Friday, July 9, 2010

'ಕೆಸರುಮಡು' ಹಲಸು

ತುಮಕೂರಿನ 'ಕೆಸರುಮಡು' ಗ್ರಾಮದ ರಂಗಯ್ಯ ಅವರ ಹೊಲದಲ್ಲಿರುವ ನಲವತ್ತು ಸಂವತ್ಸರ ತುಂಬಿರುವ ಈ ಮರ ವರುಷಕ್ಕೆ ಒಂದೂವರೆ ಸಾವಿರ ಹಣ್ಣು ಕೊಡುತ್ತದೆ! ನಲವತ್ತು ವರುಷ ಪ್ರಾಯದ ಮರ. ಮೇ- ಆಗಸ್ಟ್ ತನಕ ಇಳುವರಿ. ದೊಡ್ಡ ಹಣ್ಣಿನಲ್ಲಿ 30-40 ತೊಳೆಗಳು. ಅತಿ ಸಣ್ಣದರಲ್ಲಿ 25-30. ಮೇಣ ಹೆಚ್ಚು. ದಪ್ಪ ತೊಳೆ. ಹಳದಿ ಬಣ್ಣ. ಸಿಹಿ ರುಚಿ. ಹಣ್ಣು ಕಿತ್ತ ಬಳಿಕ ಹದಿನೈದು ದಿನದ ತಾಳಿಕೆ. ಬಹುತೇಕ ಹಣ್ಣುಗಳು ಕ್ಯಾತಸಂದ್ರದಲ್ಲಿ ಬಿಕರಿ. ಮಿಕ್ಕುಳಿದವು ಬಟವಾಡಿ, ತುಮಕೂರಲ್ಲಿ ಮಾರಾಟ.
( ಚಿತ್ರ ಕ್ಲಿಕ್ಕಿಸುವಾಗಲೇ ಆರುನೂರು ಹಣ್ಣುಗಳು ಕಿತ್ತಾಗಿತ್ತು!)

3 comments:

Anonymous said...

ಉಫ್..ತುಂಬಾ ಒಳ್ಳೆಯ ಮರ. ಇದನ್ನು ಇಷ್ಟು ವರ್ಷ ಸಾಕಿರುವ ರಂಗಯ್ಯನವರಿಗೆ ನನ್ನಿ.

Gangamma said...

very nice

savanur subbu said...

ಈ ಮಾವಿನ ಸಂತತಿ ಉಳಿಸುವ ಪ್ರಯತ್ನವಾಗಿದೆಯೇ ?

Post a Comment