Saturday, September 8, 2018

ಅಕಾಲ ಹಲಸು ಸಂಗಮ - ವಿವಿಧ ವೈವಿಧ್ಯ ಮಳಿಗೆಗಳು.


ನವಚೇತನ ಸ್ನೇಹ ಸಂಗಮ ಪುತ್ತೂರು ಮತ್ತು ಅಕಾಲ ಹಲಸು ಸಂಗಮ ಸ್ವಾಗತ ಸಮಿತಿ ಬಂಟ್ವಾಳ - ಇವರ ಜಂಟಿ ಆಶ್ರಯದಲ್ಲಿ ಇಂದು (ಸೆ.8)ರಂದು ಬಿ.ಸಿ.ರೋಡಿನಲ್ಲಿ 'ಅಕಾಲ ಹಲಸು ಸಂಗಮ' ಕಾರ್ಯಕ್ರಮ ಶುಭಾರಂಭಗೊಂಡಿತು. ನಲವತ್ತಕ್ಕೂ ಮಿಕ್ಕಿದ ಹಲಸಿನ ಖಾದ್ಯಗಳ ಮಳಿಗೆಗಳಿದ್ದುವು. ಬೆಂಗಳೂರು ಐ ಐ ಹೆಚ್ ಆರ್ ಸಂಸ್ಥೆಯನ್ನು ಕರುಣಾಕರನ್ ಮತ್ತು ಬಳಗ ಪ್ರತಿನಿಧಿಸಿದ್ದರು. 'ಸಿದ್ಧು' ಕೆಂಪು ತಳಿ ಹಲಸು ಗಮನ ಸೆಳೆದಿತ್ತು.

ಹಲಸಿನ ಐಸ್ ಕ್ರೀಮ್, ಜ್ಯಾಕ್ ಬಿರಿಯಾಣಿ ಮಿಕ್ಸ್, ಜ್ಯಾಕ್ ಲಡ್ಡು, ಜ್ಯಾಕ್ ಚಾಕೋಲೇಟ್, ಪಾಯಸ ಮಿಕ್ಸ್, ಬೆರಟ್ಟಿ, ಹ ಬೀಜದ ಹೋಳಿಗೆ, ಹಲ್ವ, ಬಿದಿರಕ್ಕಿ ಹಲಸು ಪಾಯಸ, ಹ ಬೀಜದ ಜಾಮೂನ್, ಹಲಸಿನ ಉಂಡ್ಲುಕ, ಹ ಹಪ್ಪಳ, ಹ ಹಣ್ಣಿನ ಹಪ್ಪಳ, ಮಾಂಬಳ, ಚಿಪ್ಸ್, ಸಾಟ್, ಹಲಸಿನ ಹಣ್ಣಿನ ಸ್ಕ್ವಾಷ್, ವಿವಿಧ ಬಗೆಯ ಉಪ್ಪಿನಕಾಯಿಗಳು, ಹ ಹಣ್ಣಿನ ಹೋಳಿಗೆ... ಹೀಗೆ ವಿವಿಧ ವೈವಿಧ್ಯ ರುಚಿಗಳಿದ್ದುವು.

ಮೀಯಪದವಿನ ರವಿಶಂಕರ್ ಸುಣ್ಣಂಗುಳಿ ಇವರ ಮಳಿಗೆಯಲ್ಲಿ ಹಲಸಿನ ಉಪ್ಪಿನಸೊಳೆಯಿಂದ ತಯಾರಿಸಿದ 'ಉಪ್ಪುಸೊಳೆ ಫ್ರೈ' ಹಲಸು ಹಬ್ಬಕ್ಕಾಗಿಯೇ ಸಿದ್ಧಪಡಿಸಿದ ರೆಸಿಪಿ. ಸವಿದ ಅನೇಕ ಮಂದಿ ಉತ್ತಮ ಹಿಮ್ಮಾಹಿತಿ ನೀಡಿದ್ದರು.

ಸಂಘಟಕರು ಹಲಸು ಸಂಗಮಕ್ಕಾಗಿಯೇ - ಮಿಲ್ಮಾ ಮಿಲ್ಕಿ ಜ್ಯಾಕ್ ಪೇಡ, ಪಾಯಸಮ್ ಮಿಕ್ಸ್, ಡಿಹೈಡ್ರೇಟೆಡ್ ಜ್ಯಾಕ್, ಬಿರಿಯಾಣಿ ಮಿಕ್ಸ್, ಹಲ್ವಾ, ಹೋಳಿಗೆ, ಬರ್ಫಿ, ಬೆರಟ್ಟಿ..'- ದೂರದೂರಿಂದ ತರಿಸಿ ಪ್ರದರ್ಶನಕ್ಕಿಟ್ಟಿದ್ದರು. ಇವುಗಳಲ್ಲಿ ಕೆಲವು ಮಾರಾಟಕ್ಕೂ ಲಭ್ಯ. ಸೆಪ್ಟೆಂಬರ್ 9ರಂದು ದಿನಪೂರ್ತಿ ಹಲಸಿನ ಹಬ್ಬ ಜರುಗಲಿದೆ.

0 comments:

Post a Comment