Tuesday, June 21, 2011

ಧರ್ಮಸ್ಥಳದಲ್ಲಿ ಹಲಸಿನ ಹಬ್ಬ

ಜೂನ್ 26, 27ರಂದು ಧರ್ಮಸ್ಥಳದಲ್ಲಿ ರಾಜ್ಯಮಟ್ಟದ ಹಲಸಿನ ಹಬ್ಬ. 'ಹಲಸಿನ ಭವಿಷ್ಯ ಮತ್ತು ಅವಕಾಶಗಳು' ಕುರಿತು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಂದ ಪವರ್ ಪಾಯಿಂಟ್ (ಪಪ) ಪ್ರಸ್ತುತಿ. ಕಸಿ ತಜ್ಞ ಗುರುರಾಜ್ ಬಾಳ್ತಿಲ್ಲಾಯರಿಂದ ಹಲಸಿನ ಗಿಡಗಳ ಕಸಿ ವಿಧಾನಗಳು ಮಾಹಿತಿ.

'ಹಲಸಿನ ತಳಿಗಳ ಬೇಸಾಯ ಮತ್ತು ಕೊಯ್ಲೋತ್ತರ ಸಂಸ್ಕರಣೆ ಕುರಿತು ಅರಬಾವಿ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕ ಕಾಲೇಜಿನ ಜಗದೀಶ್ ಎಸ್.ಎಲ್. ಇವರಿಂದ ಪಪ, ತೂಬುಗೆರೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್, 'ಹಲಸಿನ ಬೆಳೆಗಾರರ ಸಂಘದ ರಚನೆ ಮತ್ತು ಕಾರ್ಯಚಟುವಟಿಕೆಗಳು' ಕುರಿತು ಮಾಹಿತಿ.

ಮೌಲ್ಯವರ್ಧನೆ, ಪ್ರಾತ್ಯಕ್ಷಿಕೆ, ಖಾದ್ಯಗಳ ಪ್ರದರ್ಶನ, ಹಲಸಿನ ವಿವಿಧ ತಳಿಗಳ ಪ್ರದರ್ಶನ, ಸ್ಪರ್ಧೆ.. ಹೀಗೆ ಎರಡು ದಿವಸ ಪೂರ್ತಿ ಕಲಾಪ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬ್ರಹ್ಮಾವರ ಮತ್ತು ಮಂಗಳೂರಿನ ಕೆ.ವಿ.ಕೆ., ಮತ್ತು ಇತರರ ಸಹಯೋಗ.

ದಿನಾಂಕ 26, ಭಾನುವಾರದಂದು ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಬೆಳಿಗ್ಗೆ ಗಂಟೆ 10ಕ್ಕೆ ಪದ್ಮ ಭೂಷಣ, ರಾಜರ್ಷಿ, ಡಾ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೃಷಿಕ ಡಾ.ಎಲ್.ಸಿ.ಸೋನ್ಸ್ ರಿಂದ ಮೇಳದ ಉದ್ಘಾಟನೆ. ಬೆಂಗಳೂರು ಕೃಷಿ ವಿವಿಯ ಉಪಕುಲತಿ ಡಾ.ಕೆ.ನಾರಾಯಣ ಗೌಡರಿಂದ ದಿಕ್ಸೂಚಿ ಭಾಷಣ.

0 comments:

Post a Comment