Saturday, October 1, 2011

ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ನೀಡುತ್ತಿರುವ ರಾಜ್ಯಮಟ್ಟದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಜಿ. ಗಣಪತಿ ಭಟ್ ಹಾಗೂ ಲೀಲಾ ನಾ. ಕೌಜಗೇರಿ ಅವರು ಆಯ್ಕೆಯಾಗಿದ್ದಾರೆ. ಕನ್ನಡದಲ್ಲಿ ಅರ್ಥಪೂರ್ಣ ಕೃಷಿಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಕಳೆದ ಹತ್ತು ವರ್ಷಗಳಿಂದ ಈ ಪ್ರಶಸ್ತಿ ನೀಡುತ್ತಿದೆ.

ರಾಮನಗರ ಜಿಲ್ಲೆ, ಕನಕಪುರ ತಾಲೂಕಿನ ಹಾರೋಹಳ್ಳಿಯ ಕೃಷಿಕ ಜಿ. ಗಣಪತಿ ಭಟ್ ಬರೆದ 'ತೋಟಗಾರಿಕೆಯ ಕುರಿಯನ್ ಡಾ. ಮರಿಗೌಡ' (ಅಡಿಕೆಪತ್ರಿಕೆ, ಏಪ್ರಿಲ್ 2011) ಹಾಗೂ ಬೆಳಗಾವಿಯ ಗೋಕಾಕ್ನಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿರುವ ಲೀಲಾ ನಾ. ಕೌಜಗೇರಿ ಬರೆದ 'ಅಜ್ಜಿಯೇ ಮಾರ್ಕೆಟಿಂಗ್ ಮ್ಯಾನೇಜರ್' (ಅಡಿಕೆ ಪತ್ರಿಕೆ, ನವೆಂಬರ್ 2010) ಲೇಖನಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಗಣಪತಿ ಭಟ್ ಹಾಗೂ ಲೀಲಾ ಕೌಜಗೇರಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಪ್ರಶಸ್ತಿ ಐದು ಸಾವಿರ ರೂಪಾಯಿ ನಗದು ಪುರಸ್ಕಾರ, ಪರಿಸರ ಶಿಲ್ಪ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 13, 2011ರಂದು ಧಾರವಾಡ ಸಮೀಪದ ದಡ್ಡಿಕಮಲಾಪುರ ಗ್ರಾಮದಲ್ಲಿರುವ 'ಸುಮನ ಸಂಗಮ' ಕಾಡುತೋಟದಲ್ಲಿ ನಡೆಯಲಿದೆ.

0 comments:

Post a Comment