ಧಾರವಾಡದ ಕೃಷಿ ಮಾಧ್ಯಮ ಕೇಂದ್ರ 2011-12ನೇ ಸಾಲಿನ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬರುವ ಅಕ್ಟೋಬರ್ ನಲ್ಲಿ ಶುರುವಾಗಲಿರುವ ಅಂಚೆ ತೆರಪಿನ (ಕರೆಸ್ಪಾಂಡೆನ್ಸ್) ತರಬೇತಿ ಒಂದು ವರ್ಷ ಅವಧಿಯದ್ದಾಗಿರುತ್ತದೆ.
ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಮಹತ್ವ ಮತ್ತು ಸ್ವರೂಪ, ಬರಹದ ಪ್ರಕಾರಗಳು, ಬರವಣಿಗೆಯ ತಂತ್ರಗಾರಿಕೆ, ಛಾಯಾ ಪತ್ರಿಕೋದ್ಯಮ ಇವೇ ಮುಂತಾದ ವಿಷಯಗಳ ಕುರಿತು ಅನುಭವಿ ಬರಹಗಾರರಿಂದ ತರಬೇತಿ ನೀಡಲಾಗುವುದು. ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಅವಕಾಶವಿದೆ. ಕೃಷಿಕರು, ಕಾಲೇಜು ಮತ್ತು ವಿಶ್ವವಿದ್ಯಾಲ0ುಗಳಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಸ್ವ0ಯಂ ಸೇವಾ ಸಂಸ್ಥೆಗಳ ಕಾರ್ಯುಕರ್ತರು, ಕೃಷಿ-ಗ್ರಾಮೀಣ ಸಂಬಂಧಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ತರಬೇತಿಯಿಂದ ವಿಶೇಷ ಪ್ರಯೋಜನವಿದೆ. ಇತರ ಆಸಕ್ತರೂ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ - ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಕಲಿಕೆ. ಕನ್ನಡ ಚೆನ್ನಾಗಿ ಬರೆಯಬಲ್ಲ ಇತರ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ವಯೋಮಿತಿ 50 ವರ್ಷ.
ಕನ್ನಡದಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಬೆಳವಣಿಗೆಗಾಗಿ ಕೃಷಿ ಮಾಧ್ಯಮ ಕೇಂದ್ರ ಎಂಟು ವರ್ಷಗಳ ಹಿಂದೆ ಈ ತರಬೇತಿ ಆರಂಭಿಸಿದೆ. ಮೊದಲ ಏಳು ತಂಡಗಳಲ್ಲಿ ತೇರ್ಗಡೆಯಾದ 80 ಮಂದಿಯನ್ನು 'ಕಾಮ್ ಫೆಲೋ'ಗಳೆಂದು ಪರಿಗಣಿಸಲಾಗಿದೆ. ಎಂಟನೇ ತಂಡದಲ್ಲಿ 30 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಇದುವರೆಗೆ ತರಬೇತಿ ಪಡೆದವರು ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ.
ಮಾಹಿತಿ ಪತ್ರ ಪಡೆದುಕೊಳ್ಳಲು ಕೊನೆಯ ದಿನ ಜುಲೈ 30, 2011. ಆಗಸ್ಟ್ 15ರ ಒಳಗಾಗಿ ಅರ್ಜಿ ನಮಗೆ ತಲುಪಬೇಕು. ಸೆಪ್ಟೆಂಬರ್ 5ಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗುವುದು.
ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನವೆಂಬರ್ 11ರಿಂದ 13ರ ವರೆಗೆ ಧಾರವಾಡ ಸಮೀಪದ 'ಸುಮನ ಸಂಗಮ' ಕಾಡು ತೋಟದಲ್ಲಿ ಪ್ರಾಥಮಿಕ ಶಿಬಿರ ನಡೆಸಲಾಗುವುದು. ಇದರಲ್ಲಿ ಅನುಭವಿ ಅಭಿವೃದ್ಧಿ ಬರಹಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಲೇಖನ ಬರವಣಿಗೆ0ುಲ್ಲಿ ಮಾಹಿತಿ-ಮಾರ್ಗದರ್ಶನ ನೀಡಲಿದ್ದಾರೆ. ಕ್ಷೇತ್ರಭೇಟಿ ಹಾಗೂ ಬರವಣಿಗೆಯಲ್ಲಿ ಪ್ರಾಯೋಗಿಕ ತರಬೇತಿ ಕೂಡ ಇರುತ್ತದೆ.
ಮಾಹಿತಿ ಪತ್ರ, ಅರ್ಜಿ ಮತ್ತಿತರ ವಿವರಕ್ಕಾಗಿ 50 ರೂಪಾಯಿ ಮೌಲ್ಯದ ಅಂಚೆಚೀಟಿಯನ್ನು ಜೊತೆಯಲ್ಲಿಟ್ಟು ಈ ವಿಳಾಸಕ್ಕೆ ಪತ್ರ ಬರೆಯಬೇಕಾಗಿ ಕೋರಿಕೆ: ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580 008.
Home › Unlabelled › ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿ
0 comments:
Post a Comment