
ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ ಎಂದು ಹೇಳಿ, ಇದನ್ನು ಬಳಸುವಲ್ಲಿ ಜನರಿಗೆ ಭಯತರುವಂತಹ ಸನ್ನಿವೇಶಗಳನ್ನು ನಿರ್ಮಿಸುಸುವಂತಹ ವ್ಯವಸ್ಥಿತ ಹುನ್ನಾರ ನಡೆಯುತ್ತಲೇ ಇದೆ. ಇದರ ಮೇಲೆ ಅಪವಾದಕ್ಕೂ ಕಾರಣ ಇಲ್ಲದಿಲ್ಲ - ಸೋಯಾಬೀನ್ ಎಣ್ಣೆಯನ್ನು ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಮಾರಾಟ ಮಾಡಲು ಪಾಶ್ಚಿಮಾತ್ಯ ರಾಷ್ಟ್ರಗಳು ಪಿತೂರಿ ಮಾಡುತ್ತಿವೆ. ಇಲ್ಲಿನ ತೆಂಗಿನ ಎಣ್ಣೆಯನ್ನು ಬಳಸದಂತೆ ಮಾಡಿ ತಮ್ಮ ಎಣ್ಣೆಗಳನ್ನು ಮಾರಿಕೊಳ್ಳುವ ಜಾಣ್ಮೆ!
ತೆಂಗಿನೆಣ್ಣೆ ತಿನ್ನುವುದರಿಂದ ಹೃದಯ ಸಂಬಂಧೀ ಕಾಯಿಲೆಗಳು ದೂರವಾಗುತ್ತವೆ' ಎಂಬ ವೈಜ್ಞಾನಿಕ ಸತ್ಯ ಕಣ್ಣಮುಂದಿದ್ದರೂ, ಈ ಹುನ್ನಾರಗಳ ವಿರುದ್ಧ ವೈದ್ಯರು, ವಿಜ್ಞಾನಿಗಳು, ಇಲಾಖೆಗಳು, ಮಂಡಳಿಗಳು ಸುಮ್ಮನಿವೆಯಲ್ಲಾ!
ತುಮಕೂರು ಸುತ್ತಮುತ್ತ ಕೊಬ್ಬರಿ, ಕರಾವಳಿ, ಕೇರಳಗಳಲ್ಲಿ ತೆಂಗಿನೆಣ್ಣೆ, ತೆಂಗಿನಕಾಯಿ ಬಳಕೆ ವ್ಯಾಪಕವಾಗಿದೆ. ಬಳಕೆ ಹೆಚ್ಚಿದಾಗ ತೆಂಗಿನಕಾಯಿಗೆ ದರ ಹೆಚ್ಚುವುದಲ್ಲಾ. ತೆಂಗಿನ ಉತ್ಪನ್ನಗಳಿಗೂ ಬೆಲೆ ಏರಿಕೆಯಾಗಬಹುದು.
ಈ ಹಿನ್ನೆಲೆಯಲ್ಲಿ ತೆಂಗಿನ ಉತ್ಪನ್ನಗಳನ್ನು ಇನ್ನಷ್ಟು ಹೆಚ್ಚು ಬಳಸುವಂತಾಗಲು ಜನರಲ್ಲಿ ಜಾಗೃತಿ ಮೂಡಿಸುವಂತಹ 'ತೆಂಗು ಬೆಳೆಗಾರರೇ, ಎದ್ದೇಳಿ' ಎಂಬ ಅಭಿಯಾನವು ಸೆಪ್ಟೆಂಬರ್ 2ರಂದು ತುಮಕೂರಿನಲ್ಲಿ ನಡೆಯಲಿದೆ.
ಚಿಕ್ಕನಾಯಕನ ಹಳ್ಳಿ, ತುರುವೆಕರೆಯಿಂದ ತುಮಕೂರು ತನಕ ಸೈಕಲ್ ಜಾಥಾ. ತುಮಕೂರಿನಲ್ಲಿ ಸಭಾ ಕಲಾಪ. ಡಾ.ಬಿ.ಎಂ.ಹೆಗ್ಡೆ ಭಾಗವಹಿಸುತ್ತಾರೆ.
ಸಂಪರ್ಕ : ಅಣೇಕಟ್ಟೆ ವಿಶ್ವನಾಥ್ 8095222728, ವಿನೋದ್ : 9448357536
4 comments:
Hello Sir,Please add facebook or some sharing links so that we can share it online.Thank you.
ಕಾರಂತರೇ, ಬಹಳ ಒಲೆಯ ಕೆಲಸ, ಮಾಹಿತಿಗೆ ಧನ್ಯವಾದಗಳು. Welcome to my blog for various types of articles
ಅತ್ಯುತ್ತಮ ಮಾಹಿತಿ. ಪಾಶ್ಚಿಮಾತ್ಯರು ತಮ್ಮ ತೈಲ ಮಾರುಕಟ್ಟೆಗೆ ಮಾಡುತ್ತಿರುವ ಘೋರಗಳು ಇನ್ನು ಹತ್ತು ಹಲವಾರಿವೆ. ಇದನ್ನು ವ್ಯವಸ್ತಿತವಾಗಿ ವಿರೋಧಿಸಬೇಕು.
उत्तमं लेखनम्।
Post a Comment