Tuesday, June 24, 2014

ಕಸಿ ತಜ್ಞ, ಕೃಷಿಕ ವಿಜ್ಞಾನಿ ನಾರಾಯಣ ಕೆದಿಲಾಯರಿಗೆ ಗೌರವ

               ಕಸಿಯಲ್ಲಿ ವಿಶೇಷ ಸಾಧನೆ ಮಾಡಿದ ಕಸಿ ತಜ್ಞ ನಾರಾಯಣ ಕೆದಿಲಾಯ ಆಲಂಕಾರು (92) ಅವರಿಗೆ ಪುಣಚದಲ್ಲಿ ಜೂನ್ ೨೨ರಂದು ಜರುಗಿದ 'ಹಲಸು ಹಬ್ಬ'ದ ಗೌರವ ಸಲ್ಲಿಸಲಾಯಿತು. ವಯೋಸಹಜವಾದ ನಿಶ್ಶಕ್ತಿಯಿಂದಾಗಿ ಹಬ್ಬಕ್ಕೆ ಕೆದಿಲಾಯರು ಬರಲಾಗದ್ದರಿಂದ ಅವರ ಮನೆಯಲ್ಲಿ ಗೌರವಿಸಲಾಯಿತು.
               ಪತ್ರಕರ್ತ, ಅಂಕಣಕಾರ ನಾ. ಕಾರಂತ ಪೆರಾಜೆಯರಿಂದ ಕೆದಿಲಾಯರಿಗೆ ನುಡಿ ಗೌರವ ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ, ಮಲ್ಯ ಶಂಕರನಾರಾಯಣ ಭಟ್, ಉಬರು ರಾಜಗೋಪಾಲ ಭಟ್, ಕಡಂಬಿಲ ಕೃಷ್ಣ ಪ್ರಸಾದರು ಶಾಲು, ಹಣ್ಣುಹಂಪಲು, ಪೇಟ ಮತ್ತು ಗುಣಕಥನ ಫಲಕ ನೀಡಿ ಗೌರವಿಸಿದರು.
              ’ಕೃಷಿಕನಿಗೆ ಉದಾಸೀನ ಇರಬಾರದು. ಅದೇ ದಾರಿದ್ರ್ಯ. ಕೃಷಿಕ ಸಾಲ ಮಾಡದೆ ಬದುಕುವ ಜಾಣ್ಮೆಯನ್ನು ಕರಗತ ಮಾಡಿಕೊಂಡರೆ ಅದಕ್ಕಿಂತ ದೊಡ್ಡ ಶ್ರೀಮಂತಿಕೆ ಬೇರೆ ಇಲ್ಲ” ಎಂದು ಕೆದಿಲಾಯರು ತಮ್ಮ ಬದುಕಿನ ಯಶದ ಖುಷಿಯನ್ನು ಹಂಚಿಕೊಂಡರು. ಅವರ ಚಿರಂಜೀವಿಗಳಾದ ಕೃಷ್ಣ ಕೆದಿಲಾಯ, ಶ್ರೀಹರಿ ಕೆದಿಲಾಯ ಮತ್ತು ಮನೆಯವರು ಉಪಸ್ಥಿತರಿದ್ದರು

0 comments:

Post a Comment