Saturday, June 5, 2021

ಕೃಷಿಕರ ವರ್ಷಪೂರ್ತಿ ಬಳಕೆಗೆ ಸೌರ - ವಿದ್ಯುತ್ ಕೊಂಬೋ ಡ್ರೈಯರ್


ನಿನ್ನೆ ನಾಲ್ಕು ಗಂಟೆಯ ವರೆಗೆ ಮಳೆಯೇ ಇರಲಿಲ್ಲ. ಸೌರ ಡ್ರೈಯರ್ ಹೊರಗಿಟ್ಟು, ಅದಕ್ಕೆ ಒಳಗಿಟ್ಟ ಬಲ್ಬು ಡ್ರೈಯರನ್ನು ಜೋಡಿಸಿದ್ದೆ. ಬರೇ ಬಲ್ಬಿನ ಶಾಖದಲ್ಲಿ ಒಣಗುವುದಕ್ಕಿಂತ ಬೇಗ ನನ್ನ ಹಲಸಿನ ಸೊಳೆ ಒಣಗಿತು, ಕೃಷಿಕ ಸಂಶೋಧಕ ನಿಟಿಲೆ ಮಹಾಬಲೇಶ್ವರ ಭಟ್ ಬಡಬಡನೆ ವಿವರಿಸಿದರು. ಸತ್ಯ ಹೇಳಬೇಕಾದರೆ, ಏನೂ ಅರ್ಥವಾಗಲಿಲ್ಲ. ಅದನ್ನೇ ಅವರಿಗೂ ಹೇಳಿದೆ.

ನೋಡುತ್ತಾ ಹೋದಾಗ ಯಾರಿಗೂ ಅರ್ಥವಾಗುತ್ತದೆ, ಬನ್ನಿಎಂದು ಒಳಗೆ ಕರೆದರು ಅವರು. “ಜಾಯಿಕಾಯಿ, ಹಲಸಿನ ಹಣ್ಣು, ಅಂಜೂರ, ಖರ್ಜೂರ, ಜಾಪತ್ರೆಗಳನ್ನು ಇದರಲ್ಲಿ ಆರಾಮವಾಗಿ ಒಣಗಿಸಿ ಅಕಾಲದಲ್ಲಿ ಬಳಸಬಹುದು. ಹಪ್ಪಳ, ಸಂಡಿಗೆ ಒಣಗಿಸಲೂ ಸೈ. ಮನೆಮಟ್ಟದ ಬಳಕೆಗೆ ಸೂಕ್ತ. ಉಪಕರಣವೂ ಹೆಚ್ಚು ಭಾರವಿಲ್ಲ. ಕಿಸೆಗೂ ಭಾರವಿಲ್ಲ.”

ಇದು ಈಚೆಗೆ ತಾವು ಅಭಿವೃದ್ಧಿಪಡಿಸಿದ ಸೋಲಾರ್ ಡ್ರೈಯರ್ ಮತ್ತದರಹೈಬ್ರಿಡ್ ಕಾಂಬಿನೇಶನ್ (ಕೋಂಬೋ) ಬಗ್ಗೆ ಮಹಾಬಲೇಶ್ವರ ಭಟ್ ವಿವರಣೆ. ಅವರು ಎರಡು ಮಾದರಿಗಳನ್ನು ಜತೆಜತೆಗೆ ಸಿದ್ಧಪಡಿಸಿದ್ದಾರೆ. ಒಂದು ನೇರ ಸೌರ ಶಕ್ತಿಯಿಂದ ನಡೆಯುವುದು. ಇನ್ನೊಂದು ವಿದ್ಯುತ್ತಿನಿಂದ. “ಇವೆರಡನ್ನೂ ಜೋಡಿಸಿಟ್ಟುಕೋಂಬೋದಿಂದ ಹೆಚ್ಚಿನ ಫಲಿತಾಂಶ ಪಡೆಯಲು ಸಾಧ್ಯಎನ್ನುತ್ತಾರೆ.

ಫಕ್ಕನೆ ಸೌರ ಡ್ರೈಯರನ್ನು ನೋಡುವಾಗ ಎಲ್ಲ ಅಡಿಕೆ ಬೆಳೆಗಾರರ ಮನೆಯಲ್ಲಿರುವ ಸೌರ ಶಕ್ತಿಯಬಿಸಿಲಿನ ಗೂಡಿ ವಾಮನ ರೂಪದಂತೆ ಕಾಣುತ್ತದೆ. ನಿಟಿಲೆಯವರ ಸೌರ ಡ್ರೈಯರ್ ನಾಲ್ಕು ಅಡಿ ಉದ್ದ, ಎರಡು ಅಡಿ ಅಗಲ ಮತ್ತು ನಾಲ್ಕು ಕಿಲೋ ಭಾರವಿದೆ. ಚೌಕಾಕಾರದ ಅಲ್ಯೂಮಿನಿಯಂ ಪೈಪು, ಪಟ್ಟಿಗಳ ಹಂದರದ ಮೇಲೆ ಪಾಲಿಫೈಬರ್ ಹಾಳೆಯ ಮೇಲು ಹೊದಿಕೆ ಹಾಸಿದ್ದಾರೆ. ಒಣಗಿಸಲು ಹಾಕಿದ ಹಣ್ಣು - ತರಕಾರಿಗಳ ತೇವಾಂಶ ಹೀರಿಕೊಂಡ ಬಿಸಿಗಾಳಿ ಹೊರಹೋಗಬೇಕಲ್ಲಾ. ಇದಕ್ಕೆ ಒಂದು ಮತ್ತು ವಾತಾವರಣದ ತಾಜಾ ಗಾಳಿ ಒಳಬರಲು ಇನ್ನೊಂದು - ಹೀಗೆ ಎರಡು ಕಿಂಡಿ ಕೊಟ್ಟಿದ್ದಾರೆ

ಕೆಳ ಭಾಗದಲ್ಲಿ ಕಪ್ಪು ಫೈಬರ್ ಹಾಳೆಯ ಹಾಸು. ಉತ್ಪನ್ನ ಹಾಕಲು ಸುಲಭದಲ್ಲಿ ಹೊರಗೆ - ಒಳಗೆ ಸರಿಸಬಹುದಾದ ಡ್ರಾವರ್ ಇದೆ. ಡ್ರಾವರಿನ ಟ್ರೇಗೆ ಗಾಳಿಯಾಡಲು ಎಡೆ ಇರುವ ಪಾಲಿಫೈಬರ್ ಮೆಶ್ ಅಳವಡಿಸಿದ್ದಾರೆ. ಇದು ಕೆಳಗಿನ ಕಪ್ಪು ಫೈಬರ್ ಹಾಳೆಗೆ ಸ್ಪರ್ಶವಾಗುವುದಿಲ್ಲ.

ಒಳಗಿಟ್ಟ ವಸ್ತು ಒಣಗುವುದು ನೇರ ಬಿಸಿಲಿನಿಂದ ಅಲ್ಲ. ಕಪ್ಪು ಹಾಳೆ ಬಿಸಿ ಹೀರಿಕೊಂಡು ಶಾಖ ಬಿಟ್ಟುಕೊಡುತ್ತದೆ. ಆಗ ಗಾಳಿ ಮೇಲೆ ಹೋಗಬೇಕು ತಾನೇ. ಅದು ಡ್ರಾವರ್ ಮೂಲಕ ಹಾದು ಉತ್ಪನ್ನಗಳ ತೇವಾಂಶ ಹೊತ್ತು ಹೊರಹೋಗುತ್ತದೆ. ಉತ್ಪನ್ನವನ್ನು ಒಣಗಿಸಿ ಕೊಡುವುದು ಬಿಸಿಗಾಳಿ. ಹೊಸ ಗಾಳಿ ಹೊರಗಿನಿಂದ ಒಳ ಬರುತ್ತದೆ, ಮಹಾಬಲೇಶ್ವರ ಭಟ್ ಡ್ರೈಯರಿನ ತತ್ವ ವಿವರಿಸುತ್ತಾರೆ.

ಟ್ರೇಯಲ್ಲಿ ಸುಮಾರು ಎಂಟು ಚದರಡಿಯಷ್ಟು ಒಣಗಿಸುವ ಪ್ರದೇಶ ಸಿಗುತ್ತದೆ. ಬಾಳೆಹಣ್ಣು, ಹಲಸಿನ ಹಣ್ಣುಗಳಾದರೆ ಕಿಲೋ ಲೆಕ್ಕದಲ್ಲಿ ಹೆಚ್ಚು ಹಾಕಬಹುದು. ಪುನರ್ಪುಳಿ ಸಿಪ್ಪೆ, ಜಾಯಿ ಪತ್ರೆಗಳು ಹಗುರ ಇರುವ ಕಾರಣ ಒಣಗಿಸಬಲ್ಲ ಉತ್ಪನ್ನದ ತೂಕಇಂತಿಷ್ಟೇಎನ್ನುವುದು ಕಷ್ಟ. ಟ್ರೇ ತುಂಬುವಷ್ಟು.”

ಬಿಸಿಲು ಇರುವಾಗ ನೇರ ಬಿಸಿಲಿನಲ್ಲೇ ಒಣಗಿಸಬಹುದಲ್ಲಾ? ಉತ್ತರಿಸುತ್ತಾರೆ ನಿಟಿಲೆ, “ಹಣ್ಣು, ಸೊಪ್ಪುಗಳನ್ನು ನೇರ ಬಿಸಿಲಿಗೆ ಒಣಗಿಸಿದಾಗ ಅಂತಿಮ ಉತ್ಪನ್ನದಲ್ಲಿ ತಾಜಾತನ ಇರುವುದಿಲ್ಲ. ರುಚಿಯೂ ಕಡಿಮೆಯಾಗುತ್ತದೆ. ಒಣಗಲು ತುಂಬಾ ಸಮಯ ಬೇಕುಸರಿಯಾಗಿ ಒಣಗದಿದ್ದರೆ ಬೂಷ್ಟು ಬೆಳೆದು ಹಾಳಾಗುತ್ತದೆ. ಡ್ರೈಯರಿನಲ್ಲಿ ಒಣಗಿದ ಉತ್ಪನ್ನಗಳು ತಾಜಾ ಆಗಿರುತ್ತದೆ. ಸಿಹಿ, ಸ್ವಾದಗಳಲ್ಲಿ ವ್ಯತ್ಯಾಸವಾಗದು. ಅಡ್ಡ ವಾಸನೆ ಇರುವುದಿಲ್ಲ.”

ಡ್ರೈಯರಿನ ಬೆಲೆ ಸುಮಾರು 5,000 ರೂ. ಎನ್ನುತ್ತಾರೆ. ಆದರೆ, ಇದಕ್ಕೊಂದು ಕೊರತೆ  ಇದೆ. ಇದು ಬಿಸಿಲು ಇದ್ದರೆ ಮಾತ್ರ ನಡೆದೀತು. ಅಂದರೆ, ಮಲೆನಾಡಿನಲ್ಲಿ ಬಹುತೇಕ ಮಳೆಗಾಲದ ನಾಲ್ಕು ತಿಂಗಳು ರಜೆಯೇ ಕೊಡಬೇಕಷ್ಟೇ. ಒಣಗಿಸಲು ಆಗುವುದು ತೀರಾ ಸಂಶಯಾಸ್ಪದ.

ಕೊರತೆ ಪರಿಹರಿಸಲೆಂದೇ ನಿಟಿಲೆ ಡ್ರೈಯರಿಗೆ ಜೋಡಿಸಬಹುದಾದ ಇನ್ನೊಂದು ವಿದ್ಯುತ್ ಆಧಾರಿತ ಡ್ರೈಯರ್ ತಯಾರಿಸಿದ್ದಾರೆ. ಇದರ ಉದ್ದ ಒಂದೂವರೆ ಅಡಿ, ಅಗಲ ಎರಡು ಅಡಿ ಮತ್ತು ಎತ್ತರ ಮೂರೂವರೆ ಅಡಿ. ನಾಲ್ಕೂಗೋಡೆಗಳಿಗೆ ಕಪ್ಪು ಫೈಬರಿನ ಹಾಸು. ಎದುರು ಮತ್ತು ಮೇಲ್ಭಾಗದಲ್ಲಿ ಪಾಲಿಫೈಬರ್ ಹಾಳೆಯ ಹೊದಿಕೆ. ಒಳಗೆ ಆರು ಟ್ರೇಗಳಿವೆ. ಟ್ರೇಗಳ ನಡುವಣ ಪರಸ್ಪರ ಲಂಬ ಅಂತರ ಮೂರೂವರೆ ಇಂಚು.

ಸೌರ ಜತೆಗಾತಿಬಲ್ಬುಡ್ರೈಯರ್

ಕೆಳಭಾಗದಲ್ಲಿ ನೂರು ವೋಲ್ಟಿನ ಬಲ್ಬ್ ಜೋಡಿಸಿದ್ದಾರೆ. ಇದನ್ನುಬಲ್ಬ್ ಡ್ರೈಯರ್ಎಂದೇ ಕರೆಯೋಣ. “ಬಲ್ಬು ಸದಾಕಾಲ ಉರಿದುಕೊಂಡೇ ಇರಬೇಕೆಂದಿಲ್ಲ. 2 - 3 ಗಂಟೆ ಉರಿದ ಮೇಲೆ ಅಷ್ಟೇ ವಿರಾಮ ಕೊಡಬಹುದು. ಹೀಗೆ ಬಿಟ್ಟು ಬಿಟ್ಟು ಉರಿಸುವಿರಾದರೆ ಎರಡು ಬಲ್ಬ್ ಜೋಡಿಸಬಹುದು. ಇಲ್ಲವಾದರೆ ಒಂದೇ ಸಾಕುರಾತ್ರಿ ಕಾಲದಲ್ಲಾದರೆ 2 ರಿಂದ 3 ಗಂಟೆ ಬಲ್ಪ್ ಉರಿದರೆ ಸಾಕು. ಒಂದು ನೂರು ವೋಲ್ಟಿನ ಬಲ್ಪ್ ಹತ್ತು ಗಂಟೆ ಉರಿದರೆ ಒಂದು ಯೂನಿಟ್ ಖರ್ಚಾಗುತ್ತದಷ್ಟೇ.

ಸೌರ ಡ್ರೈಯರಿನಲ್ಲಿ ಶಾಖ ಪೂರ್ತಿಯಾಗಿ ಒಳಗಡೆ ಆವರಿಸಿ ಉತ್ಪನ್ನ ಒಣಗುತ್ತದೆ. ಬಲ್ಬ್ ಡ್ರೈಯರಿನಲ್ಲಿ ಶಾಖವು ಆರೂ ಟ್ರೇಗಳಿಗೆ ವ್ಯಾಪಿಸಲು ಸಮಯ ಹೆಚ್ಚು ಬೇಕು. ಹೀಗಾಗಿ ಆರಂಭಿಕ ಒಣಗುವಿಕೆಗೆ ಸ್ವಲ್ಪ ಹೆಚ್ಚು ಸಮಯ ಬೇಕು.

ಎರಡೆರಡು ಡ್ರೈಯರ್ ಯಾಕಪ್ಪಾ? ಮಹಾಬಲೇಶ್ವರ ಭಟ್ ಕೃಷಿಕರೂ ಕೂಡಾ. ಅವರು ವರೆಗೆ ಹೆಚ್ಚಿನ ಉಪಕರಣ, ಯಂತ್ರಗಳನ್ನು ಮಾಡಿದ್ದು ತನ್ನ ವೃತ್ತಿಯ ಅಗತ್ಯಕ್ಕಾಗಿ. ಅದನ್ನು ನೋಡಿ ಇತರರು ಕೇಳಿದಾಗ ಮಾಡಿಕೊಟ್ಟಿದ್ದಾರೆ. ತಾನು ಬಳಕೆದಾರರಾಗಿಯೇ ಮೊತ್ತಮೊದಲು ವಿಮರ್ಶೆ ಮಾಡುವ ಕಾರಣ ಇವರ ಉಪಕರಣ - ಯಂತ್ರಗಳು ತುಂಬ ಪ್ರಾಯೋಗಿಕವಾಗಿರುತ್ತವೆ.

ಬೇಸಿಗೆ ಕೊನೆಗೆ ನಡುನಡುವೆ ಮಳೆ ಬರುವುದಿದೆ. ನೀವು ಉತ್ಪನ್ನ ಒಣಗಿಸಲು ಇಟ್ಟ ದಿನ ಮಳೆ ಬಂತೆಂದುಕೊಳ್ಳಿ. ತಕ್ಷಣ ನೀವದನ್ನು ಬಲ್ಬ್ ಡ್ರೈಯರಿನ ಟ್ರೇಗಳಿಗೆ ವರ್ಗಾಯಿಸಿ ಚಾಲೂ ಮಾಡಿದರೆ ಸಾಕು. ಉತ್ಪನ್ನ ಹಾಳಾಗಿ ಹೋಗುವ ಆತಂಕ ಇಲ್ಲ. ಮಳೆಗಾಲ ಪೂರ್ತಿ ಬಲ್ಬ್ ಡ್ರೈಯರನ್ನು ನೆಚ್ಚಿಕೊಳ್ಳಬಹುದು. ಬೇಸಿಗೆಯಲ್ಲಿ ಅಗತ್ಯ ಬಿದ್ದರೆ ಎರಡನ್ನೂ ಬಳಸಬಹುದು.

ಸೌರ ಶಕ್ತಿಯ ಡ್ರೈಯರಿನ ಔಟ್ಲೆಟ್ಟನ್ನು ಬಲ್ಬ್ ಡ್ರೈಯರಿಗೆ ಸುಲಭದಲ್ಲಿ ಜೋಡಿಸುವಂತೆ ವ್ಯವಸ್ಥೆ ಮಾಡಿದ್ದೇವೆ. ಹೀಗೆ ಜೋಡಿಸಿದರೆ, ಹಗಲು ಹೊತ್ತು ಸೌರ ಡ್ರೈಯರಿನಿಂದ ಹೊರಬರುವ ಬಿಸಿಗಾಳಿ ಬಲ್ಬ್ ಡ್ರೈಯರಿಗೆ ವ್ಯಾಪಿಸುತ್ತದೆ. ಬಲ್ಬ್ ಡ್ರೈಯರಿನ ಒಣಗಿಸುವ ಕ್ರಿಯೆ ವೇಗ ಪಡೆಯುತ್ತದೆಎನ್ನುತ್ತಾರೆ.

ಕೃಷಿಕರ ಅಗತ್ಯ ಮನದಲ್ಲಿಟ್ಟು ನಿಟಿಲೆ ತನ್ನ ಡ್ರೈಯರುಗಳು ಸಾಧ್ಯವಾದಷ್ಟೂ ಮಿತ ವೆಚ್ಚದ್ದಾಗುವಂತೆ ಮಾಡಿದ್ದಾರೆ. ಬಲ್ಬ್ ಡ್ರೈಯರಿಗೆ ಸುಮಾರು ಎಂಟು ಸಾವಿರ ರೂಪಾಯಿ ಬೆಲೆ. “ಎರಡೂ ಮಾದರಿಗಳು, ಅಂದರೆ, ‘ಕೋಂಬೋ ಸೆಟ್ಕೃಷಿಕರಲ್ಲಿದ್ದರೆ ತಮ್ಮ ಒಂದೇ ಒಂದು ಹಣ್ಣು - ತರಕಾರಿ ಹಾಳಾಗದಂತೆ ನೋಡಿಕೊಳ್ಳಬಹುದು.” ಎಂದು ನಗೆಯಾಡುತ್ತಾರೆ. ಕೋಂಬೋ ಸೆಟ್ಟಿಗೆ 13,000 ರೂ. ಆಗಬಹುದು. ಆದೇಶ ಕೊಟ್ಟು ಒಂದೆರಡು ವಾರಗಳಲ್ಲಿ ಸಿದ್ಧ.

ಸೌರ ಡ್ರೈಯರ್ ಅಂಗಳದಲ್ಲಿರುವಾಗ ಮಳೆ ಬಂದರೆ? “ಚಿಕ್ಕ ಮಳೆಗೆ ಹಾನಿ ಆಗದು. ಆದರೆ ಸತತ ಮಳೆಗೆ ಇಡುವುದು ಬೇಡ. ಅಂಥಾ ಸಂದರ್ಭಗಳಲ್ಲಿ ಡ್ರೈಯರನ್ನು ಎತ್ತಿ ಮಾಡಿನ ಒಳಗೆ ಇಡುವುದೇ ಉತ್ತಮ. ಅಲ್ಲದಿದ್ದರೆ ಇದ್ದಲ್ಲೇ ಟಾರ್ಪಾಲಿನ್ ಹೊದೆಸಿದರೂ ಸೈ.”

ಕೋಂಬೋ ಪ್ರಯೋಜನ

ಬಳಕೆದಾರರುಕೋಂಬೋ ಉಪಯೋಗ ಹೇಗೆ ಪಡೆಯಬಹುದು? ವಿವರಿಸುತ್ತಾರೆ ಮಹಾಬಲೇಶ್ವರ, “ಸೌರ ಶಕ್ತಿಯ ಅದೇ ಕಾರ್ಯಕ್ಷಮತೆ ಬಲ್ಬ್ ಡ್ರೈಯರಲ್ಲಿ ಸಿಗದು. ಬೇಸಿಗೆಯಲ್ಲಿ ಬೇಕಾದರೆ ಇವೆರಡನ್ನೂ ಜೋಡಿಸಿ, ಬಲ್ಬು ಉರಿಸದೆಯೇ ಬಿಸಿಲಲ್ಲಿಟ್ಟು ಬಳಸಬಹುದು. ಸಣ್ಣ ಮಳೆಗೆ ಏನೂ ಸಮಸ್ಯೆ ಆಗದು. ಮಳೆಗಾಲದಲ್ಲಿ ಸೌರ ಡ್ರೈಯರ್ ಉಪಯೋಗವಿಲ್ಲ ಎಂದರೂ, ದಿನದ ಹೆಚ್ಚು ಭಾಗ ಬಿಸಿಲಿದ್ದರೆ, ಅದನ್ನು ಬಿಸಿಲಲ್ಲಿಟ್ಟು, ಕಾಂಬೋ ಕನೆಕ್ಷನ್ ಕೊಟ್ಟುಕೊಂಡರೆ ಬಲ್ಬು ಡ್ರೈಯರಿನ ಕ್ಷಮತೆಯನ್ನು ಬಿಸಿಲು ಸಿಗುವಷ್ಟು ಕಾಲ ಹೆಚ್ಚಿಸಿಕೊಳ್ಳುವ ಅನುಕೂಲತೆಯಿದೆ.”

ಡ್ರೈಯರುಗಳಮೊದಲ ಮಾದರಿ (ಪ್ರೋಟೋಟೈಪ್)ಯನ್ನು ಬಳಸಿ ನೋಡಿದವರು ಪೆರ್ಲದ ಸಾವಯವ ಕೃಷಿಕ ವರ್ಮುಡಿ ಶಿವಪ್ರಸಾದ್. ಅವರಿಗೆ ಇವುಗಳ ಕಾರ್ಯಕ್ಷಮತೆಯ ಬಗ್ಗೆ ತೃಪ್ತಿಯಿದೆ. “ ರೀತಿ ಮಳೆಗಾಲದಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ವಿದ್ಯುತ್ ಮೂಲಕ ಒಣಗಿಸುವ ಏರ್ಪಾಡು ಕೊಟ್ಟಿರುವುದನ್ನು ಮೆಚ್ಚಬೇಕುಎನ್ನುತ್ತಾರೆ. “ಶಿವಪ್ರಸಾದ್ ಅವರು ಬಳಸಿದ ಮಾದರಿಗಿಂತ ಈಗಿನದರ ವಿನ್ಯಾಸದಲ್ಲಿ ಸುಧಾರಣೆ ಮಾಡಿದ್ದೇವೆ. ಹಾಗಾಗಿ ಕ್ಷಮತೆಯೂ ಹೆಚ್ಚಿದೆಎನ್ನುತ್ತಾರೆ ಮಹಾಬಲೇಶ್ವರ ಭಟ್.

ಗ್ರಾಹಕರು  ಅಪೇಕ್ಷೆ  ಪಟ್ಟರೆ ಹಂದರವನ್ನು ಸ್ಟೀಲಿನಿಂದ ಮಾಡಬಹುದು. ಹಾಗೆ ಮಾಡಿದಾಗ ಡ್ರೈಯರಿನ ಒಟ್ಟು ದರ ಹೆಚ್ಚಾಗುತ್ತದೆ. ಪಾಲಿಫೈಬರ್ ಮೆಶ್ಶಿನ ಟ್ರೇಗಳ ಬದಲಿಗೆ ಸ್ಟೀಲ್ ಹಾಳೆಗಳನ್ನು ಹಾಕಿದರೆ ಉತ್ಪನ್ನ ಒಣಗುವ ಸಮಯ ಕಡಿಮೆ ಆಗಬಹುದೇನೋ. ಪ್ರಯೋಗ ಮಾಡಿ ನೋಡಬೇಕಷ್ಟೇ.”

ನಿಟಿಲೆಯವರು ಕೃಷಿಕ ತಂತ್ರಜ್ಞ. ಸುಮಾರು ಎರಡು ದಶಕದ ಹಿಂದೆ ಕಾಳುಮೆಣಸು ಆಯುವ ಯಂತ್ರದಿಂದ ಆವಿಷ್ಕಾರಕ್ಕೆ ಶ್ರೀಕಾರ. ಈಗಿನ ಡ್ರೈಯರ್ ತನಕದ ಯಶದ ಹಾದಿಯಲ್ಲಿ ಕೃಷಿಗೆ ಮತ್ತು ಕೃಷಿಕರಿಗೆ ಸಹಾಯವಾಗಬಲ್ಲ ಯಂತ್ರಗಳು, ಹಲವಾರು ಉಪಕರಣಗಳು, ಸಾಧನಗಳನ್ನು ಕೃಷಿಕರ ಕೈಗಿತ್ತಿದ್ದಾರೆ. ‘ನಿರ್ಗುಣ ಇಂಡಸ್ಟ್ರೀಸ್ಮೂಲಕ ಹೊರಬಂದ ಆವಿಷ್ಕಾರಗಳು ಕೃಷಿಕರ ಸ್ವೀಕೃತಿ ಪಡೆದಿವೆ.

ಚೆನ್ನಾಗಿ ಪ್ಯಾಕ್ ಮಾಡಿಟ್ಟರೆ ಸರಿಯಾಗಿ ಒಣಗಿದ ಉತ್ಪನ್ನಗಳ ಆಯಸ್ಸು ಕನಿಷ್ಠ ಆರು ತಿಂಗಳು ಹೆಚ್ಚುತ್ತದೆ. ಮಧ್ಯಮ ವರ್ಗದ ಕೃಷಿಕರಿಗೆ ಥರದ ಡ್ರೈಯರ್ ಉಪಕಾರಿ. ಯಾವುದೇ ಉತ್ಪನ್ನವನ್ನು ಒಣಗಿಸಿ ಇಟ್ಟುಕೊಳ್ಳಬಹುದು. ಮಾರಾಟ ಸಾಮಥ್ರ್ಯ, ವ್ಯವಸ್ಥೆ ಇದ್ದವರು ಆದಾಯವರ್ಧನೆ ಮಾಡಿಕೊಳ್ಳಬಹುದು.

ನಿಟಿಲೆ ಮಹಾಬಲೇಶ್ವರ ಭಟ್

94483 30404, 94802 29022 (ವಾಟ್ಸಪ್), (ರಾತ್ರಿ 7 - 9)

 

ಮಾಡ್ಯುಲಾರ್ಮಾಡಿದರೆ... 

ರಡು - ಮೂರು ಗಂಟೆ ದೂರದ ಗ್ರಾಹಕರು ಡ್ರೈಯರುಗಳನ್ನು ಒಂದು ಒಮ್ನಿಯಲ್ಲಿಟ್ಟು ಒಯ್ಯಬಹುದು. ಆದರೆ ಇನ್ನೂ ದೂರದವರಿಗೆ ಲಾರಿಯಲ್ಲಿ ತರಿಸುವುದು ಸುಲಭ ಅನಿಸೀತು. ಹವಾಮಾನದಲ್ಲಿ ಸಾಕಷ್ಟೂ ಏರುಪೇರಾಗುತ್ತಿರುವ ದಿನಗಳಲ್ಲಿ ಇಂಥ ಮಿತ ವೆಚ್ಚದ ಡ್ರೈಯರುಗಳು ದೇಶದ ಉದ್ದಗಲದ ಮಂದಿಗೆ ಬೇಕು.

ಇವೆರಡನ್ನೂಮಾಡ್ಯುಲಾರ್ - ಅಂದರೆ ಬಿಚ್ಚಿ ಮತ್ತೆ ಜೋಡಿಸಲು ಆಗುವ ರೀತಿಯಲ್ಲಿ ನಿರ್ಮಿಸಬಹುದೇ? ಹಾಗೆ ಮಾಡಿದರೆ ಇದು ಹೆಚ್ಚು ಜನರನ್ನು ತಲಪೀತು - ಮಾರ್ಕೆಟೆಬಿಲಿಟಿಯೂ ಹೆಚ್ಚೀತು. ಏಕೆಂದರೆ ಕಳಚಿ ರಟ್ಟಿನ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿದರೆ ಲಾರಿ ಮೂಲಕ ಕಳಿಸಬಹುದು. ಸಾಗಾಟ ವೆಚ್ಚವೂ ಕಡಿಮೆಯಾಗುತ್ತದೆ.

ಒಂದಷ್ಟುರೆಗಳಿವೆ. ಆದರೆ ಇದು ಒಪ್ಪತಕ್ಕ ಸಲಹೆಯೇ. ನಿಟ್ಟಿನಲ್ಲಿ ಕೂಡಲೇ ಅಧ್ಯಯನ ಮತ್ತು ಪ್ರಯತ್ನ ಆರಂಭಿಸುವೆಎನ್ನುತ್ತಾರೆ ನಿಟಿಲೆ.

 

0 comments:

Post a Comment