Saturday, June 28, 2014

ಕಾರ್ಕಳ ಹಲಸು ಮೇಳ


 ವೇದಿಕೆ ಮುಂದೆ ಹಲಸಿನ ಅಲಂಕಾರ
 ಸಾಣೂರು ಶಂಕರ ಪ್ರಭುಗಳ ಕೈರುಚಿ - ಹಹ ಕೇಸರಿಬಾತ್

                                  ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಮಳಿಗೆಯಲ್ಲಿ ಹತ್ತಾರು ಉತ್ಪನ್ನಗಳು.

                                                   ಸ್ಥಳದಲ್ಲೇ ವಿವಿಧ ತಿಂಡಿಗಳ ತಯಾರಿ

ತೋಟಗಾರಿಕಾ ಮಹಾವಿದ್ಯಾಲಯದ ತಯಾರಿ. ಡೆಮೋ ಓನ್ಲಿ!

ಇಂದು (28-6-204) ಕಾರ್ಕಳದಲ್ಲಿ ಹಲಸು ಮೇಳ ಜರುಗಿತ್ತು. ಮೇಳದ ಮಾರಾಟ ಮಳಿಗೆಯಲ್ಲಿ 'ರೆಡಿ ಟು ಸರ್ವ್' ಉತ್ಪನ್ನಗಳು ಮೇಳದ ಹೈಲೈಟ್. ಸ್ಥಳದಲ್ಲೇ ಸಿದ್ಧಗೊಳಿಸಿದ ಉತ್ಪನ್ನಕ್ಕೆ ಕೊಳ್ಳುಗರು ಧಾರಾಳ. ಹಲಸಿನ ಚಿಪ್ಸಿನಿಂದ ಪೇಯದ ತನಕ ವಿವಿಧ ಉತ್ಪನ್ನಗಳು. ಕಾಸರಗೋಡು ಕೆ.ವಿ.ಕೆ.ಯವರ ಮಳಿಗೆಯಲ್ಲಿ ಉತ್ಪನ್ನಗಳ ವೈವಿಧ್ಯತೆ. ಮಹಿಳಾ ಗುಂಪುಗಳಿಗೆ ತರಬೇತಿ ನೀಡಿ ಉತ್ಪನ್ನಗಳನ್ನು ತಯಾರಿಸಿದ ಕೆವಿಕೆಯ ಆಹಾರ ವಿಭಾಗ ಉಳಿಕೆ ಕೆವಿಕೆಗಳಿಗೆ ಮಾದರಿ. ಸಾಣೂರಿನ ಶಂಕರ ಪ್ರಭುಗಳ ಮಳಿಗೆಯಲ್ಲಿ ಹಹ ಜ್ಯೂಸ್, ಹಲ್ವ, ಕೇಸರಿಬಾತ್, ಗಟ್ಟಿ., ಶಿರಸಿಯ ಕದಂಬದ ಮಳಿಗೆ, ಶಿರಸಿ ತೋಟಗಾರಿಕಾ ವಿದ್ಯಾಲಯದ ಮಳಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಘಟಕಗಳ ಮಳಿಗೆ..ಗಳಲ್ಲಿ ಆಹಾರ ವೈವಿಧ್ಯ. ಪ್ರಾಯಃ ಇದುವರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಜರುಗಿದ ಹಲಸು ಮೇಳಗಳಲ್ಲಿ ಮಳಿಗೆಗಳು 'ಲೈವ್' ಆಗಿ ಇದ್ದಿರುವುದು ಇದು ಮೊದಲೇನೋ!

0 comments:

Post a Comment