



ಹವಾಯಿಯ ಹಣ್ಣು ಕೃಷಿಕ ಕೆನ್ ಲವ್ ಮೂರನೆ ಬಾರಿ ಕನ್ನಾಡಿಗೆ ಬಂದಿದ್ದಾರೆ. ಜೂನ್ 4ರಿಂದ 6ರ ತನಕ ತಿರುವನಂತಪುರದಲ್ಲಿ ನಡೆಯುವ 'ಹಲಸು ರಾಷ್ಟ್ರೀಯ ಸಮ್ಮೇಳನ'ದಲ್ಲಿ ಭಾಗವಹಿಸಲಿದ್ದಾರೆ.
ಬಂಟ್ವಾಳ ತಾಲೂಕು ಇಡ್ಕಿದು ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೂನ್ 2ರಂದು 'ಜಲಮರುಪೂರಣ ಕಾರ್ಯಾಗಾರ' ನಡೆದಿತ್ತು. ಈ ಸಂದರ್ಭದಲ್ಲಿ ದೇವಳಕ್ಕೆ ಕೆನ್ ಭೇಟಿ ನೀಡಿದರು.
ಮೇಣರಹಿತ ಹಲಸನ್ನು ಇಷ್ಟಪಟ್ಟ ಕೆನ್, ಕೋಂಕೋಡಿ ತಿರುಮಲೇಶ್ವರ ಭಟ್ಟರಲ್ಲಿಗೆ ಭೇಟಿ. ಅಲ್ಲಿ ಹಲಸಿನ ಸೊಳೆಗಳನ್ನು ಹೊಟ್ಟೆಗಿಳಿಸಿದರು.
ಸೂರಿಕುಮೇರಿಯ ಗಣೇಶ್ ಭಟ್ ಅವರಲ್ಲಿಗೆ ಭೇಟಿ. ದೀವಿಹಲಸು, ಮಲಯನ್ ಆಪಲ್, ಜಂಬುನೇರಳೆ, ನೀಲಂ ಮಾವುಗಳ ಪರಿಚಯ. 'ಇಲ್ಲಿರುವಂತೆ ಹವಾಯಿಯಲ್ಲೂ ಕೂಡಾ ಕಾಳಪ್ಪಾಡಿ ಹಣ್ಣಿಗೆ ಆಂಥ್ರಾಕ್ನಾಸ್ ರೋಗ ಇದೆ' ಎಂದರು.
ಪಡಾರು ರಾಮಕೃಷ್ಣ ಶಾಸ್ತ್ರಿಯವರಲ್ಲಿ ಸ್ಥಳೀಯ ತೊಂಡೆಕಾಯಿಯನ್ನು ನೋಡಿದ ಕೆನ್, 'ಇದನ್ನು ನಮ್ಮೂರಲ್ಲಿ ಕಳೆನಾಶಕ ಸಿಂಪಡಿಸಿ ನಾಶ ಮಾಡ್ತಾರೆ. ಬಳಸಿ ಗೊತ್ತಿಲ್ಲ' ಎಂದರು. 'ಪುನಃ ಹವಾಯ್ಗೆ ಮರಳಿದ ಬಳಿಕ ಇದರ ಬಳಕೆ ಕುರಿತು ಅರಿವನ್ನು ಮೂಡಿಸುವ ಪ್ರಯತ್ನ ಮಾಡಬೇಕಿದೆ'.
ಮಧ್ಯಾಹ್ನ ಮಾಣಿಯ ಪಡಾರು ರಾಮಕೃಷ್ಣ ಶಾಸ್ತ್ರಿಯವರಲ್ಲಿ ಭೋಜನ. ಕಾನಕಲ್ಲಟೆ, ಮ್ಯಾಂಗೋಸ್ಟೀನ್, ಗಾರ್ಸೀನಿಯಾ ಕೋವಾ, ಪಪ್ಪಾಯಿ, ನ್ಯಾಚುರಲ್ ಐಸ್ಕ್ರೀಂನವರ 'ನೇರಳೆಹಣ್ಣಿನ ಐಸ್ಕ್ರೀಂ'.. ಹೀಗೆ ವಿವಿಧ ವೈವಿಧ್ಯಗಳು. ಚಳ್ಳೆಕಾಯಿ ಉಪ್ಪಿನಕಾಯಿಯನ್ನು ಸ್ವಲ್ಪ ಹೆಚ್ಚೇ ಸವಿದ ಕೆನ್, ಮನೆಯೊಡತಿ ಸುಮ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಸಂಜೆ ಅಡಿಕೆ ಪತ್ರಿಕೆ ಕಚೇರಿಗೆ ಭೇಟಿ. ಸಂಗ್ರಹಿತ ಬೀಜ, ಹಣ್ಣುಗಳ ಪ್ಯಾಕ್-ಅಪ್. ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು ಕೆನ್ ಅವರಿಗೆ ಸಾಥ್ ನೀಡಿದರು.
0 comments:
Post a Comment