Home › Unlabelled › ಹಲಸಿನ ಹಣ್ಣಿನ ಸ್ವಾದದ JACKFRUIT Eclairs ಚಾಕೊಲೇಟ್
Monday, July 12, 2021
ಹಲಸಿನ ಹಣ್ಣಿನ ಸ್ವಾದದ JACKFRUIT Eclairs ಚಾಕೊಲೇಟ್
ಕ್ಯಾಂಪ್ಕೊ ಚಾಕೊಲೇಟ್ ಸರಣಿಗೆ ಇವತ್ತು ತಾಜಾ ಹಲಸಿನ ಹಣ್ಣಿನ ಸ್ವಾದದ JACKFRUIT Eclairs ಚಾಕೊಲೇಟ್ ಸೇರ್ಪಡೆಯಾಯಿತು. ಕ್ಯಾಂಪ್ಕೊ ಕೇಂದ್ರ ಕಚೇರಿ ವಾರಣಾಶಿ ಟವರ್ಸಿನಲ್ಲಿ ನಡೆದ ಕ್ಯಾಂಪ್ಕೊ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಅಡ್ವಕೇಟ್ ಶ್ರೀ ವಿ. ಶ್ರೀಕೃಷ್ಣ ಭಟ್ ಹೊಸ ಚಾಕೊಲೇಟ್ ಉತ್ಪನ್ನವನ್ನು ಲೋಕಾರ್ಪಣೆ ಮಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ಕೊಡ್ಗಿ, ಉಪಾಧ್ಯಕ್ಷ ಶಂ. ನಾ. ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಚ್.ಎಂ. ಕೃಷ್ಣ ಕುಮಾರ್. ಮಾರ್ಕೆಟಿಂಗ್ ವಿಭಾಗದ ಎ.ಜಿ.ಎಂ. ಶ್ರೀ ರವೀಶ್ ಇದ್ದರು.
0 comments:
Post a Comment