ದಕ್ಷಿಣ
ಕನ್ನಡ ಜಿಲ್ಲೆಯ ವಿಟ್ಲ ಸಿಪಿಸಿಆರ್ ಐ ಆವರಣದಲ್ಲಿ ‘ಅಡಿಕೆ ಕೌಶಲ್ಯ ಪಡೆ’ ಶಿಬಿರವು ದಶಂಬರ 5ರಂದು
ಶುಭಚಾಲನೆಗೊಂಡಿತು. ಸಂಸದ ನಳಿನ್ ಕುಮಾರ್ ಕಟೀಲರು ಉದ್ಘಾಟನೆ ಮಾಡಿದರು. ಶಿವಮೊಗ್ಗ ಕೃಷಿ ಮತ್ತು
ತೋಟಗಾರಿಕಾ ವಿಶ‍್ವವಿದ್ಯಾನಿಲಯದ ಕುಲಪತಿ ಡಾ. ಮಂಜುನಾಥ ಕೆ. ನಾಯ್ಕ್ ಅಧ‍್ಯಕ್ಷತೆ ವಹಿಸಿದ್ದರು.
ಶಿಬಿರವು ದಶಂಬರ 5 ರಿಂದ 9ರ ತನಕ ನಡೆಯಲಿದೆ. ಮೂವತ್ತು ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.
ಈ
ಸಂದರ್ಭದಲ್ಲಿ ‘ಜೀವ ರಕ್ಷೆಯ ಜೀವ ವಿಮೆ’ ವೀಡೀಯೋವನ್ನು ಶಾಸಕ ಸಂಜೀವ ಮಠಂದೂರು ಅನಾವರಣಗೊಳಿಸಿದರು.
ವೀಡಿಯೋವನ್ನು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ಪ್ರಸಾದ್ ಬಲ್ನಾಡ್ ನಿರ್ಮಾಣ ಮಾಡಿದ್ದಾರೆ.
ಶಿಬಿರಕ್ಕೆ
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ಅಖಿಲ ಭಾರತ ಅಡಿಕೆ ಬೆಳೆಗಾರರ
ಸಂಘ, ಅಡಿಕೆ ಪತ್ರಿಕೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಹಯೋಗ.
0 comments:
Post a Comment