Saturday, July 13, 2019

ಕರಾವಳಿಯಲ್ಲಿ ಹಬ್ಬುತ್ತಿರುವ ಕ್ಯಾಬೇಜ್


ಹುಬ್ಬಳ್ಳಿ ಸನಿಹದ ಒಂದು ಗ್ರಾಮೀಣ ಹೋಟೇಲ್. ಊಟದ ತಟ್ಟೆಯಲ್ಲಿ ಖಾದ್ಯಗಳ ಜತೆ ಕ್ಯಾಬೇಜಿನ ಸಲಾಡ್ ಸೇರಿತ್ತು. ಅಲ್ಲೇ ಪಕ್ಕದಲ್ಲಿ ಕ್ಯಾಬೇಜ್ ಬೆಳೆಯುವ ಹೊಲವಿದ್ದು, ಕೀಟನಾಶಕ ಸಿಂಪಡಣೆ ನಡೆಯುತ್ತಿತ್ತು. “ಇದೆಲ್ಲಾ ಮಾಮೂಲಿ, ಏನೂ ತೊಂದರೆಯಿಲ್ಲ, ಧಾರಾಳ ತಿನ್ನಬಹುದು,” ನನ್ನ ಗುಮಾನಿಯನ್ನು ಊಹಿಸಿದ ಹೋಟೆಲ್ ಮಾಲಿಕನಿಂದ ಸಮರ್ಥನೆ

  ಕೀಟನಾಶಕ ಅಂದರೆ ಮಾಮೂಲಿ ಎನ್ನುವಷ್ಟು ಸಲೀಸು! ಅದನ್ನು ವಿಷವೆಂದು ಒಪ್ಪದ ಮನಸ್ಥಿತಿ. ‘ಬೆಳೆ ಉಳಿಸ್ಕೋಬೆಲ್ಲಾ.. ಕೀಟಗಳು ಸಾಯ್ತವ್ರಿಜತೆಯಲ್ಲಿ ಕುಳಿತಿದ್ದ ಸಹಭೋಜನಕಾರನಿಂದ ಪ್ರಶಂಸೆ. ಕೀಟಗಳಿಗೆ ಮಾರಕವಾದ ವಿಷವು ಮಾನವನಿಗೆ ತೊಂದರೆ ಮಾಡಲಾರದು ಎಂಬ ಧೈರ್ಯಕ್ಕೆ ಮೆಚ್ಚಲೇಬೇಕು. ಅಂದಿನಿಂದ ಕ್ಯಾಬೇಜ್, ಕಾಲಿಫ್ಲವರಿಗೆ ವಿಚ್ಚೇದನ ನೀಡಿದ್ದೆ.

ಈಚೆಗೆ ದೂರವಾದ ನಾಡೋಜ ಡಾ.ಎಲ್.ನಾರಾಯಣ ರೆಡ್ಡಿಯವರು ಗೋಷ್ಠಿಯೊಂದರಲ್ಲಿ ಹೇಳಿದ ಮಾತು ಮರೆಯುವುಂತಹುದಲ್ಲ. “ಟೊಮೆಟೋ, ದೊಣ್ಣೆಮೆಣಸು, ಕ್ಯಾಬೇಜ್, ಕಾಲಿಫ್ಲವರ್ಇವುಗಳು ಕೀಟನಾಶಕ ಸಿಂಪಡಣೆಯನ್ನು ಬೇಡುವ ತರಕಾರಿಗಳು. ಮೂರು ತಿಂಗಳ ಬೆಳೆಯಾದರೂ ಸೇರುವ ವಿಷವು ಘೋರ ಆತಂಕಕಾರಿ. ಅದನ್ನು ಸೇವಿಸಿದರೆ ಪರಿಣಾಮ ಹೇಗಿರಬಹುದು? ಕೃಷಿಕನಿಗೆ ಬೆಳೆ ಉಳಿಸಿಕೊಳ್ಳುವುದು ಅನಿವಾರ್ಯ. ಯಾವ ಬೆಳೆಗೆ ಏನನ್ನು, ಎಷ್ಟು ಸಿಂಪಡಿಸಬೇಕೆನ್ನುವ ಜ್ಞಾನವನ್ನು ಅವರುಗಳನ್ನು ಮಾರುವ ಅಂಗಡಿಗಳೇ ನೀಡುತ್ತಿವೆ! ಇದು ದುರಂತ.

 ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯ ವೆಂಕಟಕೃಷ್ಣ ಶರ್ಮರಲ್ಲಿ ಜರುಗಿದಚಳಿಗಾಲದ ತರಕಾರಿಉತ್ಸವಕಲಾಪದಲ್ಲಿ ಭಾಗವಹಿಸಿದಾಗ ರೆಡ್ಡಿಯವರ ಮಾತು ರಿಂಗಣಿಸಿತು. ಕ್ಯಾಬೇಜ್, ಕಾಲಿಫ್ಲವರ್ ತರಕಾರಿಯನ್ನು ವಿಷರಹಿತವಾಗಿ ಬೆಳೆದವರ ಅನುಭವಕ್ಕೆ ಕಿವಿಯಾದಾಗ ಕ್ಯಾಬೇಜ್ ಮೋಹ ಮತ್ತೊಮ್ಮೆ ಆವರಿಸಿತು!
 
 ಕರಾವಳಿ ಮತ್ತು ಕರಾವಳಿಗೆ ಹೊಂದಿಕೊಂಡ ಕೇರಳದಲ್ಲಿ ಏನಿಲ್ಲವೆಂದರೂ ನಾಲ್ಕುನೂರಕ್ಕೂ ಮಿಕ್ಕಿ ಚಳಿಗಾಲದ ತರಕಾರಿಗಳನ್ನು ವಿಷರಹಿತವಾಗಿ ಬೆಳೆಯಲು ಆರಂಭಿಸಿದ್ದಾರೆ. ಮಾರುಕಟ್ಟೆ ಉದ್ದೇಶ ಇಲ್ಲದಿದ್ದರೂ ಮನೆ ಬಳಕೆಗಾಗಿ ಬೆಳೆಯುವರ ಸಂಖ್ಯೆ ವೃದ್ಧಿಸಿದೆ. ಬೆಳೆಯುವ ಹುಮ್ಮಸ್ಸು ಮೂಡುತ್ತಿದೆ. ಮುಂಡಾಜೆಯ ರಾಮಣ್ಣ ಗೌಡರು ತರಕಾರಿ ಕೃಷಿಕರು. ಬಾರಿ ಹೂಕೋಸು ಬೆಳೆದಿದ್ದಾರೆ. ಶೇ.60ರಷ್ಟು ಹೂಕೋಸು ಕೈಹಿಡಿದಿದೆ. ಮಂಗಳೂರಿನ ಸಾವಯವ ಸಂತೆಯಲ್ಲಿ ಇವರ ತರಕಾರಿಗೆ ಬೇಡಿಕೆ. ವಾಹನದಿಂದ ಇಳಿಸುವಷ್ಟು ಪುರುಸೊತ್ತಿಲ್ಲ! ಜನರು ಮುಗಿ ಬೀಳುತ್ತಾರಂತೆ

ಇನ್ನೊಬ್ಬರು ಉಡುಪಿ ತಾಲೂಕಿನ ರಾಮಚಂದ್ರ ಪೈ. ನೆರಳುಮನೆಯಲ್ಲಿ ಕ್ಯಾಬೇಜ್, ಹೂಕೋಸನ್ನು ಬೆಳೆಸುತ್ತಿದ್ದಾರೆ. ಕಾಂಡ ಕತ್ತರಿಸುವ ಹುಳುಗಳು ಅವರ ನಿದ್ದೆಗೆಡಿಸಿದ್ದುವು. ಕೀಟನಾಶಕದ ಬದಲಿಗೆ ಸಾವಯವ ವಿಧಾನದಲ್ಲಿ ಮಾಡಿಕೊಂಡ ಸಿಂಪಡಣೆಗಳಿಂದ ಸ್ವಲ್ಪ ಮಟ್ಟಿಗೆ ನಿಯಂತ್ರಣವಾಗಿದೆ. “ದೊಡ್ಡ ಪ್ರಮಾಣದಲ್ಲಿ ಬೆಳೆಸಬೇಕು. ನಮ್ಮ ಮಕ್ಕಳ ಆರೋಗ್ಯವನ್ನಾದರೂ ಕಾಪಾಡಿಕೊಳ್ಳೋಣಎನ್ನುತ್ತಾರೆ.

ಮುಳಿಯದ ಮಾತುಕತೆಯಲ್ಲಿ ಇವರಿಬ್ಬರು ತಮ್ಮ ಹೂಕೋಸು, ಕ್ಯಾಬೇಜ್ ಕೃಷಿಯ ಅನುಭವಗಳನ್ನು ತೆರೆದಿಟ್ಟರು. ಮುಖ್ಯವಾಗಿ ತರಕಾರಿಗಳಿಗೆ ಬಾಧಿಸುವ ವಿವಿಧ ಕೀಟಗಳ ಸಂಹಾರಕ್ಕೆ ಕೀಟನಾಶಕಗಳನ್ನು ಬಳಸುವುದು ಅನಿವಾರ್ಯ. ಬೆಂಗಳೂರು ಸುತ್ತಮುತ್ತ ಪ್ರದೇಶದ ಹೊಲಗಳಿಗೆ ಹೋದರೆ ಕಣ್ಣಾರೆ ನೋಡಬಹುದು. ಇದಕ್ಕೆ ಪರ್ಯಾಯವಾಗಿ ತಾವೇ ಮಾಡಿಕೊಂಡ ಸಿಂಪಡಣಾ ಉಪಾಯಗಳು ಫಲಿತವಾದ ಯಶೋಗಾಥೆಗೆ ಕಿವಿಯಾದ ಅನೇಕರು ಸಿಂಪಡಣಾ ತಯಾರಿಯ ಫಾರ್ಮುಲಾಗಳನ್ನು ಕಾಗದಕ್ಕಿಳಿಸಿಕೊಂಡರು.
ಕರಾವಳಿಯಲ್ಲಿ ಇತರ ತರಕಾರಿಗಳ ಜತೆ ಬಿಸಿಲು ಸೀಮೆಯ ತರಕಾರಿಯೂ ಗೆಲ್ಲಬಲ್ಲದು ಎನ್ನುವುದನ್ನು ಹಲವರು ತೋರಿಸಿಕೊಟ್ಟಿದ್ದಾರೆ. ಮಾದರಿಗಳು ಕಣ್ಣ ಮುಂದಿದ್ದರೆ ಅನುಸರಿಸಲು ಸಹಜವಾಗಿ ಧೈರ್ಯ ಬರುತ್ತದೆ. ಈಗಾಗಲೇ ಬೆಳೆದಿರುವ ಕೃಷಿಕರ ಅನುಭವಗಳು ಹೊಸದಾಗಿ ಕ್ಷೇತ್ರಕ್ಕೆ ಕಾಲಿಡುವವರಿಗೆ ಸ್ಫೂರ್ತಿ. ವಿಷ ರಹಿತವಾದ ಕ್ಯಾಬೇಜ್, ಹೂಕೋಸುಗಳು ಮಾರುಕಟ್ಟೆಯಲ್ಲಿ ಗೆಲ್ಲಬಹುದು

ಮುಳಿಯದ ಮಾತುಕತೆ ಮುಗಿಯುತ್ತಿದ್ದಂತೆ ಟೊಮೆಟೋ ಕೃಷಿಯತ್ತ ಹಲವರು ಒಲವು ತೋರಿಸಿದ್ದರು. ಕೇರಳ ಕೃಷಿ ವಿಶ್ವವಿದ್ಯಾಲಯವು ಈಗಾಗಲೇ ಟೊಮೆಟೋ ಗಿಡಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು ಇದಕ್ಕೆ ರೋಗಭಯ ಇಲ್ಲವೆನ್ನುವುದು ಬೆಳೆದವರ ಅನುಭವ. ವಿವಿಯ ಕಸಿ ಟೊಮೆಟೋ ಗಿಡಗಳು ಕೇರಳದಲ್ಲಿ ಉತ್ತಮ ಸ್ವೀಕೃತಿ ಪಡೆದಿದೆ. ಸುದ್ದಿಯ ಹಿನ್ನೆಲೆಯಲ್ಲಿ ಬಹುಶಃ ನಿಕಟಭವಿಷ್ಯದಲ್ಲಿ ಟೊಮೆಟೋ ಆಸಕ್ತರು ರೂಪುಗೊಳ್ಳುವ ಸಾಧ್ಯತೆಯಿದೆ

ಕಸಿ ಟೊಮೆಟೋ ಬೆಳೆಯ ಅಧ್ಯಯನ ಮಾಡಿದ ಹಿರಿಯ ಪತ್ರಕರ್ತ ಶ್ರೀಪಡ್ರೆ ಹೇಳುತ್ತಾರೆ, “ಕಾಸರಗೋಡಿನಲ್ಲಿ ವರುಷ ಐವತ್ತು ಸಾವಿರ ರೂಪಾಯಿಗಳ ಟೊಮೆಟೋ ಕಸಿ ಗಿಡ ತ್ರಿಶೂರಿನ ಕೇರಳ ಕೃಷಿ ವಿವಿಯಿಂದ ತಂದು ನೆಟ್ಟಿರುವುದರಲ್ಲಿ ಉತ್ತಮ ಬೆಳೆ ಬಂದಿದೆ. ಕೃಷಿಕರೂ ಖುಷ್ ಆಗಿದ್ದಾರೆ. ವಿಚಾರದಲ್ಲಿ ಕೇರಳದ ಸಂಸ್ಥೆ ಹಾಗೂ ಅದರ ಹಿಂದಿರುವ ವಿಜ್ಞಾನಿಗಳು ಮೆಚ್ಚುಗೆಗೆ ಅರ್ಹರು. ನಮ್ಮ ವಾತಾವರಣಕ್ಕೆ ಹೊಂದಿರುವ ತಳಿ ಅಭಿವೃದ್ಧಿ ಮಾಡಿ ವಿತರಿಸುವ ಮೂಲಕ ಕ್ರಾಂತಿ ಮಾಡಿದ್ದಾರೆ.”

ಮುಳಿಯದ ತರಕಾರಿ ಉತ್ಸವವನ್ನು ಕೇಪು-ಉಬರು ಹಲಸು ಸ್ನೇಹಿ ಕೂಟ ಆಯೋಜಿಸಿತ್ತು. ಕೂಟವು ಹಿಂದೆ ತರಕಾರಿ, ಮಾವು, ಹಲಸು, ಪುನರ್ಪುಳಿ, ಎಲೆ ತರಕಾರಿ, ಗೆಡ್ಡೆ ತರಕಾರಿ, ಸಿರಿಧಾನ್ಯ.. ಮೊದಲಾದವುಗಳ ಕುರಿತು ಕಲಾಪಗಳನ್ನು ಹಮ್ಮಿಕೊಂಡಿರುವುದು ಉಲ್ಲೇಖನೀಯ

ಊರು ಸೂರು / 25-2-2019

0 comments:

Post a Comment