ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರಿಗೆ 2013ನೇ ಸಾಲಿನ 'ದಿಶಾ ಗ್ರೀನ್ ಗೋಲ್ಡ್ ಪ್ರಶಸ್ತಿ' ಪ್ರಾಪ್ತವಾಗಿದೆ. ಕೊಚ್ಚಿ ಮೂಲದ ಚಾರಿಟೇಬಲ್ ಟ್ರಸ್ಟ್ 'ದಿಶಾ ಗ್ಲೋಬಲ್' ಪ್ರಶಸ್ತಿಯನ್ನು ಪ್ರದಾನಿಸುತ್ತಿದೆ.
ಶ್ರೀ ಪಡ್ರೆಯವರ ನೆಲ ಜಲ ಉಳಿಸಿ ಆಂದೋಳನ, ಎಂಡೋ ಮಾರಿ ವಿರುದ್ಧ ಚಳುವಳಿ, ಹಲಸು ಆಂದೋಳನ, ಪತ್ರಿಕೋದ್ಯಮ ಕಾರ್ಯಾಗಾರ, ಮೊದಲಾದ ಸಮಾಜಮುಖಿ ಕೆಲಸಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ದಿಶಾ ಗ್ಲೋಬಲಿನ ಅಧ್ಯಕ್ಷ ಪ್ರೊ: ಮೋಹನ್ ಮೆನನ್ ತಿಳಿಸಿದ್ದಾರೆ.
ಜನವರಿ 24ರಂದು ಎರ್ನಾಕುಲಂನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಆ ದಿನ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಪ್ರತ್ಯಪ್ರತ್ಯೇಕವಾಗಿ ಹಲಸು ಮೌಲ್ಯವರ್ಧನೆ ಕುರಿತ ಪವರ್ ಪಾಯಿಂಟ್ ಪ್ರಸ್ತುತಿಯಿದೆ.
0 comments:
Post a Comment