ದೇಸೀಯ ಅಕ್ಕಿ ತಳಿಗಳು ಆಹಾರಕ್ಕೂ, ಔಷದಿಗೂ ಸೈ. ಕೆಲವೇ ದಶಕಗಳ ಹಿಂದೆ ಅನ್ನಕ್ಕೊಂದು, ಆವಲಕ್ಕಿಗೊಂದು, ಕುಚಲಕ್ಕಿಗೊಂದು ,ಕಜ್ಜಾಯಕ್ಕೊಂದು, ತಂಬಿಟ್ಟಿಗೊಂದು, ರೊಟ್ಟಿಗೊಂದು, ಬಾಣಂತಿಯರ ಊಟಕ್ಕೊಂದು, ಮಕ್ಕಳ ವಾಂತಿಭೇದಿಗೊಂದು, ಕೈಕಾಲು ನೋವಿಗೊಂದು, ಎದೆನೋವಿಗೆ ಮತ್ತೊಂದು, ಸರ್ಪಸುತ್ತಿಗೆ ಸಹ ದೇಸಿ ಅಕ್ಕಿಯೇ ಔಷಧವಾಗಿತ್ತು. ದೊಡ್ಡ ಬೈರನೆಲ್ಲು, ನವರ, ಕರಿಭತ್ತ ಮತ್ತು ದೊಡ್ಡಿ ಭತ್ತ ಸೇರಿದಂತೆ ಹಲವು ಕೆಂಪಕ್ಕಿ ತಳಿಗಳು ಅನೇಕ ಕಾಯಿಲೆಗಳಿಗೆ ಔಷಧಿ.
ಈ ತಳಿಗಳನ್ನೆಲ್ಲಾ ಒಂದೆಡೆ ನೋಡುವ ಅವಕಾಶವನ್ನು ಬೆಂಗಳೂರಿನ ಸಹಜ ಸಮೃದ್ಧವು ಮಾಡಿಕೊಂಡಿದೆ. ಅದರಲ್ಲೂ ರಾಜಧಾನಿಯ ಗ್ರಾಹಕರಿಗೆ ಇದನ್ನು ಪರಿಚಯಿಸುವ ನಿಟ್ಟಿನಲ್ಲಿ ಮೇ 14 ಮತ್ತು 15ರಂದು ಬೆಂಗಳೂರಿನ 'ಗಾಂಧಿಭವನ'ದಲ್ಲಿ 'ಕೆಂಪಕ್ಕಿ ಸಂತೆ' ನಡೆಯಲಿದೆ. 'ಭತ್ತ ಉಳಿಸಿ ಆಂದೋಲನ' ಮತ್ತು 'ನಬಾರ್ಡ' ಈ ಸಂತೆಗೆ ಹೆಗಲೆಣೆ.
ಕರ್ನಾಟಕದಲ್ಲಿ ಭತ್ತ ಬೆಳೆಯುವ 19 ಜಿಲ್ಲೆಗಳಿಂದ ಸುಮಾರು 60 ಕ್ಕೂ ಹೆಚ್ಚು ಭತ್ತ ಸಂರಕ್ಷಕರು, ಮಹಿಳಾ ಗುಂಪುಗಳು, ಕೃಷಿಕರು ಭಾಗವಹಿಸುತ್ತಾರೆ. ವಿವಿಧ ದೇಸಿ ಕೆಂಪಕ್ಕಿ ತಳಿಗಳ ಪ್ರದರ್ಶನ, ಮಾರಾಟವಿದೆ. ಜತೆಗೆ ಅಕ್ಕಿ ಉತ್ಪನ್ನಗಳು ಕೂಡಾ.
(ಸಂಪರ್ಕ : 98808 62058)
0 comments:
Post a Comment