ತಕ ನಂ. 4 ಜೀವಧಾನ್ಯ : ಅನ್ನದ ಕೃಷಿಯ ಬಿಸಿಯುಸಿರು (ಬೆಲೆ ರೂ. 100)
‘ಜೀವಧಾನ್ಯ’ – ಇದು ಭತ್ತದ ಕೃಷಿಯ ವರ್ತಮಾನದ ನೋಟ, ಮೂವತ್ತಕ್ಕೂ ಅಧಿಕ ತಳಿಗಳ ವಿವರಗಳಿವೆ. ಭತ್ತ ಬಳೆದು ಯಶ ಕಂಡವರ ಅನುಭವ ಕಥನಗಳಿವೆ. ಮುನ್ನೂರು ತಳಿಗಳ ಭತ್ತದ ತಿಜೋರಿ, ಶ್ರಮದ ಬದುಕಿಗೆ ಕಾವುಕೊಟ್ಟ ತಳಿ ಸಂಗ್ರಹ, ಕಬ್ಬಿನ ನಾಡಲ್ಲಿ ಭತ್ತದ ಕಣಜ, ಭತ್ತದ ಕಾಳಿಗೆ ಮುತ್ತಿನ ಬೆಲೆ, ಅನ್ನದ ಬರದ ಬಿಸಿ...ಹೀಗೆ ತುಂಬು ಹೂರಣಗಳು. ಪುಸ್ತಕವನ್ನು ಪುತ್ತೂರಿನ ನವತೇಜ ಟ್ರಸ್ಟ್ ಪ್ರಕಾಶಿಸಿದೆ.
'ಜೀವಧಾನ್ಯ'ಕ್ಕೆ ಡಾ.ಮನೋಹರ
ಉಪಾಧ್ಯರ
ನಲ್ನುಡಿ....
. “ಹತ್ತಿರ
ಹತ್ತಿರ
ಸಾವಿರ
ಭತ್ತದ
ತಳಿಗಳ
ಸಂರಕ್ಷಣೆ
ಮಾಡುತ್ತಿರುವ
ಸೈಯದ್
ಘನಿ
ಖಾನ್,
ನಟವರ
ಸಾರಂಗಿ,
ಬಿ.
ಕೆ.
ದೇವರಾಯರಂತಹ
ರೈತ
ವಿಜ್ಞಾನಿಗಳೂ
ಸೇರಿ
ಎಲ್ಲ
ಅನ್ನದಾತರನ್ನು
ಪುನರ್ನಮಿಸಲು,
ಮತ್ತೆ
ನೆನಪಿಸಲು
ಸಾಧ್ಯ
ಮಾಡಿತು
ಈ
ಪುಸ್ತಕ.
'ಅನ್ನ
ಉಣ್ಣುವರೆಲ್ಲ'
ಒಮ್ಮೆ
ಓದಬಹುದಾದ,
ಇತರರಿಗೆ
ಓದಲು
ಕಳುಹಿಸಬಹುದಾದ
ಹೊತ್ತಗೆ.
ನೂರು
ರೂಪಾಯಿಯಷ್ಟು
ಹಗುರವಾಗಿ
ಮನಭರಿಸುವಷ್ಟು
ಭಾರ.”
ಯಕ್ಷಗಾನ ಪುಸ್ತಕಗಳು…. ಕೆಲವೇ ಪ್ರತಿಗಳಿವೆಯಷ್ಟೇ……
ಅಡ್ಡಿಗೆ : (ಯಕ್ಷ ಯವನಿಕೆಯ ಸುತ್ತಮುತ್ತ).. 38 ಲೇಖನಗಳ ಗುಚ್ಚ ಕೆಲವು ಲೇಖನಗಳು - ಬಪ್ಪ ಸಾರಿದ ಸಹಿಷ್ಣುತೆ, ಬಾಹುಕನ ಭಾಹುಕ ಅಂತರಂಗ, ಕಾಫಿ ನಾಡಿನಲ್ಲರಳಿದ ಪಾಪಣ್ಣ, ಅಯ್ಯಪ್ಪ ಆಖ್ಯಾನಕ್ಕೆ ಅರ್ಧ ಶತಮಾನ, ಕೆನಡಾ ಯಕ್ಷಮಿತ್ರದ ಅರ್ಥಪೂರ್ಣ ಪಯಣ, ಅಮೇರಿಕಾದಲ್ಲಿ ತಾಳಮದ್ದಳೆಯ ಹಸಿವು, ಬಣ್ಣದ ರಂಗಿನೊಳಗೆ ಬಿನ್ನಾಣ, ಗೌಜಿಯ ಅಲೆಯೊಳಗೆ ರಂಗ ನರಳಾಟ, ಚಿತ್ರ ಸಾರಿದ ಯಕ್ಷಪಯಣ ಬೆಲೆ Rs. 100. (ಅಡ್ಡಿಗೆ ಮತ್ತು ಮಣಿಸರ ಈ ಎರಡು ಪುಸ್ತಕಗಳ ಲೇಖನಗಳು ಹಿಂದೆ ಪ್ರಜಾವಾಣಿಯಲ್ಲಿ ಅಂಕಣಗಳಾಗಿ ಪ್ರಕಟವಾಗಿವೆ. ಈ ಎರಡು ಪುಸ್ತಕಗಳು ತಮ್ಮಲ್ಲಿದ್ದರೆ ಕಳೆದೊಂದು ದಶಕಗಳ ಯಕ್ಷಪಲ್ಲಟಗಳು ನೋಟ ಸಿಗುತ್ತವೆ.)