Monday, July 2, 2018

ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಜುಲೈ 8ರಂದು ಹಲಸಿನ ಹಬ್ಬ


     ಪುತ್ತೂರಿನಲ್ಲಿ ಪ್ರಥಮ ಬಾರಿಗೆಹಲಸಿನ ಹಬ್ಬವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದನಟರಾಜ ವೇದಿಕೆಯಲ್ಲಿ 2018 ಜುಲೈ 8 ರವಿವಾರದಂದು ಜರುಗಲಿದೆ. ದಿನಪೂರ್ತಿ ನಡೆಯುವ ಹಬ್ಬವನ್ನು ಪುತ್ತೂರಿನ ನವಚೇತನ ಸ್ನೇಹ ಸಂಗಮ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಡಿಕೆ ಪತ್ರಿಕೆ ಪುತ್ತೂರು ಜಂಟಿಯಾಗಿ ಆಯೋಜಿಸಿದ್ದಾರೆ.
        ವಿವಿಧ ಹಲಸಿನ ತಳಿ/ಗಿಡಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಖಾದ್ಯ ವೈವಿಧ್ಯಗಳ ದರ್ಶನ, ಮೌಲ್ಯವರ್ಧಿತ ಉತ್ಪನ್ನಗಳ ಸಮ್ಮಿಲನ, ವಿಶೇಷ ತಳಿಗಳ ಶೋಧ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ, ಮನೆ ತಯಾರಿ ಹಲಸಿನ ಖಾದ್ಯಗಳ ಪ್ರದರ್ಶನ. ಮೊದಲಾದ ವೈಶಿಷ್ಟ್ಯವನ್ನು ಹಬ್ಬವು ಹೊಂದಿದೆ.
     ಒಂದು ಕಾಲಘಟ್ಟದಲ್ಲಿ ಹಲಸು ಹೊಟ್ಟೆಯನ್ನು ತಂಪು ಮಾಡಿ ಬಡತನವನ್ನು ನೀಗಿದ ಫಲ. ಕಳೆದ ಹತ್ತು ವರುಷಗಳಿಂದ ಕೇರಳ, ಕರ್ನಾಟದಲ್ಲಿ ಹಲಸಿನ ಆಂದೋಳನ ಫಲವಾಗಿ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನ ತೋಟವನ್ನು ಎಬ್ಬಿಸುವ ಉತ್ಸಾಹಗಳು, ದೈನಂದಿನ ಅಡುಗೆಯಲ್ಲಿ ಹಲಸಿನ ಖಾದ್ಯಗಳು ಸೇರಿಕೊಂಡಿವೆ. ನೂರಾರು ಹಲಸಿನ ಹಬ್ಬಗಳು ಸಂಪನ್ನವಾಗಿವೆ.
     ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಮೊದಲ ಬಾರಿಗೆ ಹಲಸಿನ ಹಬ್ಬವನ್ನು ಆಯೋಜಿಸಲಾಗಿದೆ. ನವಚೇತನ ಸ್ನೇಹ ಸಂಗಮದ ಉತ್ಸುಕತೆಯಲ್ಲಿ ಪುತ್ತೂರಿನ ಅನ್ಯಾನ್ಯ ಹಲಸು ಪ್ರಿಯ ಮನಸ್ಸುಗಳು ಹಬ್ಬಕ್ಕೆ ಕೈ ಜೋಡಿಸಲಿವೆ. ದೂರದೂರಿನ ಹಲಸು ಪ್ರೇಮಿಗಳು ಆಗಮಿಸಲಿದ್ದಾರೆ.
ಸಂಪರ್ಕ:
ಅನಂತಪ್ರಸಾದ್ ನೈತ್ತಡ್ಕ 9611543386
ಸುಹಾಸ್ ಮರಿಕೆ 9480535708

0 comments:

Post a Comment