ಚಿತ್ರ , ಬರಹ : ಚಂದ್ರಶೇಖರ ಏತಡ್ಕ
ಸುಮಾರು ಐವತ್ತು ವರ್ಷಗಳಿಂದಲೂ ಈ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ದೇವರಿಗೆ ವಿಶೇಷ ಸೇವೆ ನಡೆದು ಬರುತ್ತಿದೆ. ಅಕ್ಕಿ ಹುಡಿ ,ತುಪ್ಪ ,ತೆಂಗಿನ ಕಾಯಿ ,ಬೆಲ್ಲ ,ಏಲಕ್ಕಿ ,ಹಲಸಿನ ಹಣ್ಣಿನ ಕೊಚ್ಚೆಲು ಗಳ ಪಾಕದಲ್ಲಿ 'ಅಪ್ಪ' ಸಿದ್ಧ ಗೊಳ್ಳುತ್ತವೆ .ಊರ ಭಕ್ತಾದಿಗಳು ಪಾಲ್ಗೊಂಡು 'ಹಲಸಿನ ಮಹಿಮೆ ದೇವರ ಸಮ್ಮುಖದಲ್ಲಿ ಕೊಂಡಾಡುತ್ತಾರೆ .ಬಹುಶ ; ಒಂದು ಹಣ್ಣಿಗೆ ಈ ಗೌರವ ನೀಡುವ ಭಕ್ತಾದಿಗಳ ಮನೋಭೂಮಿಕೆಯಲ್ಲಿ ಗತಕಾಲದ ಆ ಹಸಿವಿನ ದಿನಗಳಲ್ಲಿ ಹಲಸಿನ ಕಾಯಿ ಹೊಟ್ಟೆ ತುಂಬಿಸಿದ ಉಪಕಾರ ಸ್ಮರಣೆ ಇರಬಹುದು .
'ಕೊಚ್ಹಿದರೆ ನಿ ಗೋವುಗಳಿಗೆ ಮಡ್ಡಿಯಾದೆ, ಬಿಚ್ಚಿದರೆ ಕಷ್ಟದ ಮಳೆಗಾಲ ಪೂರ್ಣ ಮ್ರಷ್ಟಾನ್ನ ಭೋಜನವಾದೆ ''ಎನ್ನುವ ಕೃತಾರ್ಥ ಭಾವ ಹಳ್ಳಿಗರಲ್ಲಿ. ಹಳ್ಳಿಗಳಲ್ಲಿ ಧಾರಾಳ ಲಭ್ಯವಿರುವ ಈ ಫಲ ವಸ್ತುವಿನ ಸರ್ವಾಂಗವೂ ವಿವಿಧ ಅಡುಗೆ ರೀತಿ ರಿವಾಜಿಗೆ ಒಗ್ಗಿಕೊಳ್ಳುವುದು, ಮನೆಯ ಸಕಲರನ್ನು ಸೆಳೆಯುವ ಏಕೈಕ ಹಣ್ಣು .ಹಾಗೆಂದು ದಿನಾ ಬಳಸಿದಾಗಳೂ 'ಬೋರು 'ಹೊಡೆಸದೇ ಇರುವ ತರಕಾರಿಯಾಗಿಯೂ ಇದರ ಮಹಿಮೆ ...ಸ್ತ್ರೀ ..ಪುರುಷ ...ಭಕ್ತಾದಿಗಳ ಮನಸಲ್ಲಿ ಹಾದು ಹೋಗುತ್ತವೆ.
ಮನೆಯಲ್ಲಿ ಊಟಕ್ಕೆ ತತ್ವಾರ ಆದಾಗ ಬಂದ ಭಂಧುಗಳಿಗೆ ರುಚಿ. ರುಚಿಯಾದ ಹಣ್ಣಿನ ತೊಳೆ ಯನ್ನು ನೀಡಿ ಮತ್ತೆ ಊಟದ ತಟ್ಟೆ ಇಟ್ಟಾಗ ಒಂದಿಸ್ತು ಗಂಜಿ ಸಾಕಾಗಿ ಮರ್ಯಾದೆ ಉಳಿದಘಟನೆಯನ್ನು ತಾಯಿಯೊಬ್ಬರು ದೇವಸ್ಥಾನದ ನಡೆಯಲ್ಲಿ ನೆನೆಸಿಕೊಂಡರು.
ಇಂತಿಪ್ಪ ಆಹಾರ ಭದ್ರತೆ ನೀಡಿದ ಹಲಸಿನ ಹಣ್ಣನ್ನು ದೇವರಿಗೆ ಒಪ್ಪಿಸಿ, ನಮೋ ನಮೋ ಎಂದು ವರ್ಷಕ್ಕೊಮ್ಮೆಯಾದರೂ ಹೇಳದಿದ್ದರೆ ಹೇಗೆ ?
1 comments:
Such community gatherings are disappearing from our culture.It is commendable that they are still being followed in some village temples.
Nice post.
As first-time visitor, I went thro' some older posts...informative blog.
Post a Comment