Monday, April 29, 2013

ವಯನಾಡು ಹಲಸು ಮೇಳ :ಮೇ 17-19


                  ಕೇರಳ ವಯನಾಡಿನ 'ಉರವು' ಸಂಸ್ಥೆಗೆ ಮೊದಲ ಬಾರಿಗೆ (1997) ಹಲಸಿನ ಮೇಳವನ್ನು ಸಂಘಟಿಸಿದ ಖ್ಯಾತಿ. ಬಳಿಕ ಕನ್ನಾಡಿನ ವಿವಿಧ ಪ್ರದೇಶಗಳಲ್ಲಿ ಜರುಗಿತು. ಬಹಳ ಅರ್ಥಪೂರ್ಣವಾಗಿ, ಮೇಳದ ಆಶಯಪೂರ್ತಿಗೆ ಬೇಕಾಗುವ ಹೂರಣವನ್ನಿಟ್ಟುಕೊಂಡಿರುವುದು ಮೇಳದ ವೈಶಿಷ್ಟ್ಯ.

                 ಒಂದೆಡೆ ಹಲಸಿನ ಪ್ರದರ್ಶನ, ಮತ್ತೊಂದೆಡೆ ಹಲಸಿನ ಖಾದ್ಯಗಳ ಲೈವ್ ಪ್ರದರ್ಶನ ಮತ್ತು ಮಾರಾಟ. ತಿನ್ನಲು ರೆಡಿಯಾಗಿ ನೀಡಿದರೆ, ಹಣಕೊಟ್ಟು ಖರೀದಿಸುವ ದೊಡ್ಡ ಗ್ರಾಹಕವರ್ಗವನ್ನು ಉರವು ಸೃಷ್ಟಿಸಿದೆ. ಹಾಗಾಗಿಯೇ ನೋಡಿ, ಉರವಿನ ಖಾದ್ಯದ ಸ್ಟಾಲ್ ಬೆಳಿಗ್ಗೆ ಆರಂಭವಾದರೆ ರಾತ್ರಿಯೇ ಬಾಗಿಲೆಳೆಯುವುದು. ಮಂತ್ರಿಮಹೋದಯರಿಂದ ಢಾಳು ಭಾಷಣಗಳಿಲ್ಲ. ಬಹುಪರಾಕುಗಳಿಲ್ಲ. ಹಾಗೆಂತ ಮಂತ್ರಿಗಳು, ಅಧಿಕಾರಿಗಳು ಹಬ್ಬದಲ್ಲಿ ಸಾಮಾನ್ಯರಂತೆ ಭಾಗವಹಿಸುತ್ತಾರೆ. ಹಲಸು ಹಬ್ಬದಲ್ಲಿ ಹಲಸಿನದ್ದೇ ಹೈಲೈಟ್.

                   ಈ ಬಾರಿ ಮೇ 17ರಿಂದ 19ರ ತನಕ ವಯನಾಡಿನ ತ್ರಿಕ್ಕಾರಿಪೇಟಿನಲ್ಲಿ ಎಂಟನೇ ಹಲಸು ಮೇಳ ನಡೆಯುತ್ತಿದೆ. ಕೋಝೀಕೋಡಿಂದ ವಯನಾಡಿಗೆ ಎರಡು ಗಂಟೆ ಪ್ರಯಾಣ ದೂರ.

                  ಮೇಳದ ಕುರಿತು ಹೆಚ್ಚಿನ ಮಾಹಿತಿಗೆ ಸಂಪರ್ಕ ವಿಳಾಸ: . CD Suneesh - sunishcd@gmail.com, 94465 795552 * Babu Raj - baburajuravu@gmail.com,  97470 75610

0 comments:

Post a Comment