ವಿಟ್ಲ ಸಿಪಿಸಿಆರ್
ಐ ಆವರಣದಲ್ಲಿ 2018 ದಶಂಬರ 5 ರಿಂದ 9ರ ತನಕ ‘ಅಡಿಕೆ ಕೌಶಲ್ಯ ಪಡೆ’ ತರಬೇತಿ ಶಿಬಿರ ನಡೆಯಲಿದೆ. ಅಡಿಕೆ,
“ತೆಂಗು ಕೃಷಿಯಲ್ಲಿ ಮರ ಹತ್ತಿ ಕಾಯಿಗಳನ್ನು ಕೊಯ್ಯುವ, ಔಷಧ ಸಿಂಪಡಿಸುವ ಕುಶಲ ಕಾರ್ಮಿಕರ ಕೊರತೆಯಿದೆ.
ತರಬೇತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ
ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ‘ಫಾಲ್ ಅರೆಸ್ಟರ್’
ಅಳವಡಿಕೆಯೊಂದಿಗೆ ಸುರಕ್ಷಾ ಉಪಕರಣ ಜೋಡಣೆಯ ಅಧ್ಯಯನ ನಡೆಸುತ್ತಿದ್ದಾರೆ. ಶಿಬಿರಾರ್ಥಿಗಳಿಗೆ ಶಿಷ್ಯವೇತನ,
ಸಮವಸ್ತ್ರ ಹಾಗೂ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತದೆ.” ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ.
ಆಸಕ್ತರು ಸಮೀಪದ ಕ್ಯಾಂಪ್ಕೋ ಕಚೇರಿಯಿಂದ ಅರ್ಜಿ ಪಡೆದು 2018 ನವೆಂಬರ
26ರೊಳಗೆ ಸಲ್ಲಿಸಬಹುದು. 18 ರಿಂದ 35 ವರುಷದೊಳಗಿನ ಯುವಕರಿಗೆ ಅವಕಾಶ. ಕ್ಯಾಂಪ್ಕೋ, ಸಿಪಿಸಿಆರ್
ಐ, ಶಿವಮೊಗ್ಗದ ಕೃಷಿ-ತೋಟಗಾರಿಕಾ ವಿಶ್ವವಿದ್ಯಾಲಯ, ಅಡಿಕೆ ಪತ್ರಿಕೆ, ಅಖಿಲ ಭಾರತ ಅಡಿಕೆ ಬೆಳೆಗಾರರ
ಸಂಘದ ಸಹಯೋಗ.
0 comments:
Post a Comment