Saturday, September 8, 2018

ಅಕಾಲ ಹಲಸು ಸಂಗಮ - 2018





        ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಮೊದಲ ಬಾರಿಗೆ 'ಅಕಾಲ ಹಲಸು ಸಂಗಮ' ಎನ್ನುವ ಎರಡು ದಿವಸಗಳ (ಸೆಪ್ಟೆಂಬರ್ 8, 9 - 2018) ಹಲಸಿನ ಹಬ್ಬವು ಇಂದು ಉದ್ಘಾಟನೆಗೊಂಡಿತು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಹಲಸು ಹಬ್ಬವನ್ನು ಉದ್ಘಾಟಿಸಿದರು.
         ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇದರ ಅಧ್ಯಕ್ಷ ಶ್ರೀ ಸುದರ್ಶನ್ ಜೈನ್ ಸಭಾಧ್ಯಕ್ಷತೆ ವಹಿಸಿದ್ದರು. ರೋಟರಿ ಅಸಿಸ್ಟಾಂಟ್ ಗವರ್ನರ್ ಶ್ರೀ ಪ್ರಕಾಶ್ ಕಾರಂತ್ ನರಿಕೊಂಬು ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ಕೆಯ್ಯೂರು ನಾರಾಯಣ ಭಟ್ ಶುಭಾಶಂಸನೆ ಮಾಡಿದರು.
         ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರಿಂದ 'ಹಲಸು ವಿಶ್ವ ದರ್ಶನ' ಪವರ್ ಪಾಯಿಂಟ್ ಪ್ರಸ್ತುತಿ ಜರುಗಿತು. ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಜಿ.ಆನಂದ 'ಹಲಸು ಮಾತುಕತೆ'ಯ ಅಧ್ಯಕ್ಷರಾಗಿದ್ದರು.
     ಅಪರಾಹ್ನ 'ವೆಂಕಟೇಶ ಕೃಪಾ' ಉದ್ದಿಮೆ ಕಾರ್ಕಳ-ಸಾಣೂರಿನ ಸಂತೋಷ್, ಎಸ್.ಆರ್.ಆರ್ಗಾನಿಕ್ಸ್ ಇದರ ಗೀತಾ ಕಾಮತ್ ಮತ್ತು ಸಖರಾಯಪಟ್ಟಣದ ಶಿವಣ್ಣ - 'ಹಲಸಿನ ಖಾದ್ಯ'ಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪತ್ರಕರ್ತ, ಅಂಕಣಕಾರ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಹಲಸಿನ ಎಳೆ ಗುಜ್ಜೆಯ ಮೇಣವನ್ನು ಕೈಗೆ ಅಂಟಿಸಿಕೊಳ್ಳದೆ ಗುಜ್ಜೆಯನ್ನು ಕಟ್ ಮಾಡುವ ಶಿವಣ್ಣ ಅವರ ವಿಧಾನವು ಎಲ್ಲರ ಗಮನ ಸೆಳೆಯಿತು.

0 comments:

Post a Comment