Sunday, September 9, 2018

ಅಕಾಲ ಹಲಸು ಸಂಗಮ - ಎರಡನೇ ದಿವಸ



ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ-ಬಿ.ಸಿ.ರೋಡಿನಲ್ಲಿ ಸೆ.8ರಂದು ಆರಂಭಗೊಂಡ 'ಅಕಾಲ ಹಲಸು ಸಂಗಮ'ವು ಇಂದು (ಸೆ.9) ಸಮಾಪನಗೊಂಡಿತು. ಪೂರ್ವಾಹ್ನ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಮಂಚಿ ಶ್ರೀನಿವಾಸ ಆಚಾರ್ ಅವರ ಅಧ್ಯಕ್ಷತೆಯಲ್ಲಿ 'ಹಲಸು ಮಾತುಕತೆ'ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಗಳಾದ ಗ್ಯಾಬ್ರಿಯಲ್ ಸ್ಟಾನಿ ವೇಗಸ್ (ತಳಿ ಆಯ್ಕೆ), ಸಖರಾಯಪಟ್ಟಣದ ಶಿವಣ್ಣ (ಮೌಲ್ಯವರ್ಧನೆ) ಮತ್ತು ವೇಣುಗೋಪಾಲ ಎಸ್.ಜೆ.(ಕಸಿ) - ವಿಚಾರಗಳನ್ನು ಮಂಡಿಸಿದರು. ಬಳಿಕ ಶ್ರೀಮತಿ ನಳಿನಿ ಮಾಯಿಲಂಕೋಡಿ ಮತ್ತು ಶ್ರೀಮತಿ ಉಮಾಶಂಕರಿ ಮರಿಕೆ ಇವರು ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸಂಜೆ ಪುತ್ತೂರು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶ್ರೀ ಮಹೇಶ್ ಪುಚ್ಚಪ್ಪಾಡಿಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿತು. ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
    ಪುತ್ತೂರಿನ ನವಚೇತನ ಸ್ನೇಹ ಸಂಗಮ ಮತ್ತು ಅಕಾಲ ಹಲಸು ಸಂಗಮ ಸ್ವಾಗತಿ ಸಮಿತಿಯ ಜಂಟಿ ಆಶ್ರಯದಲ್ಲಿ ಎರಡು ದಿವಸಗಳ 'ಅಕಾಲ ಹಲಸು ಸಂಗಮ' ಜರುಗಿತು. ಐವತ್ತಕ್ಕೂ ಮಿಕ್ಕಿ ಮಳಿಗೆಗಳಿದ್ದುವು. 

0 comments:

Post a Comment