Monday, May 16, 2011

ವಯನಾಡು ಹಲಸು ಉತ್ಸವ



ಕೇರಳದ ವಯನಾಡಿನ ಕಲ್ಪೆಟ್ಟಾದ ಎಸ್.ಕೆ.ಎಂ.ಜೆ.ಪ್ರೌಢ ಶಾಲೆಯಲ್ಲಿ ಆರನೇ ಹಲಸು ಮೇಳವು ಮೇ. 20 ರಿಂದ 24ರ ತನಕ ನಡೆಯಲಿದೆ. ಉರವಿನ 'ಬಿದಿರು ಗ್ರಾಮ'ದ ಸಾರಥ್ಯ.

ಮೇಳದಲ್ಲಿ ಹಲಸಿನ ಮೌಲ್ಯವರ್ಧನೆಗೆ ಒತ್ತು. ಇದಕ್ಕಾಗಿ ಹಪ್ಪಳ, ಜೆಲ್ಲಿ, ಹಲಸಿನ ಹಣ್ಣಿನ ಬಾರ್, ಬೆರಟ್ಟಿ ಮೊದಲಾದ ಜನಪ್ರಿಯ ಉತ್ಪನ್ನಗಳ ತಯಾರಿ ಕುರಿತು ಸ್ಥಳೀಯ ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ಇವರು ಸಿದ್ಧಪಡಿಸಿದ ಉತ್ಪನ್ನಗಳು ಮೇಳದಲ್ಲಿ ಲಭ್ಯವಾಗಲಿದೆ.

ಹಲಸಿನ ಕುರಿತು ಮುಕ್ತ ಸಂವಾದ, ಪ್ರದರ್ಶನ, ಉತ್ಪನ್ನ ತಯಾರಿಯ ನೇರ ಪ್ರಾತ್ಯಕ್ಷಿಕೆ, ಶಾಲಾ ವಿದ್ಯಾರ್ಥಿಗಳಿಗೆ ಹಲಸಿನ ಸ್ಪರ್ಧೆಗಳು ನಡೆಯಲಿವೆ. 2006ರಲ್ಲಿ ಮೊತ್ತಮೊದಲಿಗೆ ಉರವು ಸಂಸ್ಥೆಯು ಹಲಸಿನ ಉತ್ಸವ ಸಂಘಟಿಸಿತ್ತು. ಅಂದು ಹೊತ್ತಿಸಿದ ದೀಪ ಕನ್ನಾಡಿನಲ್ಲೂ ಪಸರಿಸಿ ಹಲವು ಮೇಳಗಳ ಸಂಘಟನೆಗೆ ನಾಂದಿಯಾಗಿರುವುದು ಇತಿಹಾಸ.

ಕಲ್ಪೆಟ್ಟಾ ಬಸ್ಸಿನಲ್ಲಿ ಕೋಜಿಕ್ಕೋಡಿನಿಂದ ಎರಡು ಗಂಟೆ ದೂರ. ಮೈಸೂರಿನಿಂದ ಮೂರು ಗಂಟೆ.

ಈ ಬರಹ ಸಿದ್ಧಪಡಿಸುವ ಹೊತ್ತಿಗೆ ಮೇ 20ಕ್ಕೆ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಕೇರಳದಲ್ಲಿ ಹರತಾಳ ಎಂಬ ಸುದ್ದಿ ಬಂದಿದೆ. ಹಾಗಾದರೆ ಉತ್ಸವವನ್ನು 20ಕ್ಕೆ ಬದಲು 21ರಿಂದ ನಡೆಸಬೇಕಾಗಬಹುದು.

jackfruitfestival@gmail.com
PP Daniel – 097443 00120
CD Suneesh – 096057 30334

0 comments:

Post a Comment