Home › Archives for July 2016
Thursday, July 21, 2016
Wednesday, July 20, 2016
Tuesday, July 19, 2016
ಶ್ರೀ ಪಡ್ರೆಯವರೀಗ - 'ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ'
ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ
ಸಂಪಾದಕ ಶ್ರೀ ಪಡ್ರೆಯವರು 'ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಿರುವನಂತಪುರದ ಜ್ಯಾಕ್ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮ ಸಂಸ್ಥೆಗಳು ಪ್ರಶಸ್ತಿಯ ಆಯೋಜಕರು.
ಶ್ರೀ ಪಡ್ರೆಯವರು ಹಲಸಿನ ಆಂದೋಳನಕ್ಕೆ ಶ್ರೀಕಾರ ಬರೆದವರು. 2009ರಂದೀಚೆಗೆ 'ಅಡಿಕೆ ಪತ್ರಿಕೆ'ಯಲ್ಲಿ ದೇಶ, ವಿದೇಶದ ಹಲಸಿನ ಆಗು ಹೋಗುಗಳ ತಾಜಾ ಲೇಖನಗಳು ಪ್ರಕಟ. ವಿಶ್ವಾದ್ಯಂತ ಹಲಸು ಪ್ರೇಮಿಗಳೊಂದಿಗೆ ನಿರಂತರ ಸಂಪರ್ಕ, ಜಾಲತಾಣ ಗುಂಪುಗಳ ರೂಪೀಕರಣ. ಹಲಸು ಮೇಳಗಳಲ್ಲಿ 'ಹಲಸಿನ ವಿಶ್ವದರ್ಶನ' ಪ್ರಸ್ತುತಿ. ಹಲಸು ಮೇಳಗಳಿಗೆ ಹೊಸ ಆಯಾಮವನ್ನು ನೀಡಿದ್ದಾರೆ.
ಈಗ ಶ್ರೀ ಪಡ್ರೆಯವರಿಗೆ 'ಹಲಸಿನ ಆಂತಾರಾಷ್ಟ್ರೀಯ ರಾಯಭಾರಿ' ಪ್ರಶಸ್ತಿ.