Monday, March 12, 2018

ಮಾ.16: ಉಜಿರೆಯಲ್ಲಿ ಜಲಜಾಗೃತಿ ವಿಚಾರಸಂಕಿರಣ ಹಾಗೂ ಪುಸ್ತಕ ಬಿಡುಗಡೆವಿಶ್ವ ಜಲ ದಿನದ ಅಂಗವಾಗಿ ತಿಂಗಳ 16ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಜಲಸಂರಕ್ಷಣೆ ಕುರಿತ ಪ್ರಾದೇಶಿಕ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ಶ್ರೀ .ಮಂ.ಕಾಲೇಜು, ಅಡಿಕೆ ಪತ್ರಿಕೆ, ಜಲಕೂಟ ಮತ್ತು ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತವಾಗಿ ಆಯೋಜಿಸಿರುವ ಒಂದು ದಿನದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶ್ರೀ ಪಡ್ರೆ ಅವರು ಮಳೆಕೊಯ್ಲಿನ ಮಹತ್ವ ಹಾಗೂ ವಿಧಾನ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಳೆನೀರು ಕೊಯ್ಲು ವಿಧಾನ ಅಳವಡಿಸಿ ನೀರ ನೆಮ್ಮದಿ ಕಂಡುಕೊಂಡವರ ಯಶೋಗಾಥೆಗಳನ್ನೂ ಅವರು ಸಾದರಪಡಿಸುವರು.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಅಡ್ಡಬೋರು ಹಾಗೂ ಇಂಗುಬಾವಿ ಕುರಿತು ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ರಾಜಸ್ಥಾನದ ಗೋವಿಂದ ಭಾಯಿ ಹಾಗೂ ಬೆಂಗಳೂರಿನ ಶಂಕರ್ ಅವರು ವಿವರ ನೀಡಲಿದ್ದು ಸಂವಾದ ಕೂಡ ಇರಲಿದೆ.

ಕಳೆದ ಎರಡು ದಶಕಗಳಿಂದ  ನೆಲ-ಜಲ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುತ್ತಿರುವಅಡಿಕೆ ಪತ್ರಿಕೆಸಂಪಾದಕ ಶ್ರೀ ಪಡ್ರೆ ಅವರು ಅಭಿಯಾನದ ಭಾಗವಾಗಿ ಬರೆದಿರುವಜನಶಕ್ತಿಯಿಂದ ನದಿಗಳಿಗೆ ಮರುಜೀವಮಳೆ 400 ಮಿ.ಮೀಟರೂ ಧಾರಾಳಶೀರ್ಷಿಕೆಯ 15ನೇ ಪುಸ್ತಕವನ್ನು ಹೆಸರಾಂತ ತೋಟಗಾರಿಕಾ ತಜ್ಞ ಮೂಡಬಿದಿರೆಯ ಡಾ. ಎಲ್.ಸಿ. ಸೋನ್ಸ್ ಅವರು ಬಿಡುಗಡೆ ಮಾಡಲಿದ್ದಾರೆ. ಸಾಹಿತಿ, ಅಂಕಣಕಾರ ಡಾ. ನರೇಂದ್ರ ರೈ ದೇರ್ಲ ಅವರು ಅತಿಥಿಯಾಗಿ ಪಾಲ್ಗೊಂಡು ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.

ಸಂದರ್ಭದಲ್ಲಿ  ಶ್ರೀ .ಮಂ. ಕಾಲೇಜಿನ ವಿದ್ಯಾರ್ಥಿಗಳು ಮಳೆಕೊಯ್ಲು ಮಾದರಿಯ ಪ್ರಾತ್ಯಕ್ಷಿಕೆ ಹಾಗೂ ಸುಜಲಾಂ ಕಾರ್ಯಕ್ರಮ ನಡೆಸಿಕೊಡಲಿದ್ದು, ವರ್ಷದ ವಿಶ್ವ ಜಲ ದಿನದ ಘೋಷವಾಕ್ಯ – ‘ನೀರಿಗಾಗಿ ಪ್ರಕೃತಿ ಸಹಜ ಪರಿಹಾರಗಳು  ಕುರಿತು ಕೂಡ ಮಾಹಿತಿ ನೀಡಲಿದ್ದಾರೆ.

ವಿಶಿಷ್ಟ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದೆ.  ಹೆಚ್ಚಿನ ವಿವರಗಳಿಗೆ ಶ್ರೀ .ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಗಣೇಶ್ ಶೆಂಡ್ಯೆ (96635 74253 / 82771 19267) ಅವರನ್ನು ಸಂಪರ್ಕಿಸಬಹುದು.

0 comments:

Post a Comment