Monday, July 16, 2018

ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಹಲಸಿನ ಹಬ್ಬ





              ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಾಯದ 'ನಟರಾಜ ವೇದಿಕೆ'ಯಲ್ಲಿ 2018 ಜುಲೈ 11ರಂದು ಹಲಸಿನ ಹಬ್ಬ. ಪುತ್ತೂರಿನಲ್ಲಿ ಪ್ರಥಮವಾಗಿ ನಡೆದ ಹಬ್ಬದಲ್ಲಿ ಎಂಟು ಸಾವಿರಕ್ಕೂ ಮಿಕ್ಕಿ ಹಲಸು ಪ್ರೇಮಿಗಳು ಭಾಗವಹಿಸಿದ್ದರು. ಹಲಸಿನ ಸವಿಯನ್ನು ಉಂಡರು. ಹಲಸಿನ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡರು. ದಿನಪೂರತಿ ನಡೆದ ಹಬ್ಬದಲ್ಲಿ ದೂರದೂರಿನಿಂ ಹಲಸುಪ್ರೇಮಿಗಳು ಆಗಮಿಸಿರುವುದು ವಿಶೇಷ.
          ಕರ್ನಾಟಕದ ಕೇರಳಗಳಲ್ಲಿ ಕಳೆದ ಹತ್ತು ವರುಷಗಳಲ್ಲಿ ಏನಿಲ್ಲವೆಂದರೂ ಇನ್ನೂರಕ್ಕೂ ಮಿಕ್ಕಿ ಉತ್ಪನ್ನಗಳು ಸಿದ್ಧವಾಗಿ ಗ್ರಾಹಕರ ಉದರ ಸೇರುತ್ತಿವೆ, ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೂ ಸೇರುತ್ತಿವೆ. ಮೇಳಗಳು, ಕಾರ್ಯಾಗಾರಗಳು, ತರಬೇತಿ ಶಿಬಿರಗಳು ಖಾಸಗಿಯಾಗಿ ಸದ್ದಿಲ್ಲದೆ  ನಡೆಯುತ್ತಿವೆ. ಕೇರಳದಲ್ಲಿ ಮೂರು ಡಜನ್ನಿನಷ್ಟು ಮೌಲ್ಯವರ್ಧಿತ ಘಟಕಗಳು ಕಾರ್ಯಾಚರಿಸುತ್ತಿವೆ. ಚಿಪ್ಸ್, ಬೆರಟ್ಟಿಯಂತಹ ಸಾಂಪ್ರದಾಯಿಕ ಉತ್ಪನ್ನಗಳ ತಯಾರಿಯಲ್ಲದೆ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸುವ ಪ್ರಯೋಗಶೀಲತೆ ಹಬ್ಬುತ್ತಿದೆ. 
          ಇಷ್ಟೆಲ್ಲಾ ಹಲಸಿನ ವಿಚಾರಗಳನ್ನು ಹೇಳಬೇಕಾದರೆ ಅದಕ್ಕೆ ಆಂದೋಳನ ರೂಪ ನೀಡಿರುವುದು ಪುತ್ತೂರಿನ 'ಅಡಿಕೆ ಪತ್ರಿಕೆ' ಕೃಷಿ ಪತ್ರಿಕೆ. ಕಳೆದ ಹನ್ನೆರಡು ವರುಷಗಳಿಂದ ದೇಶ-ವಿದೇಶಗಳ ಹಲಸಿನ ಮೌಲ್ಯವರದಹಿತ ಉತ್ಪನ್ನಗಳ ಯಶೋಗಾಥೆಗಳನ್ನು ಪ್ರಕಟಿಸಿದೆ. ಪತ್ರಿಕೆಯು ಆಂದೋಳನವನ್ನು ಹುಟ್ಟು ಹಾಕಿದ ನೆಲದಲ್ಲೇ ಹಲಸಿನ ಹಬ್ಬ ನಡೆದಿರುವುದು ಮಹತ್ವದ ವಿಚಾರ.
          ಪುತ್ತೂರಿನ ನವಚೇತನ ಸ್ನೇಹ ಸಂಗಮವು ಹಲಸಿನ ಹಬ್ಬವವನ್ನು ಅನ್ಯಾನ್ಯ ಸಂಸ್ಥೆಗಳ ಪ್ರೋತ್ಸಾಹದಿಂದ ನಡೆಸಿದೆ. ಹಲಸು ಹಬ್ಬದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಎನ್.ಸುಧಾಕರ ಶೆಟ್ಟಿ ವಹಿಸಿದ್ದರು. ಹಿರಿಯ ಪತ್ರಕರ್ತ, ಹಲಸಿನ ಅಂತಾರಾಷ್ಟ್ರಿಯ ರಾಯಭಾರಿ ಶ್ರೀ ಪಡ್ರೆಯವರು ಹಲಸು ಕತ್ತರಿಸುವ ಮೂಲಕ ಹಬ್ಬವನ್ನು ಉದ್ಘಾಟಿಸಿದರು.
 

0 comments:

Post a Comment