Saturday, January 10, 2009

ಕೃಷಿ ಓಡಾಟ ಹಗುರ ಮಾಡಿದ 'ರಾಕಿ'

ಧಾರವಾಡದ ಸುತ್ತೂರಿನ ಮಲ್ಲಯ್ಯ ಹಿರೇಮಠ್ ಇವರ ಮನೆಗೂ, ಹೈನು ಕುಟೀರಕ್ಕೂ ಹತ್ತು ನಿಮಿಷದ ದಾರಿ. ಕೃಷಿ ಕೆಲಸವೆಂದ ಮೇಲೆ ಅತ್ತಿಂದಿತ್ತ, ಇತ್ತಿಂದಿತ್ತ ಪ್ರಯಾಣ ಸಹಜ. ದ್ವಿಚಕ್ರ ವಾಹನವಿದ್ದರೂ ಪೆಟ್ರೋಲ್ ಧಾರಣೆಯಿಂದಾಗಿ ಮಿತ ಬಳಕೆ. ಇವರ 'ರಾಕಿ' ಕುದುರೆಯು ಕೃಷಿ ಓಡಾಟ ಕೆಲಸವನ್ನು ಹಗುರಮಾಡಿದೆ ಎಂದರೆ ನಂಬ್ತೀರಾ?
ರಾಕಿ 2006ರ ಮೋಡೆಲ್! ಮಲ್ಲಯ್ಯರ ಮಗ ಸಂಗಯ್ಯ ರಾಕಿಯ ಚಾಲಕ. ಇವರಿಗೆ ಬಾಲ್ಯದಿಂದಲೂ ಕುದುರೆ ಸಾಕುವ ಮತ್ತು ಸವಾರಿ ಕಲಿವ ಆಸಕ್ತಿ. ರಾಕಿ ಹುಟ್ಟಿದ್ದೇ ಇವರ ಮನೆ ಪಕ್ಕದಲ್ಲಿ. ಅದರ ಒಡೆಯನಿಗೆ 1200 ರೂ. ಕೊಟ್ಟು ಖರೀದಿ. ಅಲ್ಲಿಂದ ಇವರ ಮನೆಯ ಸದಸ್ಯ.

ಸಂಗಯ್ಯರಿಗೆ ಕುದುರೆ ಸವಾರಿಯ ಕಲಿಕೆ ಗೊತ್ತಿಲ್ಲ. ರಾಕಿ ದೊಡ್ಡದಾಗುತ್ತಿದ್ದಂತೆ, 'ಬೆನ್ನೇರುವುದು, ಬೀಳುವುದು, ಗಾಯಮಾಡಿಕೊಳ್ಳುವುದು' ನಡೆದೇ ಇದ್ದಂತೆ, ಸಂಗಯ್ಯ-ರಾಕಿ ಮಧ್ಯೆ ಒಪ್ಪಂದವಾಯ್ತು! ಹಾಗಾಗಿ ಸಂಗಯ್ಯ ಹೊರತಾಗಿ ಯಾರೇ ಬೆನ್ನೇರಿದರೂ ಅವರು ನೇರ ಆಸ್ಪತ್ರೆಗೆ!
ಬೆಳಿಗ್ಗೆ ಮತ್ತು ಸಂಜೆ ಮನೆಗೆ ಹಾಲೊಯ್ಯುವುದು, ಮನೆಯಿಂದ 'ಹಟ್ಟಿ ಕುಟೀರ'ಕ್ಕೆ ತಿಂಡಿ, ಭೋಜನ ತರಲು....ಇವರಿಗೆ ಬೈಕ್ ಬೇಡ. 'ರಾಕಿ ಇದ್ದಾಗ ಕಾಲ್ನಡಿಗೆ ಯಾಕೆ' ಎನ್ನುತ್ತಾ ಬೆನ್ನೇರುತ್ತಾರೆ ಸಂಗಯ್ಯ. ದನಗಳನ್ನು ಗುಡ್ಡಕ್ಕೆ ಮೇಯಲು ಬಿಟ್ಟಾಗ, ಅವುಗಳು ಸಂಜೆ ಹಟ್ಟಿಗೆ ಬಂದಿಲ್ಲವನ್ನಿ, ಅವುಗಳನ್ನು ಹುಡುಕಲು ರಾಕಿಯೇ ಬೇಕು.
ಮನೆಗೆ ನೆಂಟರು ಬಂದರು, ತುರ್ತಾಗಿ ಬೇಕರಿಯಿಂದ ತಿಂಡಿ ಬೇಕು. ಪೇಟೆ ದೂರವಿದೆ. ಆಗ ರಾಕಿಯನ್ನೇರಿ ಪೇಟೆಗೆ ಹೊರಟಾಗಿನ ಸಂಗಯ್ಯ ಇವರ ಠೀವಿ ನೋಡಿಯೇ ಅನುಭವಿಸಬೇಕು! ಇವರಜ್ಜಿ ಗಂಗಮ್ಮ. ನಿತ್ಯ ಹೂಹಾರ ಹಾಕಿ ಪೂಜೆ ಮಾಡ್ತಾರಂತೆ. ಏನಿಲ್ಲವೆಂದರೂ ದಿನಕ್ಕೆ 25 ಕಿಲೋಮೀಟರ್ ಪ್ರಯಾಣ.
ಸಂಜೆ ತೋಟಕ್ಕೆ ಒಂದು ಸುತ್ತು ಇದರಲ್ಲೇ ರೈಡ್. 'ಕತ್ತಲೆಯಲ್ಲೂ ಓಡುತ್ತದೆ. ಲೈಟ್ ಬೇಡ. ಬ್ಯಾಟರಿ ಬೇಡ' ಮಲ್ಲಯ್ಯ ನಗೆಯಾಡುತ್ತಾರೆ. ಇವರ ಮನೆಯಲ್ಲಿ ಜರ್ಸಿ ಹೋರಿ ಒಂದಿದೆ. ಚಕ್ಕಡಿಯಲ್ಲಿ ಹುಲ್ಲು ತರಲು ಹೋರಿ ಮತ್ತು ರಾಕಿಯ ಬಳಕೆ. ಒಳ್ಳೆಯ ಜತೆ! ರಾಕಿ ಬಯಲಲ್ಲಿ ಎಲ್ಲೇ ಮೇಯುತ್ತಿರಲಿ, ಸಂಗಯ್ಯ ಶಿಳ್ಳೆ ಹಾಕಿದರೆ ಸಾಕು, ಓಡಿ ಬಂದುಬಿಡುತ್ತದೆ. ನೀವೊಮ್ಮೆ ಶಿಳ್ಳೆ ಹಾಕಿ. ಉಹೂಂ. ಕದಲದು! ರಾತ್ರಿ ಆವರಣಕ್ಕೆ ಯಾರೇ ಬರಲಿ, ತನ್ನ ಮೂಕಭಾಷೆಯಿಂದ ಸಂಗಯ್ಯರನ್ನು ಎಚ್ಚರಿಸುತ್ತದೆ.
ಹೇಗಿದೆ? ಕೃಷಿಯಲ್ಲೂ ಕುದುರೆಯ ಬಳಕೆ. 'ಇಲ್ಲೆಲ್ಲಾ ಕುದುರೆ ಸಾಕುವುದು ಬಳಕೆಯಲ್ಲಿದೆ. ಅದರೆ ಅದನ್ನು ತಮ್ಮ ಆವಶ್ಯಕತೆಗೆ ತಕ್ಕಂತೆ ಬಳಸುವುದರಲ್ಲಿ ಜಾಣತನ' ದನಿಗೂಡಿಸುತ್ತಾರೆ ಕೃಷಿ ಅಧಿಕಾರಿ ಆರ್.ಬಿ.ಹಿರೇಮಠ್.

8 comments:

ನರೇಂದ್ರ ಪೈ said...

ನಮಸ್ಕಾರ ಪೆರಾಜೆಯವರೇ. ನಿಮ್ಮ ಉತ್ಸಾಹದ ನಗುಮೊಗವನ್ನು ಮತ್ತೆ ಇಲ್ಲಿ ಕಂಡು ನಿಜಕ್ಕೂ ಖುಶಿಯಾಯಿತು. ನಿಮ್ಮ ಪರಿಚಯವನ್ನೂ ಕನ್ನಡದಲ್ಲೇ ಹಾಕಿ, ದಯವಿಟ್ಟು. ಬರಹಗಳನ್ನು ಹಾಕುತ್ತಿರಿ, ಓದಲು ಚೆನ್ನಾಗಿರುತ್ತದೆ.

GANADHAL said...

Karanthare, update adiri. Shubhashayagalu. munduvarisi. Shubhavagali.

Ganadhalu Srikanta

Unknown said...

ಹೊಸ ವರ್ಷದಲ್ಲಿ ಹೊಸ ಹೆಜ್ಜೆ. ಅಂತೂ ನೀವೂ 'ಬ್ಲಾಗಿಗ'ರಾದಿರಿ..!
ಶುಭಾಶಯಗಳು.
ಆನಂದತೀರ್ಥ ಪ್ಯಾಟಿ, ಗುಲ್ಬರ್ಗ

HARISHCHANDRA SHETTY said...

NA.KARANTHARE
NO ANNA BEDI
NIMMA KRASHI LEKANAGALU KOODA
HASYA LEKANAGALA SAALIGE SERIVE...
DAYAVITTU NIVU "VAARE KORE" GE ONDU KRASHI HASYA
MANNU MASI BARITHIRAA...PRAKASH KELIDDANE''DAYAVITTU KALUHISI KODI.
VYNGYACHITRAGALINDA OGGARANE...NAAVU MAADTHEVE''
RAAKI YA ODATA ODI KUSHI AITHU.
VINYASA KUSHI THANDIDE.
GOOD BLOG
MUNDUVARISI

HARINI







HARINI
FREELANCE CARTOONIST

Lakshmana said...

Good service. Blog gives flexiblity for a writer like Karanth Peraje.
Congratulations.

Lakshmana said...

Congratulations. It gives large flexibility for a writer like Karanth Peraje. Very good service.
- Lakshmana Kodase

VasanthKaje said...

Karanthare!, Welcome to blog world!. nimma blaaguLa chennagi saagali :)

shivarampailoor said...

ಶುಭಾಶಯ.
ಶಿವರಾಂ ಪೈಲೂರು

Post a Comment