Monday, April 27, 2015

ಬಂಟ್ವಾಳ (ದ.ಕ.)ದಲ್ಲಿ ಹಲಸು ಸಂತೆ

   ಡಾ.ಕೆ.ಎಸ್.ಕಾಮತರಿಂದ ಹಲಸು ಸಂತೆ ಉದ್ಗಾಟನೆ. ಚಿತ್ರದಲ್ಲಿ ಸುಂದರ ರಾವ್, ಗೇಬ್ರಿಯಲ್ ವೇಗಸ್, ಮೌನೀಶ್ ಮಲ್ಯ.
                                                   ಕೊಪ್ಪದ ವಿಜಯಕುಮಾರ್ ದಂಪತಿಗಳ ಮಳಿಗೆ
                                                            ಹಲಸಿನ ತಳಿ ಆಯ್ಕೆ
                                              ವಿಟ್ಲದ ವಿಶಾಲ್ ಐಸ್ ಕ್ರೀಂನವರು ಸಿದ್ಧಪಡಿಸಿದ ಹಲಸಿನ ಹಣ್ಣಿನ ಐಸ್ ಕ್ರೀಂ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು - ಬಿ.ಸಿ.ರೋಡು ಮೌನೀಶ ಮಲ್ಯದ ಸಾರಥ್ಯದಲ್ಲಿ 'ಹಲಸು ಪ್ರೇಮಿ ಕೂಟ' ಆಯೋಜಿಸಿದ ಚೊಚ್ಚಲ 'ಹಲಸು ಸಂತೆ'ಗೆ ಆಗಮಿನಿಸಿದವರು ಸಾವಿರಾರು ಮಂದಿ. ತಳಿ ಆಯ್ಕೆ, ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನ ಕಸಿ ಗಿಡಗಳು, ಹಲಸಿನ ಹಣ್ನಿನ ಐಸ್ ಕ್ರೀಂ, ಕಬಾಬ್, ಹಣ್ಣೀನ ಜ್ಯೂಸ್, ಮುಳುಕ, ಕೊಟ್ಟಿಗೆ, ಚಿಪ್ಸ್, ಹಪ್ಪಳ, ಮಾಂಬಳ, ಹಲ್ವ... ಹೀಗೆ ಹತ್ತಾರು ಹಲಸಿನ ಉತ್ಪನ್ನಗಳು ಆಸಕ್ತರ ಗಮನ ಸೆಳೆದಿತ್ತು. ಮೌನೀಶ ಮಲ್ಯರ 'ನವರಂಗ್' ಗೃಹದ ಆವರಣದಲ್ಲಿ ಸಮಾರಂಭ ಜರುಗಿತ್ತು. ಕರಿಂಗಾಣದ ಡಾ.ಕೆ.ಎಸ್.ಕಾಮತ್ ಹಲಸಿನ ಹಣ್ಣನ್ನು ತುಂಡರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದರು. ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ವೇಗಸ್ ಅಧ್ಯಕ್ಷತೆ ವಹಿಸಿದ್ದರು. ನಾಲ್ಕು ದಶಕಕ್ಕೂ ಮಿಕ್ಕಿ ಹಲಸನ್ನು ಪ್ರೀತಿಸಿ, ನೂರಾರು ಗಿಡಗಳನ್ನು ನೆಟ್ಟ ಹಲಸು ಪ್ರೇಮಿ ಪುಂಡಲೀಕ ನಾಯಕ್-ರಾಧಾ ನಾಯಕ್ ಇವರನ್ನು ಗೌರವಿಸಲಾಯಿತು. ಹಿರಿಯ ಪತ್ರಕರ್ತ ಶ್ರೀ ಪಡ್ರೆ ಸಮಾರೋಪ ಭಾಷಣ ಮಾಡುತ್ತಾ, ದೇಶ,ವಿದೇಶ ಮಟ್ಟದ ಹಲಸಿನ ಮೌಲ್ಯವರ್ಥಿತ ಉತ್ಪನ್ನಗಳತ್ತ ಬೆಳಕು ಚೆಲ್ಲಿದರು. ಸಹ್ಯಾಧ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಅಂಗವಾಗಿ ಆವಿಷ್ಕರಿಸಿದ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಯಂತ್ರವು ಗಮನ ಸೆಳೆದಿತ್ತು. "ಇಂತಹ ಸಂತೆಗಳು ಗ್ರಾಮ ಮಟ್ಟದಲ್ಲಿ ಜರುಗಬೇಕು. ನಿರ್ಲಕ್ಷಿತ ಹಲಸಿಗೆ ಮಾನ ಸಿಗಬೇಕು," ಎನ್ನವುದು ಮೌನೀಶರ ಆಶಯ. ಹಲಸು ಸಂತೆ ಸಮಾರೋಪಗೊಳ್ಳುತ್ತಿದ್ದಂತೆ ಕೆಲವು ಆಸಕ್ತರಲ್ಲಿ 'ಹಲಸಿನ ಫುಡ್ ಫೆಸ್ಟಿವಲ್' ಜರುಗಿಸುವ ಯೋಜನೆಗೆ ಬೀಜಾಂಕುರವಾಯಿತು.


0 comments:

Post a Comment