Sunday, September 15, 2019

ಶ್ರೀ ‘ಐ.ಆರ್.8’

     ಕೃಷಿಕ ಸ್ನೇಹಿತ ವಿಟ್ಲ-ಮುಳಿಯದ ವಿ.ಕೆ.ಶರ್ಮರ ಮೊತ್ತಮೊದಲ ಭೇಟಿಯ ನೆನಪಿಗೆಭತ್ತದ ಕಥೆಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಸುಮಾರು ಅರುವತ್ತು ಪುಟಗಳ ಪುಸ್ತಿಕೆ. 1995ರಲ್ಲಿ ಮೊದಲ ಮುದ್ರಣ. ದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್ ಇಂಡಿಯಾ ಪ್ರಕಾಶಿಸಿತ್ತು. ಪುಸ್ತಕದ ಬೆಲೆ ಒಂಭತ್ತು ರೂಪಾಯಿ. ಮೂಲ ಲೇಖಕರು ರಮೇಶ್ ದತ್ತ ಶರ್ಮ. ಅನುವಾದಿಸಿದ್ದಾರೆ, ಜಿ.ಆರ್.ರಂಗಸ್ವಾಮಯ್ಯ.
     ಭತ್ತದ ಹಿಂದಿರುವ ರೋಚಕ ವಿಚಾರಗಳ ಹೂರಣ ಕುತೂಹಲಕರ. ದೇಶ, ವಿದೇಶಗಳ ಬದುಕಿನಲ್ಲಿ ಭತ್ತವು ಹಾಸುಹೊಕ್ಕಾಗಿದ್ದರ ಅನೇಕ ಸಂಗತಿಗಳನ್ನು ಲೇಖಕರು ನಿರೂಪಿಸಿದ್ದಾರೆ. ಪುಸ್ತಕದಿಂದ ಆಯ್ದ ಒಂದಷ್ಟು ವಿಚಾರಗಳು ನಿಮಗಾಗಿ:
     ಜಪಾನಿಗೆ ಭತ್ತವು ಮೂರು ಸಾವಿರ ವರುಷಗಳ ಹಿಂದೆ ಕಾಲಿಟ್ಟಿತು. ಬಹುಶಃ ಪೂರ್ವಚೀನಾ, ಕೊರಿಯಾದಿಂದ ಬಂದಿರಬಹುದು ಎನ್ನಲಾಗಿದೆ. ಚಿಕ್ಕಂದಿನಲ್ಲೇ ಮಕ್ಕಳಿಗೆ ಭತ್ತದ ಕುರಿತು ಗೌರವಾದರಗಳನ್ನು ನೀಡಬೇಕೆನ್ನುವುದನ್ನು ಕಲಿಸಲಾಗುತ್ತದೆ. ಹಿರಿಯರಿಗೆ ಸಲ್ಲುವ ಗೌರವ ಭತ್ತಕ್ಕೂ ಸಲ್ಲುತ್ತದೆ. ಆಫ್ರಿಕಾದಲ್ಲಿ ತಾನಾಗಿಯೇ ಕಾಡುಸಸ್ಯದಂತೆ ಬೆಳೆದ ಭತ್ತವು ಮುಂದೆ ಕೃಷಿಯಾಗಿ ಅಭಿವೃದ್ಧಿಯಾಯಿತು. ಅಲ್ಲಿನ ಭತ್ತದ ಸಹವಾಸಕ್ಕೆ ಮೂರುವರೆ ಸಾವಿರ ವರುಷಗಳ ಇತಿಹಾಸ.
     ಏಷ್ಯಾದ ಭತ್ತವು ಆಫ್ರಿಕಾಕ್ಕೆ ಕ್ರಿಸ್ತಪೂರ್ವಕ್ಕೆ ಕೆಲವು ಶತಮಾನಗಳ ಮುಂಚೆ ಜಾವಾದ ಮೂಲಕ ತಲುಪಿತು. ಇಲ್ಲಿಗದು ಗಾಳಿಯ ಒತ್ತಡಕ್ಕೆ ಸಿಲುಕಿದ ವ್ಯಾಪಾರಿ ಹಡಗಿನ ಮೂಲಕ ಬಂದಿದೆಯಂತೆ! ಆಫ್ರಿಕಾದಲ್ಲಿ ತೀರ ಪ್ರದೇಶದಲ್ಲಿರುವ ಮಡಗಾಸ್ಕರ್ನಲ್ಲಿ ನೆಲೆಸಿದವರು ಭತ್ತದ ಕೃಷಿಯನ್ನು ಆರಂಭಿಸಿದರು. ಯುರೋಪಿಗೆ ಭತ್ತವು ಅನೇಕ ಮಾರ್ಗಗಳಿಂದ ತಲುಪಿತು. ಒಂದರಿಂದ ಹನ್ನೊಂದನೇ ಶತಮಾನದ ನಡುವೆ ಅರಬ್ ವ್ಯಾಪಾರಿಗಳೊಂದಿಗೆ ಇರಾನ್, ಬಳಿಕ ಈಜಿಪ್ಟಿಗೂ ತಲುಪಿತು. ಅಲ್ಲಿಂದ ಮುಂದೆ ಸ್ಪೈನ್, ಸಿಸಿಲಿ, ಯುಗೋಸ್ಲಾವಿಯಾ, ರುಮೇನಿಯಾ... ಹೀಗೆ ಅನೇಕ ದೇಶಗಳಿಗೆ ಪರಿಚಯವಾಯಿತು.
     ರಷ್ಯಾದ ಜನರಿಗೆ ಅಕ್ಕಿಯನ್ನು ನೋಡುವ ಭಾಗ್ಯ ಅಲ್ಲಿನ ದೊರೆ ಮೊದಲನೇ ಪೀಟರ್ ಕಾಲದಲ್ಲಿ ದೊರೆಯಿತು. ಸುಮಾರು 1700 ಆರಂಭದಲ್ಲಿ ಇರಾನಿನಿಂದ ಭತ್ತವನ್ನು ತರಿಸಿಕೊಂಡನಂತೆ. ಇಲ್ಲಿಗೆ ಪೂರ್ವ ಏಷ್ಯಾದಿಂದಲೂ ಸ್ವಲ್ಪಮಟ್ಟಿನ ಭತ್ತ ತಲುಪಿತ್ತು. ಭತ್ತದ ಕೃಷಿಯನ್ನು ಕ್ಯಾಸ್ಪಿಯನ್ ಸಾಗರದ ತೀರ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು.
      1609 ಸುಮಾರಿಗೆ ಭತ್ತವು ಅಮೇರಿಕಾ ಪ್ರವೇಶಿಸಿತು. ಇದನ್ನು ವರ್ಜಿನಿಯಾದಲ್ಲಿ ಬೆಳೆಸಲಾಯಿತು. 1685ರಲ್ಲಿ ಮಡಗಾಸ್ಕರಿನಿಂದ ಹೊರಟ ಹಡಗೊಂದು ಮಾರ್ಗ ಮಧ್ಯೆ ಕೆಟ್ಟು ಹೋಯಿತು. ದುರಸ್ತಿಗಾಗಿ ಇದು ದಕ್ಷಿಣ ಕೆರೊಲಿನದ ಚಾಲ್ರ್ಸ್ಟನ್ ಬಂದರಿನಲ್ಲಿ ತಂಗಬೇಕಾಯಿತು. ಇಲ್ಲಿಂದ ಹೊರಡುವಾಗ ಹಡಗಿನ ಕ್ಯಾಪ್ಟನ್ ಒಂದು ಮೂಟೆ ಭತ್ತವನ್ನು ಕೊಟ್ಟು ಹೋದ. ಭತ್ತದಿಂದಾಗಿ ಕೆರೊಲಿನಲ್ಲಿ ಭತ್ತದ ಕೃಷಿ ಆರಂಭವಾಯಿತು.
         ನಮ್ಮ ನೆರೆಯ ಮ್ಯಾನ್ಮಾರ್(ಬರ್ಮಾ) ಕಾರೆನ್ ಗುಡ್ಡಗಾಡು ಜನಾಂಗದವರುಭತ್ತದಲ್ಲಿ ಆತ್ಮವಿದೆ ಎಂದು ನಂಬಿದ್ದಾರೆ. ವಿಯೆಟ್ನಾಮಿನ ಹಳ್ಳಿಗರು ಕುಟುಂಬದ ಅತ್ಯಂತ ವೃದ್ಧ ಮಾತೆಯಲ್ಲಿ ಭತ್ತದ ಆತ್ಮ ಇರುತ್ತದೆಂದು ನಂಬುತ್ತಾರೆ. ಜಪಾನಿನಲ್ಲಿ ಭತ್ತಕ್ಕೆ ಗೌರವ, ಆದರ, ಸತ್ಕಾರ. ಅಲ್ಲಿನ ಮಾಜಿ ಪ್ರಧಾನ ಮಂತ್ರಿ ನಾಕಾಸೋನೆ. ಹೆಸರಿನ ಅರ್ಥಶ್ರೀ ಮಧ್ಯ ಬೇರು! ಇವರಿಗಿಂತ ಹಿಂದಿನ ಪ್ರಧಾನ ಮಂತ್ರಿ ಫುಕುದ. ಹಸರಿಗೆಶ್ರೀ ಸಂಪನ್ನ ಗದ್ದೆ ಎನ್ನುವ ಅರ್ಥ!
          ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯ ಮಹಾನಿರ್ದೇಶಕರಲ್ಲಿ ಓರ್ವರಾದಇರ್ರಿ ಪ್ರಪ್ರಥಮ ಏಷ್ಯಾದ ವಿಜ್ಞಾನಿ. ಫಿಲಿಪೈನ್ಸಿನ ರಾಜಧಾನಿ ಮನಿಲಾದಿಂದ ಅರುವತ್ತು ಮೈಲಿ ದೂರದ ಲಾಸ್ಬನೋಸ್ ಹುಟ್ಟೂರು. ಇಲ್ಲಿನ.ಆರ್.8’ ತಳಿಯು ವಿಶ್ವಖ್ಯಾತ. ಇದನ್ನು ಇಂಡೋನೇಷ್ಯಾದಪೆಟ ಮತ್ತು ತೈವಾನಿನ ಕುಬ್ಜ ತಳಿಡಿ.ಜಿ.ಡಬ್ಲ್ಯೂ.ಜಿ ತಳಿಗಳನ್ನು ಬಳಸಿಕೊಂಡು ರೂಪಿಸಲಾಗಿತ್ತು. ಗಾಳಿಗೆ ಬಿದ್ದು ಹೋಗದಂತಹ ಭದ್ರವಾದ ಕಾಂಡ ಹೊಂದಿರುವುದು ಇದರ ವಿಶೇಷ.
         ತಮಿಳುನಾಡಿನ ಆರ್ಕಾಟ್ ಜಿಲ್ಲೆಯ ಕಲಂಬೂರು ಎಂಬ ಹಳ್ಳಿಯ ರೈತ ಗಣೇಶನ್. 1967ರಲ್ಲಿ ತನಗೆ ಲಭ್ಯವಾದ.ಆರ್.8’ ತಳಿಂನ್ನು ಗದ್ದೆಯಲ್ಲಿ ಬಿತ್ತಿದ. ಯಥೇಷ್ಟ ಇಳುವರಿ. ಖುಷಿಯಲ್ಲಿ ಜುಲೈ 1968ರಲ್ಲಿ ಜನಿಸಿದ ತನ್ನ ಮಗನಿಗೆ.ಆರ್.8’ ಎಂದು ನಾಮಕರಣ ಮಾಡಿದ! ಶ್ರೀ .ಆರ್.8 ತಂದೆಯೊಂದಿಗೆ ಕೃಷಿಕನಾಗಿ ಮುಂದುವರಿದಿದ್ದಾರೆ (1992ರಲ್ಲಿ)
          ಹೊಸದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಪೂಸಾ ಇನ್ಸ್ಟಿಟ್ಯೂಟ್ ಎಂದೇ ಪ್ರಸಿದ್ಧ. ಇಲ್ಲಿಬಾಸ್ಮತಿ 370’ ಎನ್ನುವ ಭತ್ತದ ತಳಿಯನ್ನು ಪ್ರಣಾಳದಲ್ಲಿ ರೂಪಿಸಿದ್ದರು. ಇಂತಹ ಆರುನೂರು ತಳಿಗಳು ಅಭಿವೃದ್ಧಿಗೊಂಡಿವೆ. ಕೇವಲ ಪರಾಗದಿಂದಲೇ ಸಸ್ಯವನ್ನು ರೂಪಿಸಿದ ಕೀರ್ತಿ ಮೊಟ್ಟ ಮೊದಲು ಭಾರತಕ್ಕೆ ಸಲ್ಲುತ್ತದೆ. ತಂತ್ರವನ್ನು ಬಳಸಿ ಚೈನಾದಲ್ಲಿ ಸುಮಾರು ಎಂಭತ್ತು ಹೊಸ ಭತ್ತದ ತಳಿಗಳನ್ನು ರೂಪಿಸಲಾಗಿದೆ.
         ಹೀಗೆ ಅನೇಕ ಗೊತ್ತಿಲ್ಲದ ಸಂಗತಿಗಳನ್ನು ಪುಸ್ತಕವು ತಿಳಿಸುತ್ತದೆ. ಪುಸ್ತಕದ ಕೊನೆಗೆ ಲೇಖಕರ ಒಂದೆರಡು ವಾಕ್ಯಗಳು ವರ್ತಮಾನಕ್ಕೊಂದು ದಿಕ್ಸೂಚಿ ರೈತರು ಏಳು ಸಾವಿರ ವರ್ಷಗಳಿಂದ ಭತ್ತವನ್ನು ಬೆಳೆಯುತ್ತಿದ್ದಾರೆ. ನೀವು ಊಟ ಮಾಡುವಾಗ ನಿಮ್ಮ ತಟ್ಟೆಯಲ್ಲಿರುವ ಅನ್ನಕ್ಕಾಗಿ ರೈತರು ಎಷ್ಟು ಶ್ರಮ ವಹಿಸಿದ್ದಾರೆ ಎಂಬುದನ್ನು ಅರಿತುಕೊಂಡು ಅದಕ್ಕೆ ನೀಡಬೇಕಾದ ಗೌರವ, ಮರ್ಯಾದೆಯನ್ನು ನೀಡಿ.”

0 comments:

Post a Comment