ಸಭೆಯೊಂದರಲ್ಲಿ ಭಾಗವಹಿಸಿಲು ಪುತ್ತೂರಿನ ಸ್ನೇಹಿತರೊಂದಿಗೆ ಇಂದು ಶೃಂಗೇರಿಗೆ ಹೋಗಿದ್ದೆ. ಪುತ್ತೂರು ಬಿಡುವಾಗ ಮಳೆಯ ಸುಳಿವಿಲ್ಲ. ಗುರುವಾಯನಕೆರೆ ದಾಟುತ್ತಿದ್ದಂತೆ ಪಿರಿಪಿರಿ ಶುರು. ಮಧ್ಯದಲ್ಲಿ ಮಾರ್ಗ ಕುಸಿತು, ಸುತ್ತುಬಳಸಿ ಕಾರ್ಕಳ ತಲುಪುವಾಗ ಮಳೆ ಶುರು. ಬಜಗೋಳಿ, ಕೆರೆಕಟ್ಟೆ ಪ್ರವೇಶಿಸುತ್ತಿದ್ದಂತೆ 'ಮಲೆನಾಡಿನ ಅನುಭವ'. ಹಿಮಾಚ್ಛಾದಿತ ಪ್ರಕೃತಿ.
ಶೃಂಗೇರಿಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದ ಕಿಗ್ಗ ಜಲಪಾತವೆಂದೇ ಪ್ರಸಿದ್ಧವಾದ 'ಸಿರಿಮನೆ ಜಲಪಾದ' ದರ್ಶನ. ಬೆಳಿಗ್ಗೆ ಶುರುವಾದ ಮಳೆ ಸಂಜೆಯವರೆಗೂ ಬರೋಬ್ಬರಿ! ತುಂಬಿ ಧುಮ್ಮಿಕ್ಕುವ ಸಿರಿಮನೆಯ ಸಿರಿ ಶಬ್ಧಗಳಲ್ಲಿ ಹಿಡಿದಿಡಲು ಅಸಾಧ್ಯ. ನೋಡಿಯೇ ಅನುಭವಿಸಬೇಕು. ಗಾಳಿ ಬೀಸಿದಾಗ, ಮೋಡ ದಟ್ಟೈಸಿದಾಗ ಉಂಟಾಗುವ ರೋಚಕ ಕ್ಷಣಗಳು, ಜಲಧಾರೆ ಕೆಳಕ್ಕೆ ಅಪ್ಪಳಿಸಿ, ಮೇಲಕ್ಕೆ ಜಿಗಿಯುವ ವೈಭವ! 'ಒಂದೆಡೆ ಮಳೆ, ಮತ್ತೊಂದೆಡೆ ಥಂಡಿ.. ಸಿರಿಯ ಮುಂದೆ ಇವೆಲ್ಲವೂ ಗೌಣ.
ಜಲಪಾತದ ತೀರಾ ತಪ್ಪಲಲ್ಲಿ ನಾಲ್ಕೈದು ಮಂದಿ ಯುವಕರು ನೀರಿನೊಂದಿಗೆ ಆಟವಾಡುತ್ತಿದ್ದರು! ನನನಗನ್ನಿಸಿತು, ಇವರು ನೀರಿನೊಂದಿಗೆ ಆಟವಾಡುವುದಲ್ಲ, ವಿಧಿಯೊಂದಿಗೆ ಆಟವಾಡುವುದು! ಇಂತಹ ಆಟ ಸಲ್ಲ. ಯಾಕೋ, ಅಲ್ಲಿನ ರಕ್ಷಣಾ ಮಂದಿಯ ಗಮನಕ್ಕೆ ಯಾಕೆ ಬಂದಿಲ್ಲ?
ಇರಲಿ, ಜಲಪಾತ ನೋಡಿ ಮೇಲಕ್ಕೆ ಬರುತ್ತಿದ್ದಂತೆ 'ಚಕೋತ' ಹಣ್ಣು ಮಾರುವ ಒಂದಿಬ್ಬರು ಸಿಕ್ಕರು. ಅವರೇ ಬೆಳೆದ ಹಣ್ಣುಗಳಂತೆ. ಒಂದು ಹಣ್ಣಿಗೆ ಐದು ರೂಪಾಯಿ. 'ಯಾಕೆ ಇಷ್ಟು ಕಡಿಮೆ ಕ್ರಯಕ್ಕೆ ಮಾರುತ್ತೀರಾ' ಅಂದಾಗ, 'ಇದು ನಾವೇ ಬೆಳೆದುದು. ನಮಗೆ ಸಾಕು' ಎನ್ನಬೇಕೇ. ಇದೇ ಹಣ್ಣಿಗೆ ನಗರದಲ್ಲಾಗುತ್ತಿದ್ದರೆ ಮೂವತ್ತೋ-ನಲವತ್ತೋ ಖಂಡಿತ. ಜತೆಯಿಲ್ಲಿದ್ದವರೆಲ್ಲಾ ಹಣ್ಣನ್ನು ಖರೀದಿಸಿದಾಗ ಅವನ ಮುಖ ಅರಳಿತ್ತು. ಇದು ಕೃಷಿ ಜೀವನ-ಕೃಷಿಕನ ಜೀವನ.
Home › Unlabelled › 'ಸಿರಿಮನೆ'ಯ ಸಿರಿ!
1 comments:
ಇದೊಂದು ರಮಣೀಯ ಜಲಪಾತ ಸರ್. ಇಷ್ಟು ಹತ್ತಿರದಲ್ಲಿ ಜಲಪಾತವನ್ನು ನೋಡಲು ಸಾಧ್ಯವಾದದ್ದು ತುಂಬ ಆನಂದವಾಗಿತ್ತು ನಮಗೆ. ಕಳೆದ ಅಗಸ್ಟ್‌ನಲ್ಲಿ ನಾವು ಅಲ್ಲಿಗೆ ಹೋಗಿದ್ದೆವು: http://picasaweb.google.com/mild.winters/Jogagain?authkey=Gv1sRgCMHapYDFwIW_8gE#5236156364638361186
ನಿಮ್ಮ ಬ್ಲಾಗ್ ತುಂಬ ಚೆನ್ನಾಗಿದೆ..
Post a Comment