ದೂರದೂರಿನ, ಕಡಲಾಚೆಯ, ಹಿತೈಷಿಗಳ, ಕೃಷಿ ಕುಟುಂಬದ ಐಟಿ ಬಂಧುಗಳ ಬಹುಕಾಲದ ಬೇಡಿಕೆ ಈಗ ಈಡೇರುವ ದಾರಿಯಲ್ಲಿದೆ. ಅಡಿಕೆ ಪತ್ರಿಕೆಯ ಜಾಲತಾಣ www.adikepatrike.com ರಾಜ್ಯೋತ್ಸವದಂದು ಶುಭಾರಂಭಗೊಂಡಿದೆ.
ಹಿಂದಿನ ತಿಂಗಳುಗಳ ಸಂಚಿಕೆಗಳನ್ನು ಇಳಿಸಿಕೊಳ್ಳಲು ಅವಕಾಶ. ಆಸಕ್ತರು ಇಡೀ ಸಂಚಿಕೆಯ ಪಿಡಿಎಫ್ ಕಡತವನ್ನು ಇಳಿಸಿಕೊಂಡು ಸಾವಕಾಶವಾಗಿ ಓದಿಕೊಳ್ಳಬಹುದು. ಚಿತ್ರಗಳೆಲ್ಲವೂ ವರ್ಣಮಯವಾಗಿರುವುದು ವಿಶೇಷ.
ನಿಕಟ ಭವಿಷ್ಯದಲ್ಲಿ ಆಸಕ್ತರು ಆನ್ಲೈನ್ ಚಂದಾದಾರರಾಗುವ ಅವಕಾಶವೂ ತೆರೆದುಕೊಳ್ಳಲಿದೆ. ಅಡಿಕೆ ಪತ್ರಿಕೆಯನ್ನು ನೀವೂ ಓದಿ. ಹಾಗೆಯೇ ನಿಮ್ಮ ಸ್ನೇಹಿತ, ಬಂಧುಗಳಿಗೆ, ಅನಿವಾಸಿ ಸ್ನೇಹಿತರಿಗೆ, ಎಲ್ಲಾ ಆಸಕ್ತ ಕೃಷಿಸ್ನೇಹಿಗಳಿಗೆ ನಮ್ಮ ಜಾಲತಾಣದ ವಿಳಾಸ ತಿಳಿಸಿ. ಓದಿ ಅಭಿಪ್ರಾಯ ತಿಳಿಸಲು ಸಲಹೆ ಮಾಡಿ.
Home › Unlabelled › ಜಾಲತಾಣ ಪ್ರಪಂಚಕ್ಕೆ ಅಡಿಕೆ ಪತ್ರಿಕೆ
3 comments:
ಕನ್ನಡ ಕೃಷಿ ಪತ್ರಿಕಾ ರಂಗದಲ್ಲಿ ಹಲವು ಹೊಸತನಗಳ ಹರಿಕಾರ ಅಡಿಕೆ ಪತ್ರಿಕೆಯ ಅದ್ಭುತ ಸಾಧನೆ ಇದು. ನಮ್ಮ ಪತ್ರಿಕೋದ್ಯಮ ಅಧ್ಯಯನದ ಗರಡಿಮನೆಯ ಇ-ಪ್ರಯತ್ನಕ್ಕೆ ಶುಭಾಶಯಗಳು...
ಅಡಿಕೆ ಪತ್ರಿಕೆಯ ಈ -ಸಾಧನೆಗೆ ಅಭಿನಂದನೆಗಳು
kalada jothege hegge hakuttiruva namma prithiya
"AP"
ge abinandanegalu.
Post a Comment