Saturday, March 2, 2013

ಹಲಸು ಚಿತ್ರಕ್ಕೆ ಪುರಸ್ಕಾರ               'ಕಿಸಾನ್ ಫಾರಮ್ ಪ್ರೈ ಲಿ." ಇವರ ಜಾಲತಾಣ ನಡೆಸಿದ 'ಕೊಯ್ಲು' (ಹಾರ್ವೆಸ್ಟ್ ) ಛಾಯಾಚಿತ್ರ ಸ್ಪರ್ಧೆ'ಯಲ್ಲಿ ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಸಂಪಾದಕ 'ಶ್ರೀ' ಪಡ್ರೆಯವರ ಲಾರಿಗೆ ಹಲಸಿನಕಾಯಿ ಲೋಡ್ ಮಾಡುತ್ತಿರುವ ಛಾಯಾಚಿತ್ರ ದ್ವಿತೀಯ ಪುರಸ್ಕಾರವನ್ನು ಪಡೆದಿದೆ.

              ಪುರಸ್ಕಾರ ಮೊತ್ತ ಮೂರು ಸಾವಿರ ರೂಪಾಯಿ. ಸ್ಪರ್ಧೆ ಆಯ್ಕೆಗೆ ನೂರ ಅರುವತ್ತನಾಲ್ಕು ಛಾಯಾಚಿತ್ರಗಳು ಬಂದಿದ್ದುವು. ಪ್ರಥಮ ಪುರಸ್ಕಾರ ಅನುಪಮ ಪೌಲ್ ಪಡೆದರೆ, ತೃತೀಯ ಪುರಸ್ಕಾರ ಗಳಿಸಿದವರು ಸೊನಾಲಿ ಬಿಸಿ.

              ಉತ್ತರ ಭಾರತದಲ್ಲಿ ತರಕಾರಿಯಾಗಿ ಬಳಕೆ ಮಾಡಲು ಕೇರಳದಿಂದ ಪ್ರತಿವರ್ಷ ಅರ್ಧ ಲಕ್ಷ ಟನ್ ಎಳೆ ಹಲಸು ಸರಬರಾಜಾಗುತ್ತದೆ. ಎರ್ನಾಕುಲಂ ಬಳಿಯ ಪೆರುಂಬಾವೂರು ಇದರ ಸರಬರಾಜು ಕೇಂದ್ರ. ಪುರಸ್ಕಾರ ಗಳಿಸಿರುವುದು ಗುಜ್ಜೆಯನ್ನು ಲೋಡ್ ಮಾಡುತ್ತಿರುವಾಗ ತೆಗೆದ ಶ್ರೀ ಪಡ್ರೆ ಅವರ ಮೇಲಿನ ಛಾಯಾಚಿತ್ರ.

0 comments:

Post a Comment