Sunday, September 15, 2019

ಇಲ್ಲಿ ಹಲಸಿನ ‘ಅಪ್ಪ’ ಪ್ರಸಾದ


        ಕಾಸರಗೋಡು (ಕೇರಳ) ಜಿಲ್ಲೆಯ ಪಡ್ರೆ ಗ್ರಾಮದ ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವಅಪ್ಪದ ಸೇವೆಗೆ (ಹಲಸಿನ ಹಬ್ಬ) ಆರ್ಧ ಶತಮಾನಕ್ಕೂ ಮೀರಿದ ಇತಿಹಾಸ. ದೇವರಿಗಂದು ಹಲಸಿನ ಹಬ್ಬ! ಹಲಸಿನ ಹಣ್ಣಿನಿಂದ ಸಿದ್ಧಪಡಿಸಿದಅಪ್ಪ ನೈವೇದ್ಯ. ಪೂಜೆಯ ಬಳಿಕ ಅಪ್ಪ ಪ್ರಸಾದ ವಿತರಣೆ. ಬಾರಿ 2019 ಜೂನ್ 30 ರಂದು ಜರುಗಿದೆ.
       ಆರೇಳು ವರುಷಗಳಿಂದ ಹಬ್ಬಕ್ಕೆ ಮಾಧ್ಯಮ ಬೆಳಕು ಬಿದ್ದಾಗ ಅನೇಕರಿಗೆ ವಿಶೇಷವಾಗಿ ತೋರಿತು. ಹಿಮ್ಮಾಹಿತಿಯನ್ನು ಅಪೇಕ್ಷಿಸಿದರು. ದೂರದೂರಿನ ಆಸ್ತಿಕರು, ಹಲಸು ಪ್ರಿಯರು ಹಬ್ಬದತ್ತ ಉತ್ಸುಕರಾಗಿ ಬರಲಾರಂಭಿಸಿದರು. ಏನಿಲ್ಲವೆಂದರೂ ನೂರರಿಂದ ನೂರೈವತ್ತು ಮಂದಿ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಾರೆ. “ಕರಪತ್ರಗಳಿಲ್ಲ, ಫ್ಲೆಕ್ಸಿಗಳಿಲ್ಲ, ಜಾಹೀರಾತಿಲ್ಲ. ಬಾಯ್ಮಾತಿನ ಪ್ರಚಾರ. ಹಿಂದಿನ ವರುಷ ಬಂದವರು ನೆನಪಿಟ್ಟುಕೊಂಡು ಬರುತ್ತಾರೆ. ‘ಅಪ್ಪಪ್ರಸಾದವನ್ನು ಸ್ವೀಕರಿಸಿ ಮರಳುತ್ತಾರೆ.
     ಹಲಸಿನ ಹಣ್ಣಿನ ಸಿಹಿತಿಂಡಿಮುಳುಕವು ಪಾರಂಪರಿಕ ತಿಂಡಿ. ಮುಳುಕದ ತಮ್ಮಅಪ್ಪ. ಕೇರಳದಲ್ಲಿನೈಅಪ್ಪ (ತುಪ್ಪದಲ್ಲಿ ಕರಿದ ಅಪ್ಪ) ಪ್ರಸಿದ್ಧ. ಮಾಡುವ ವಿಧಾನ ಸುಲಭ. ಅಕ್ಕಿಹುಡಿ, ತೆಂಗಿನ ತುರಿ, ಬೆಲ್ಲ, ಏಲಕ್ಕಿ ಮತ್ತು ಸಣ್ಣದಾಗಿ ಕೊಚ್ಚಿದ ಹಲಸಿನ ಹಣ್ಣುಇವೆಲ್ಲದರ ಮಂದ ಪಾಕವನ್ನು ತುಪ್ಪದಲ್ಲಿ ಕರಿಯುತ್ತಾರೆ. ಕೆಂಬಣ್ಣದಅಪ್ಪಸಿದ್ಧ. ಅಕ್ಕಿ ಹುಡಿಯ ಬದಲಿಗೆ ಅಕ್ಕಿ ಮತ್ತು ಇತರೆಲ್ಲಾ ವಸ್ತುಗಳನ್ನು ರುಬ್ಬಿಯೂ ಮಾಡುವುದಿದೆ. ಆಪ್ಪವನ್ನು ತಯಾರಿಸಲೆಂದೇ ಗುಳಿಯಿರುವ ಚಿಕ್ಕ ಬಾಣಲೆ(ಉರುಳಿಯಾಕಾರ)ಯಿದೆ. ಇದಕ್ಕೆ ತುಪ್ಪವನ್ನು ಸುರುವಿ, ಕುದಿಯುತ್ತಿರುವಾಗ ಗುಳಿ ತುಂಬುವಂತೆ ಸೌಟಲ್ಲಿ ಪಾಕವನ್ನು ಸುರುವುತ್ತಾರೆ. ಇದು ಕೇರಳ, ದಕ್ಷಿಣ ಕನ್ನಡದ ಬಹುತೇಕ ದೇವಸ್ಥಾನದಲ್ಲಿಅಪ್ಪಮಾಡುವ ರೀತಿ.
                ದೇಗುಲಕ್ಕೆ ಸಂಬಂಧಪಟ್ಟ ಚಂದ್ರಶೇಖರ ಏತಡ್ಕ ಹಬ್ಬದ ಹಿನ್ನೆಲೆಯನ್ನು ಇತಿಹಾಸದ ಉಲ್ಲೇಖದೊಂದಿಗೆ ನಿರೂಪಿಸುತ್ತಾರೆ - “ಪ್ರಾಚೀನ ದೇವಸ್ಥಾನ. 1938ರಲ್ಲಿ ಕ್ಷೇತ್ರದ ಆಡಳಿತದ ವ್ಯವಸ್ಥೆಯ ಹೊಣೆಯು ಗ್ರಾಮದ ಕೊಲ್ಲಂಗಾನ ಸುಬ್ರಹ್ಮಣ್ಯ ಶಾಸ್ತ್ರಿಯವರಿಗಿತ್ತು. ಪೂರ್ವ ಭಾಗದಲ್ಲಿ ನೆಟ್ಟಣಿಗೆಯಿಂದ ಹರಿದು ಬರುತ್ತಿರುವ ಸ್ವಲ್ಪ ದೊಡ್ಡದೇ ಆದ ತೊರೆಯಿದೆ. 1940 ಆಜೂಬಾಜು ಇರಬೇಕು. ವಿಪರೀತ ಮಳೆಯಿಂದ ನೆರೆ ಬಂದು ಸುತ್ತಲಿನ ಪ್ರದೇಶಗಳು ಮುಳುಗಡೆಯಾದುವು. ಕೃಷಿ ಭೂಮಿಗಳು ಹೂಳು ತುಂಬಿದುವು. ಕೃಷಿ ಮಾಡಲು ಅಯೋಗ್ಯವಾದುವು. ಜೀವನೋಪಾಯಕ್ಕಾಗಿ ಶಾಸ್ತ್ರಿಗಳು ದೇವಸ್ಥಾನ ಸಹಿತ ಭೂಮಿಯನ್ನು ಏತಡ್ಕ ಸುಬ್ರಾಯ ಭಟ್ಟರಿಗೆ ಮಾರಾಟ ಮಾಡಿ ಬೇರೆಡೆ ನೆಲೆ ಕಂಡರು. ಸುಬ್ರಾಯ ಭಟ್ಟರ  ನೇತೃತ್ವದಲ್ಲಿ 1948ರಲ್ಲಿ ದೇವಾಲಯ ಜೀರ್ಣೋದ್ಧಾರಗೊಂಡಿತು.”
        “ ಕಾಲಘಟ್ಟದಲ್ಲಿ ಗ್ರಾಮದಲ್ಲಿ ಬಡತನವಿತ್ತು. ಊಟಕ್ಕೂ ತತ್ವಾರದ ಸ್ಥಿತಿ. 1965 ಹಸಿರು ಕ್ರಾಂತಿಯ ತನಕವೂ ಬಡತನ ತೀವ್ರವಾಗಿತ್ತು. ಅಕ್ಕಿ ಸಾಗಾಟಕ್ಕೆ ನಿರ್ಬಂಧವಿತ್ತು. 1970 ತನಕವೂ ಆಹಾರ ಅಭಾವ. ಅಂತಹ ಸಮಯದಲ್ಲಿ ಹಲಸು ಗ್ರಾಮದ ಹಸಿವನ್ನು ನೀಗಿಸಿತ್ತು. ಮೂರು ಹೊತ್ತು ಹೊಟ್ಟೆ ತಂಪು ಮಾಡಿತ್ತು. ಅನ್ನವಾಗಿ, ತಿಂಡಿಯಾಗಿ, ತರಕಾರಿಯಾಗಿ, ಹಣ್ಣಾಗಿ ಬದುಕನ್ನು ಆಧರಿಸಿತು. ಹೀಗೆ ಉಸಿರನ್ನು ನಿಲ್ಲಿಸಿದ, ಆಹಾರ ಭದ್ರತೆ ನೀಡಿದ ಹಲಸಿಗೆ ಊರವರು ಕೃತಜ್ಞರಾಗಿರಬೇಕೆಂಬ ಪರಿಕಲ್ಪನೆಯನ್ನು ಏತಡ್ಕ ಸುಬ್ರಾಯ ಭಟ್ಟರಲ್ಲಿದ್ದು, ಅದನ್ನು ಆಚರಣೆಯ ಮೂಲಕ ಅನುಷ್ಠಾನಕ್ಕೆ ತಂದರು. ಬದಲಾದ ಜೀವನ ಶೈಲಿ, ನಂಬುಗೆ, ಮನಸ್ಥಿತಿಗಳ ಮಧ್ಯೆಯೂ ದೇವಾಲಯದ ಸೇವೆ ಮತ್ತು ಹಲಸನ್ನು ಊರವರು ಮರೆಯಲಿಲ್ಲ.”
                ದಶಕದೀಚೆಗೆ ಹಲಸು ಆಂದೋಳನವಾಗಿ ಜನಮನದೊಳಗೆ ಇಳಿಯುತ್ತಿದೆ. ವೈಜ್ಞಾನಿಕ ನೆಲೆಗಟ್ಟು ಸಿಕ್ಕಿದೆ. ಗಿಡನೆಡುವಲ್ಲಿಂದ ಮೌಲ್ಯವರ್ಧಿತ ಉತ್ಪನ್ನ ತಯಾರಿ ತನಕ ಬೇರು ಇಳಿಸಿದೆ. ನಿರ್ಲಕ್ಷಿತ ಹಣ್ಣೆಂಬ ಶಾಪದಿಂದ ಕಳಚಿಕೊಳ್ಳುತ್ತಿದೆ. ಅಪವಾದವೂ ಇಲ್ಲದಿಲ್ಲ! ಮೇಳಗಳಿಂದಾಗಿ ಸಾರ್ವಜನಿಕರಲ್ಲಿ ಒಲವು ಹಬ್ಬುತ್ತಿದೆ. ಎಲ್ಲಾ ಪ್ರಚಾರಗಳ ಹೊರತಾಗಿಯೂ ಏತಡ್ಕದಅಪ್ಪ ಸೇವೆಯು ವಿಶೇಷ ಮನ್ನಣೆಗೆ ಪಾತ್ರವಾಗಿದೆ.
                ಮಂಗಳೂರಿನ ನಿವೃತ್ತ ಬ್ಯಾಂಕ್ ಅಧಿಕಾರಿ ವಿದ್ಯಾ ಶೆಣೈಯವರು ಹಲಸು ಪ್ರಿಯೆ. ಅವರ ಮಗಳು ವತ್ಸಲಾ ಅವರ ಬಾಣಂತನಕ್ಕೆ ಕೆನಡಾ ದೇಶಕ್ಕೆ ತೆರಳಿದ್ದಾರೆ. ಹಣ್ಣಿನ ಅಪ್ಪ ಸೇವೆಯ ವಿವರ ನೋಡಿ ಚೊಚ್ಚಲ ಮಗುವಿನ ಹೆಸರಿನಲ್ಲಿ ಅಪ್ಪ ಸೇವೆ ಮಾಡಬೇಕೆಂದು ಮೈಲ್ ಮಾಡಿದರು.” ಬಾರಿಯ ಅಪ್ಪ ಸೇವೆಯ ಅಪ್ಡೇಟ್ ಮಾಡಿದರು ಚಂದ್ರಶೇಖರ ಏತಡ್ಕ.

0 comments:

Post a Comment