ವಿಷ್ಣು ಇ.ಎಸ್
ಸಮರ್ಥ ಬಿ
'ನಾಯಿಕುಳಿ'
ದನಗಳ ಕೆಚ್ಚಲು ಬಾವು ರೋಗ ಮುಲಾಮು
ಸುದಾನ ವಸತಿಯುತ ಶಾಲೆ, ನೆಹರುನಗರ ಪುತ್ತೂರು (ದ.ಕ.ಜಿಲ್ಲೆ) ಇಲ್ಲಿನ ವಿದ್ಯಾರ್ಥಿಗಳಾದ ವಿಷ್ಣು ಇ.ಎಸ್ ಮತ್ತು ಸಮರ್ಥ ಬಿ ಇವರು ಅಮೇರಿಕಾದ ಫಿಟ್ಸ್ ಬರ್ಗ್ ನಲ್ಲಿ ಮೇ 15 ರಿಂದ ಮೇ 22ರ ವರೆಗೆ ನಡೆಯುವ ISEF ಸಮ್ಮೇಳನದಲ್ಲಿ ಆಹ್ವಾನಿತ ವೀಕ್ಷಕರಾಗಿ ಭಾಗವಹಿಸಲಿದ್ದಾರೆ. ಅಲ್ಲದೆ ಅಮೆರಿಕಾದ ಪ್ರಮುಖ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ವಿಜ್ಞಾನ ವಸ್ತು ಸಂಗ್ರಹಾಲಯ ಮುಂತಾದವುಗಳನ್ನು ಫಿಟ್ಸ್ ಬರ್ಗ್ ಮತ್ತು ವಾಶಿಂಗ್ಟನ್ ನಲ್ಲಿ ಸಂದರ್ಶಿಸಲಿದ್ದಾರೆ. ಇವರ ಈ ಪ್ರವಾಸಕ್ಕೆ Indo-US Science and Technology Forum (IUSSTF) ಪ್ರಾಯೋಜಕರಾಗಿದ್ದಾರೆ.
Initiative for Research & Innovation in Science (ಐರಿಸ್) ವತಿಯಿಂದ
Department of Science & Technology(DST), Intel ಮತ್ತು
Confederation of Indian Industry (CII) ಸಹಯೋಗದೊಂದಿಗೆ ಗುಜರಾತ್ ನ ಅಹಮದಾಬಾದ್ ನಲ್ಲಿರುವ ಸಯನ್ಸ್ ಸಿಟಿಯಲ್ಲಿ ಡಿ4-2014 ರಿಂದ ಡಿ7-2014 ರ ತನಕ ಜರಗಿದ ರಾಷ್ಟ್ರ ಮಟ್ಟದ ವಿಜ್ಞಾನ ಯೋಜನಾ ಸ್ಪರ್ಧೆಯಲ್ಲಿ
ಮಂಡಿಸಿದ
ಸಂಶೋಧನೆ-
'An effective herbal ointment from Scleropyrum pentandrum for mastitis in dairy
cow' ಇದಕ್ಕೆ ಗ್ರ್ಯಾಂಡ್ ಅವಾರ್ಡ್ ಪಡೆದಿದ್ದರು. ಗುಜರಾತ್ ಸರಕಾರದ ವತಿಯಿಂದ ಸಸ್ಯ ವಿಜ್ಞಾನ ವಿಭಾಗದಲ್ಲಿ ಕೊಡಮಾಡುವ ನಗದು ರೂ 2000 ವಿಶೇಷ ಪುರಸ್ಕಾರವೂ ಈ ಸಂಶೋಧನೆಗಾಗಿ ಇವರಿಗೆ ಲಭಿಸಿತ್ತು.
ನಂತರ
03.01.2015 ರಿಂದ
07.01.2015 ರ ವರೆಗೆ ಮುಂಬೈ ವಿಶ್ವ ವಿದ್ಯಾನಿಲಯದಲ್ಲಿ ನಡೆದ ತರಬೇತಿ ಶಿಬಿರ ಮತ್ತು ರಾಷ್ಟ್ರೀಯ ಬಾಲ ವಿಜ್ಞಾನ
ಸಮ್ಮೇಳನದಲ್ಲಿ,
06.02.2015 ರಿಂದ
08.02.2015 ರ ವರೆಗೆ ನವದೆಹಲಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿಯೂ ಭಾಗವಹಿಸಿರುತ್ತಾರೆ. ಇವರ ಸಾಧನೆಯನ್ನು ಪುರಸ್ಕರಿಸಿ 'ಐರಿಸ್'
Indo-US Science and Technology Forum (IUSSTF) ಪ್ರಾಯೋಜಕತ್ವದಲ್ಲಿ ಇವರನ್ನು ಆಹ್ವಾನಿತ ವೀಕ್ಷಕರಾಗಿ ಅಮೇರಿಕಾದ ಫಿಟ್ಸ್ ಬರ್ಗ್ ಗೆ ಕಳುಹಿಸುತ್ತಿದೆ.
ಈ ಸಂಬಂಧ ದಿನಾಂಕ
28.04.2015 ರಂದು ನವದೆಹಲಿಯಲ್ಲಿ ನಡೆಯುವ ವಿದಾಯಕೂಟ ಕಾರ್ಯಕ್ರಮದಲ್ಲಿ ಇವರು ಸುದಾನ ಶಾಲೆಯನ್ನು ಪ್ರತಿನಿಧಿಸಲಿದ್ದಾರೆ.
ಇವರು ಸಂಶೋಧಿಸಿದ್ದೇನು?:
ಕೆಚ್ಚಲು ಬಾವು ರೋಗ ದನಗಳಲ್ಲಿ ಕಂಡು ಬರುವ ಸಾಮಾನ್ಯ ರೋಗ. ಇದಕ್ಕಾಗಿ ಅಲೋಪಥಿ ಔಷಧಗಳನ್ನು ಬಳಸಿದಾಗ ಔಷಧದ ದುಷ್ಪರಿಣಾಮ ಅಂಶಗಳು ದನದ ಹಾಲಿನಲ್ಲಿ ಹಲವು ದಿನಗಳ ಕಾಲ ಉಳಿಯುವುದು ಮತ್ತು ಆ ಸಮಯದಲ್ಲಿ ಅಂತಹ ಹಾಲು ಬಳಕೆಗೆ ಯೋಗ್ಯವಲ್ಲ. ಆದರೆ ಅಂತಹ ಹಾಲು ಮಾರುಕಟ್ಟೆ ಪ್ರವೇಶಿಸಿ ನಮಗೆ ಅರಿವಿಲ್ಲದೆ ಔಷಧದ ದುಷ್ಪರಿಣಾಮ ಅಂಶಗಳು ನಮ್ಮನ್ನೂ ಬಾಧಿಸುವಂತಾಗಿದೆ.
ಸ್ಥಳೀಯವಾಗಿ ಲಭ್ಯವಿರುವ 'ನಾಯಿಕುಳಿ' (Scleropyrum pentandrum) ಸೊಪ್ಪಿನ ರಸ, ಜೇನು ಮಯಣ, ಸಾಸಿವೆ ಎಣ್ಣೆ ಇವುಗಳನ್ನು ಉಪಯೋಗಿಸಿ ಮುಲಾಮನ್ನು ತಯಾರಿಸಿದ್ದಾರೆ. ಕೆಚ್ಚಲುಬಾವು ರೋಗ ಕಾಣಿಸಿದ ತಕ್ಷಣ ಇದನ್ನು ಕೆಚ್ಚಲಿಗೆ ದಿನಕ್ಕೆ ಮೂರು ಬಾರಿಯಂತೆ 3-4 ದಿನಗಳ ಕಾಲ ಹಚ್ಚಿದರೆ ರೋಗ ವಾಸಿಯಾಗುತ್ತದೆ. ಈ ಔಷಧಿಯು ಯಾವುದೇ ರಾಸಾಯನಿಕ ಅಂಶಗಳನ್ನು ಒಳಗೊಂಡಿಲ್ಲವಾದ್ದರಿಂದ ದನದ ಹಾಲಿನಲ್ಲಿ ದುಷ್ಪರಿಣಾಮ ಅಂಶಗಳು ಕಾಣುವುದಿಲ್ಲ. ಸಂಶೋಧನಾ ಸಮಯದಲ್ಲಿ ಮೂವತ್ತಕ್ಕೂ ಅಧಿಕ ಹೈನುಗಾರರು ಈ ಪ್ರಯೋಜನವನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸ್ಥಳೀಯ ಪಶುವೈದ್ಯರು ಇವರ ಸಂಶೋಧನೆ ಒಂದು ಅತ್ಯುತ್ತಮ ಸಂಶೋಧನೆಯಾಗಿದ್ದು ಆರಂಭದ ಹಂತದಲ್ಲಿ ಕೆಚ್ಚಲು ಬಾವಿಗೆ ಉತ್ತಮ ಔಷಧವಾಗಿದೆ ಎಂದು ಶ್ಲಾಘಿಸಿದ್ದಾರೆ.
ಈ ಯೋಜನೆಯ ತಯಾರಿಯಲ್ಲಿ ಶ್ರೀ ಬದನಾಜೆ ಶಂಕರ ಭಟ್, ಪೂಗವನ ಫಾರ್ಮ್ಸ್ ವಿಟ್ಲ, ಪುತ್ತೂರು ತಾಲೂಕಿನ ಪಶು ವೈದ್ಯರಾದ ಡಾ. ಎಂ ಎಸ್ ಭಟ್ ಯೆಳ್ಮುಡಿ, ಡಾ. ಸತಿಶ್ ರಾವ್ ಪುತ್ತೂರು , ಡಾ.ರಾಮಪ್ರಕಾಶ್ ಉಪ್ಪಿನಂಗಡಿ, ಡಾ ಪ್ರಸನ್ನ ಹೆಬ್ಬಾರ್ ಪುತ್ತೂರು, ಡಾ.ಪ್ರಭಾಕರ್ ನಾಯಕ್ ಪಾಣಾಜೆ, ಯೆನೆಪೋಯ ರಿಸರ್ಚ್ ಸೆಂಟರ್ ನ ಉಪ ನಿರ್ದೇಶಕರಾದ ಶ್ರೀಮತಿ ರೇಖಾ ಪಿಡಿ, , NGSM ಕಾಲೇಜ್ -ನಿಟ್ಟೆಯ ಪ್ರಾಂಶುಪಾಲರಾದ ಡಾ. ಸಿ.ಎಸ್ ಶಾಸ್ತ್ರಿ, ಉಪ ಪ್ರಾಂಶುಪಾಲರಾದ ಡಾ. ನಾರಾಯಣ ಚರಾಯಲು, SDM ಕಾಲೇಜ್ - ಉಡುಪಿಯ ವೈದ್ಯರಾದ ಡಾ.ಸುನಿಲ್ ಕುಮಾರ್, ಪಶು ವೈದ್ಯ ಕಾಲೇಜ್-ಹೆಬ್ಬಾಳ- ಬೆಂಗಳೂರಿನ ವೈದ್ಯರಾದ ಡಾ. ಪಿ.ಟಿ ರಮೇಶ್, ವಿವೇಕಾನಂದ ಕಾಲೇಜ್ - ಪುತ್ತೂರಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ಕೃಷ್ಣ ಕಾರಂತ, ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ಗಣರಾಜ ಭಟ್, ಪುತ್ತೂರು ಪರಿಸರದ ಹಾಲು ಉತ್ಪಾದಕರು, ಸುದಾನ ಶಾಲೆಯ ಮುಖ್ಯ ಸಂಚಾಲಕರಾದ ಶ್ರೀ ವಿಜಯ್ ಹಾರ್ವಿನ್, ಆಡಳಿತ ಮಂಡಳಿ, ಮುಖ್ಯ ಗುರುಗಳಾದ ಶ್ರೀಮತಿ ಶೋಭಾ ನಾಗರಾಜ್, ಮತ್ತು ಶಿಕ್ಷಕರು ಸಹಕರಿಸಿದ್ದರು.

ಸಂಶೋಧನೆಗೆ ನವೋದಯ ಪ್ರೌಢ ಶಾಲೆ, ಬೆಟ್ಟಂಪಾಡಿಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಭುವನೇಶ್ವರಿ ಎಂ ಇವರು ಮಾರ್ಗದರ್ಶನ ನೀಡಿದ್ದರು.