Monday, January 26, 2015

ಕೃಷಿ ಯಂತ್ರ ಮೇಳ ಸಮಾರೋಪ ; ’ವಾರಣಾಸಿ ಸುಬ್ರಾಯ ಭಟ್ ಪ್ರಶಸ್ತಿ’ ಪ್ರದಾನ



                "ಕೃಷಿ ಕ್ಷೇತ್ರ ಇನ್ನಷ್ಟು ಆಧುನೀಕರಣವಾಗಬೇಕು, ಯಂತ್ರಗಳ ಬಳಕೆ ಹೆಚ್ಚಾಗಬೇಕು. ಯುವಕರು  ಕೃಷಿ ಕ್ಷೇತ್ರದತ್ತ ಆಗಮಿಸುವಂತಾಗಬೇಕು ಇದು  ಕ್ಯಾಂಪ್ಕೋ ಉದ್ದೇಶ.  ಈ ಹಿನ್ನೆಲೆಯಲ್ಲಿ  ಕೃಷಿಯಂತ್ರ ಮೇಳ ಆಯೋಜನೆಯಾಗಿದೆ. ಈಗ ಯಂತ್ರಮೇಳ ಯಶಸ್ವಿಯಾಗಿದೆ" ಎಂದು  ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು.
ಅವರು ಸೋಮವಾರ ಕ್ಯಾಂಪ್ಕೋ ವತಿಯಿಂದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದೊಂದಿಗೆ ಮೂರನೇ ಕೃಷಿಯಂತ್ರ ಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
                   ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ ಯಂತ್ರಮೇಳದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.ವೇದಿಕೆಯಲ್ಲಿ  ಕ್ಯಾಂಪ್ಕೋ ಉಪಾದ್ಯಕ್ಷ ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್, ಎಆರ್ಡಿಎಫ್ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಕೇಶವ ಭಟ್ ಉಪಸ್ಥಿತರಿದ್ದರು.
               ವಿವೇಕಾನಂದ ಪಾಲಿಟೆಕ್ನಿಕ್ ಅಧ್ಯಕ್ಷ ಎವಿ ನಾರಾಯಣ ಸ್ವಾಗತಿಸಿ, ಕ್ಯಾಂಪ್ಕೋ ನಿರ್ದೇಶಕ ಚಣಿಲ ತಿಮ್ಮಪ್ಪ ಶೆಟ್ಟಿ ವಂದಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿಬಂದಿ  ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಯಂತ್ರ ಸಂಶೋಧಿಸಿದ ವಿದ್ಯಾರ್ಥಿಗಳ ಯಂತ್ರಗಳಿಗೆ ವಾರಣಾಸಿ ಸುಬ್ರಾಯ ಭಟ್ ಬಹುಮಾನ ನೀಡಿ ಗೌರವಿಸಲಾಯಿತು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಸಂಶೋಧಿಸಿದ ’ಅಡಿಕೆ ಕೀಳುವ ಹಾಗೂ ಔಷಧಿ ಸಿಂಪಡಿಸುವ ಯಂತ್”ಕ್ಕೆ ಪ್ರಥಮ ಬಹುಮಾನ ಐವತ್ತು ಸಾವಿರ ರೂಪಾಯಿಯೊಂದಿಗೆ ನೀಡಲಾಯಿತು. ಎಸ್ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು  ಸಂಶೋಧಿಸಿದ ’ಅಡಿಕೆ ತೆಗೆಯುವ ಯಂತ್”ಕ್ಕೆ ದ್ವಿತೀಯ ಬಹುಮಾನವನ್ನು  25 ಸಾವಿರ ರೂಪಾಯಿಯೊಂದಿಗೆ ನೀಡಲಾಯಿತು. ವಿವೇಕಾನಂದ ಶಾಲೆಯ ಪುಟಾಣಿ ವಿದ್ಯಾರ್ಥಿಗಳ ಸಂಶೋಧನೆಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
                ಇದೇ ವೇಳೆ ಯಂತ್ರ ಸಂಶೋಧಿಸಿದ ಕೃಷಿಕರನ್ನು  ಗೌರವಿಸಲಾಯಿತು. ರೋಬೋಟ್ ತಯಾರಿಸಿದ ಗಣೇಶ್ ಶೆಟ್ಟಿ, ಸ್ಪ್ರೇಯರ್ ತಯಾರಿಸಿದ ಸುಬ್ರಹ್ಮಣ್ಯ ಹೆಗ್ಡೆ, ಕ್ಲೈಂಬರ್ ತಯಾರಿಸಿದ  ನಿತಿನ್ ಹೇರಳೆ, ಡೈನೆಮೋ ತಯಾರಿಸಿದ ಗಣೇಶ್ ಆಚಾರ್ಯ, ವಾಟರ್ ಲಿಫ್ಟರ್ ತಯಾರಿಸಿದ ಮೋಹನ್ ರಾಜ್, ಅಡಿಕೆ ಸುಲಿಯುವ ಯಂತ್ರ ತಯಾರಿಸಿದ ಜೋಯ್ ಅಗಸ್ಟಿನ್ ಅವರನ್ನು  ಗೌರವಿಸಲಾಯಿತು.

ವರದಿ ಕ್ರಪೆ : ಹರ್ಶಿತಾ ಎಂ.ಪಿ.

0 comments:

Post a Comment