ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 'ಕದಂಬ' ಸಂಸ್ಥೆಯು ಪ್ರತೀವರುಷ ಹಲಸು ಮೇಳವನ್ನು ಆಯೋಜಿಸುತ್ತಿದೆ. ಇಲಾಖೆಗಳು, ಸರಕಾರೇತರ ಸಂಸ್ಥೆಗಳನ್ನು ಜತೆ ಸೇರಿಸಿಕೊಂಡು ನಡೆಸುವ ಮೇಳದಲ್ಲಿ ಖಾದ್ಯಗಳಲ್ಲದೆ; ಗಿಡಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡುತ್ತಿದೆ. 'ಕದಂಬ' ಬ್ರಾಂಡೆಡ್ ಹಪ್ಪಳವನ್ನು ಹೊರತಂದಿದೆ. ಶ್ರೀಮತಿ ಮಮತಾ, ಗೀತಾ ಹೆಗಡೆ.. ಮೊದಲಾದವರು ಇನ್ನೂರಕ್ಕೂ ಮಿಕ್ಕಿ ಹಲಸಿನ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿಕೊಡುವ ನಿಪುಣೆಯರು. ಇವರ ಸೇವೆಯನ್ನು ಕದಂಬ ಬಳಸಿಕೊಳ್ಳುತ್ತಿದೆ. ಮೇ 17 ರಿಂದ 19ರ ತನಕ ಶಿರಸಿಯ ಕದಂಬ ಸಂಸ್ಥೆಯ ಆವರಣದಲ್ಲಿ ಹಲಸು ಹಬ್ಬ ನಡೆಯಲಿದೆ.
ಸಂಪರ್ಕ : Kadamba Office - (08384) 233 163, contact@kadambamarketing.com
0 comments:
Post a Comment